Health Tips: ಮೊದಲೆಲ್ಲ ಅನ್ನವನ್ನು ಆರೋಗ್ಯಕರವಾಗಿ ಮಾಡುತ್ತಿದ್ದರು. ಈಗಲೂ ಕೆಲ ಮನೆಗಳಲ್ಲಿ ಗಂಜಿ ಬಸಿದು ಅನ್ನ ತಯಾರಿಸುತ್ತಾರೆ. ಇಂಥ ಅನ್ನಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲಸಕ್ಕೆ ಹೋಗುವ ಹಲವರು, ಅನ್ನ ಬೇಯಿಸಲು ಸಮಯವಾಗುತ್ತದೆ ಎಂದು ಕುಕ್ಕರ್ನಲ್ಲಿ ಅನ್ನ ಬೇಯಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದೋ..? ಕೆಟ್ಟದ್ದೋ ಅನ್ನೋ ಬಗ್ಗೆ ಆರೋಗ್ಯ ತಜ್ಞೆ ಡಾ.ಪ್ರೇಮಾ ವಿವರಿಸಿದ್ದಾರೆ ನೋಡಿ..
ಕುಕ್ಕರ್ ಸರಿಯಾದ ರೀತಿಯಲ್ಲಿ ಬಳಸಿ, ಅನ್ನ ಮಾಡಿ, ಸೇವಿಸಿದರೆ, ಆ ಅನ್ನ ಆರೋಗ್ಯಕರವಾಗಿರುತ್ತದೆ. ಆದರೆ ಕುಕ್ಕರ್ನಲ್ಲಿ ಮೂರು ವಿಶಲ್ ಬರ್ತಿದ್ದಂತೆ, ನಾವೆಲ್ಲ ಗ್ಯಾಸ್ ಆಫ್ ಮಾಡುತ್ತೇವೆ. ಇದು ತಪ್ಪು ಅಂತಾರೆ ವೈದ್ಯರು. ಏಕೆಂದರೆ, ಕುಕ್ಕರ್ನಲ್ಲಿ ಅನ್ನ ಸರಿಯಾಗಿ ಬೇಯದ ಕಾರಣ, ಅರ್ದಂಬರ್ಧ ಬೆಂದ ಅನ್ನವನ್ನು ನಾವು ಸರಿಯಾಗಿ ಅಗಿದು ತಿನ್ನದೇ ಇರುವ ಕಾರಣ್ಕಕೆ, ನಮಗೆ ಆರೋಗ್ಯ ಹಾಳಾಗುತ್ತದೆ. ಆದರೆ ಅನ್ನ ಸೇವನೆಯಿಂದ ಯಾವುದೇ ಆರೋಗ್ಯ ಹಾನಿಯಾಗುವುದಿಲ್ಲ.
ಹಾಗಾಗಿ ಅಕ್ಕಿಯನ್ನು ನೀರಿನಲ್ಲಿ ಬೇಯಿಸಿ, ಗಂಜಿ ಬಸಿದು ಅನ್ನ ಸೇವಿಸಬಹುದು. ಆಗ ಅನ್ನ ಸರಿಯಾಗಿ ಬೆಂದಿರುತ್ತದೆ. ಅಂಥ ಅನ್ನ ಸೇವನೆಯಿಂದ ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಇನ್ನು ಕುಕ್ಕರ್ನಲ್ಲಿ ಅನ್ನ ತಯಾರಿಸುವಾಗ, ಹೆಚ್ಚು ನೀರು ಹಾಕಿ, ಹೆಚ್ಚು ಅನ್ನವನ್ನು ಬೇಯಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




