ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

Movie News: ನಟಿ ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮನೆ ಮಹಾಲಕ್ಷ್ಮೀ ಎಂದು ಟ್ಯಾಗ್ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅದಿತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

2022ರ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2024ರ ಜನವರಿಯಲ್ಲಿ ಅದಿತಿ ತಾಯಿಯಾಗುತ್ತಿದ್ದಾರೆಂಬ ಶುಭಸುದ್ದಿ ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ಅದಿತಿ ಸೀಮಂತ ಅದ್ಧೂರಿಯಾಗಿ ನೆರವೇರಿತ್ತು. ರವಿವರ್ಮನ ಪೇಂಟಿಂಗ್ ಸ್ಟೈಲ್‌ನಲ್ಲಿ, ಟ್ರೇಡಿಶನಲ್ ಸ್ಟೈಲ್‌ನಲ್ಲಿ ಅದಿತಿ ಫೋಟೋ ಶೂಟ್ ಮಾಡಿಸಿದ್ದರು. ಇದೀಗ ಹೆಣ್ಣು ಮಗುವಿಗೆ ಅದಿತಿ ತಾಯಿಯಾಗಿದ್ದಾರೆ.

ಈ ವಿಚಾರವನ್ನು ನಾಲ್ಕು ದಿನ ತಡವಾಗಿ ಹಂಚಿಕೊಂಡಿರುವ ಅದಿತಿ, 4-4-2024, ನಮ್ಮ ಮನೆಯ ಮಹಾಲಕ್ಷ್ಮೀ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಅಂತಾ ವಿಶ್ ಮಾಡಿದ್ದಾರೆ. ಈ ಮೂಲಕ ಹೊಸ ಕ್ಯಾಲೆಂಡರ್‌ ವರ್ಷಕ್ಕೆ ಅದಿತಿ ತಾಯಿಯಾಗುವ ಸಹಿ ಸುದ್ದಿ ಕೊಟ್ಟರೆ, ಹಿಂದೂಗಳ ಹೊಸ ವರ್ಷಕ್ಕೆ ಯಾವ ಮಗು ಎನ್ನುವ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.

ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ: ಗೋಮಾಂಸ ಇಷ್ಟವೆಂಬ ಆರೋಪಕ್ಕೆ ಕಂಗನಾ ತಿರುಗೇಟು..

ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ: ಅಶ್ವಿನಿ ಪುನೀತ್ ಪರ ನಿಂತ ಸಿಎಂ

ಹೆಣ್ಣಿಗೆ ಗೌರವ ಸಿಗೋದು ಒಂದು ಕನಸು ಅಷ್ಟೇ: ಅಶ್ವಿನಿ ಪರ ನಿಂತ ಆ್ಯಂಕರ್ ಅನುಶ್ರೀ..

About The Author