Health tips: ವೈದ್ಯರಾದ ಡಾ.ಆಂಜೀನಪ್ಪ ಅವರು, ಜಂತುಹುಳುವಿನ ಬಗ್ಗೆ, ಅದರಲ್ಲಿ ಎಷ್ಟು ವಿಧಗಳಿದೆ ಎನ್ನುವ ಬಗ್ಗೆ ಮತ್ತು ಜಂತುಹುಳವಿರುವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಗಳು ಏನೇನು ಅನ್ನುವ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು, ನಮ್ಮ ಹೊಟ್ಟೆಯೊಳಗಿರುವ ಹುಳಗಳು ಮೊಟ್ಟೆ ಇಡುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಜಂತುಹುಳುವಿನಲ್ಲಿ ಹಲವಾರು ಬಗೆ ಇದೆ. ಚಿಕ್ಕ ಮಕ್ಕಳಲ್ಲಿ ಪಿನ್ ವಾರ್ಮ್ ಇರುತ್ತದೆ. ದೊಡ್ಡವರಲ್ಲಿ ಹುಕ್ ವಾರ್ಮ್ ಇರುತ್ತದೆ. ಅಂದ್ರೆ ಕೊಕ್ಕೆ ಹುಳು ಎಂದರ್ಥ. ಈ ಕೊಕ್ಕೆ ಹುಳುವಿನಿಂದಲೇ, ನಮಗೆ ಅನೇಮಿಯಾ ಬರುತ್ತದೆ. ಹಾಗಾಗಿ ವೈದ್ಯರ ಸಲಹೆ ತೆಗೆದುಕೊಂಡು, ವರ್ಷಕ್ಕೆ ಎರಡು ಬಾರಿ ಜಂತಿನ ಮಾತ್ರೆ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.
ಇನ್ನು ಕೊಕ್ಕೆಹುಳುವಿನಿಂದ ಅನೆಮಿಯಾ ಹೇಗೆ ಬರುತ್ತದೆ ಎಂದರೆ, ಒಂದು ಕೊಕ್ಕೆಹುಳು 0.2 ಎಂಎಲ್ ರಕ್ತ ಕುಡಿಯುತ್ತದೆ. ಇಂಥ ಕೊಕ್ಕೆಹುಳು ಸಾವಿರಾರು ಸಂಖ್ಯೆಯಲ್ಲಿ ನಮ್ಮ ದೇಹದಲ್ಲಿರುತ್ತದೆ. ಆ ಕೊಕ್ಕೆ ಹುಳುಗಳು 25 ಸಾವಿರಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ.
ಇನ್ನು ಗೊಬ್ಬರ ಮೆಟ್ಟಿದಾಗ, ಅಥವಾ ಗೊಬ್ಬರವನ್ನು ಹಿಡಿದಾಗ, ಲಾರ್ವ ಎನ್ನುವ ಹುಳು ನಮಗೆ ಕಚ್ಚುತ್ತದೆ. ಹೀಗೆ ಇದು ನಮ್ಮ ದೇಹ ಸೇರುತ್ತದೆ. ಇದು ಕೂಡ ಜಂತುಹುಳುವೇ, ಇದರಿಂದಲೂ ನಮಗೆ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆ. ಹಾಗಾಗಿ ವೈದ್ಯರ ಮಾಹಿತಿ ಮೇರೆಗೆ, ಜಂತಿನ ಗುಳಿಗೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..




