Recipe: ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು, ಭಾರತೀಯ ಶೈಲಿಯ ರಸಂ ತಯಾರಿಸಿ ಸವಿಯಬಹುದು. ಇದು ನಾಲಿಗೆಗೆ ರುಚಿ ನೀಡುವುದಲ್ಲದೇ, ದೇಹಕ್ಕೆ ಆರೋಗ್ಯವೂ ನೀಡುತ್ತದೆ. ಹಾಗಾದ್ರೆ ರುಚಿಕರ, ಆರೋಗ್ಯಕರ ಪೆಪ್ಪರ್ ರಸಂ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಸ್ಪೂನ್ ಪೆಪ್ಪರ್, 2 ಸ್ಪೂನ್ ಜೀರಿಗೆ, 5ರಿಂದ 6 ಬೆಳ್ಳುಳ್ಳಿ ಎಸಳು, 2 ಟೊಮೆಟೋ, ಅರ್ಧ ಕಪ್ ಹುಣಸೆ ರಸ, 2 ಹಸಿಮೆಣಸು, 2 ಸ್ಪೂನ್ ಎಣ್ಣೆ, ಒಗ್ಗರಣೆಗೆ ಸಾಸಿವೆ, ಹಿಂಗು, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಒಣಮೆಣಸು, ಕೊತ್ತೊಂಬರಿ ಸೊಪ್ಪು, ಕೊಂಚ ಅರಿಶಿನ, ಸಿಹಿ ಬೇಕಾಗಿದ್ದಲ್ಲಿ ಬೆಲ್ಲ, ಉಪ್ಪು.
ಮಾಡುವ ವಿಧಾನ: ಮೊದಲು ಪೆಪ್ಪರ್, ಜೀರಿಗೆ, ಬೆಳ್ಳುಳ್ಳಿ ಸೇರಿಸಿ, ಚೆನ್ನಾಗಿ ಕುಟ್ಟಿ ಪುಡಿ ಮಾಡಿ. ಬಳಿಕ ಮಿಕ್ಸಿ ಜಾರ್ನಲ್ಲಿ ಹಸಿಮೆಣಸು, ‘ಟೊಮೆಟೋ ಹಾಕಿ ಪೇಸ್ಟ್ ತಯಾರಿಸಿ. ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ, ಸಾಸಿವೆ, ಹಿಂಗು, ಒಣಮೆಣಸು, ಉದ್ದಿನ ಬೇಳೆ, ಕರಿಬೇವು, ಬಳಿಕ ಪೆಪ್ಪರ್-ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಪೇಸ್ಟ್, ಹುಣಸೆ ರಸ, ಉಪ್ಪು, ಅರಿಶಿನ, ಬೆಲ್ಲ ನೀರು ಹಾಕಿ ಚೆನ್ನಾಗಿ ಕುದಿಸಿದರೆ, ರಸಂ ರೆಡಿ.
ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?




