Covid Positive ಆಗಿತ್ತಾ..? ಹಾಗಾದ್ರೆ Be carefull..

Health tips: ಇತ್ತೀಚೆಗೆ ಹಲವು ಯುವ ಪೀಳಿಗೆಯವರು, ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ, ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಯಾಕೆ ಹೃದಯದ ಖಾಯಿಲೆ ಬರುತ್ತಿದೆ..? ಇದಕ್ಕೆ ಕೋವಿಡ್ ಕಾರಣಾನಾ..? ಈ ಬಗ್ಗೆ ವೈದ್ಯರಾದ ಡಾ.ಆಂಜಿನಪ್ಪ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ಕೋವಿಡ್ ವೈರಸ್ ಯಾರಿಗೆ ಬಂದು ಹೋಗಿರುತ್ತದೆಯೋ, ಅಂಥವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿಯೇ, ಯಾರಾದರೂ ದೇಹಕ್ಕೆ ದಣಿವು ನೀಡುವ ಕೆಲಸವಾಗಲಿ, ವಾಕಿಂಗ್, ವ್ಯಾಯಾಮವಾಗಲಿ, ಮಿತವಾಗಿ ಮಾಡಬೇಕು ಅಂತಾ ಹೇಳುವುದು. ಅಗತ್ಯಕ್ಕಿಂತ ಹೆಚ್ಚು ಜಿಮ್ ಮಾಡುವವರು, ದೇಹಕ್ಕೆ ದಣಿವಾಗುವಷ್ಟು ಕೆಲಸ ಮಾಡುವವರು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ನೀವು ಕಾಣಬಹುದು.

ಇನ್ನು ಇಂದಿಗೂ ಕೂಡ ಕೋವಿಡ್ ಇದೆ. ಆದರೆ ಬೇರೆ ರೂಪದಲ್ಲಿದೆ. ವೈರಸ್ ಇದ್ದ ಹಾಗೆ ಇರುವುದಿಲ್ಲ. ಅವು ರೂಪಾಂತರಗೊಳ್ಳುತ್ತದೆ. ಹಾಗಾಗಿ ನಾವು ಸದಾ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನವನ್ನು ಕೊಡಲೇಬೇಕಾಗಿದೆ. ಇನ್ನು ಹಲವರಿಗೆ ವ್ಯಾಕ್ಸಿನ್ ಬಗ್ಗೆ ತಪ್ಪು ಅಭಿಪ್ರಾಯಗಳಿದೆ. ವ್ಯಾಕ್ಸಿನ್ ತೆಗೆದುಕೊಂಡವರಿಗೆ ಹೆಚ್ಚು ಹಾರ್ಟ್ ಅಟ್ಯಾಕ್ ಬರುತ್ತಿದೆ ಎಂದು.

ಇದು ತಪ್ಪು ಅಭಿಪ್ರಾಯ. ವ್ಯಾಕ್ಸಿನ್ ತೆಗೆದುಕೊಂಡವರ ಆರೋಗ್ಯ ಹಾಳಾಗಿಲ್ಲ. ವ್ಯಾಕ್ಸಿನ್ ಬರೀ ಕೋವಿಡ್ ವೈರಸ್ ಸಾಯಿಸಲು ಮಾತ್ರ ಬಳಸಲಾಗುತ್ತದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆನೂ ಪರಿಣಾಮವಾಗುವುದಿಲ್ಲ.ಹಾಗಾಗಿ ವ್ಯಾಕ್ಸಿನ್ ಹಾಕಿಸಿಕೊಂಡವರು, ಹೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಇನ್ನು ನಮ್ಮ ಆಹಾರ ಪದ್ಧತಿ, ನೀರು ಕುಡಿಯುವುದೆಲ್ಲ ಸರಿಯಾಗಿ ಇರಬೇಕು. ಹೃದಯದ ಆರೋಗ್ಯದ ಬಗ್ಗೆ ಗಮನ ವಹಿಸುವುದು ಕೂಡ ಮುಖ್ಯವಾಗಿರುತ್ತದೆ. ಕೋವಿಡ್ ಬಗ್ಗೆ, ಹೃದಯದ ಆರೋಗ್ಯದ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

About The Author