Saturday, July 5, 2025

Latest Posts

ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ..

- Advertisement -

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಚಕ್ಕುಲಿ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..

ಬೇಕಾಗುವ ಸಾಮಗ್ರಿ: 1 ಕಪ್ ಉದ್ದಿನ ಬೇಳೆ, 2 ಕಪ್ ಅಕ್ಕಿ ಹಿಟ್ಟು, 3 ಸ್ಪೂನ್ ಬೆಣ್ಣೆ, ಚಿಟಿಕೆ ಜೀರಿಗೆ, 1 ಸ್ಪೂನ್ ಹುರಿದ ಎಳ್ಳು, ಕಾಲು ಸ್ಪೂನ್ ಓಮ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಗಣೇಶನ ನೈವೇದ್ಯಕ್ಕೆ ಉತ್ತರ ಭಾರತದ ಸ್ಪೆಶಲ್ ಸ್ವೀಟ್ ಚೂರ್ಮಾ ಲಡ್ಡು ಮಾಡಿ ನೋಡಿ..

ಮಾಡುವ ವಿಧಾನ: ಮೊದಲನೇಯದಾಗಿ ನೀವು ಅಕ್ಕಿ ಹಿಟ್ಟನ್ನು ಮನೆಯಲ್ಲೇ ಮಾಡಿಕೊಳ್ಳುವುದು ಉತ್ತಮ. ಅಕ್ಕಿಯನ್ನು 4 ಗಂಟೆ ನೆನೆ ಹಾಕಿ, ರುಬ್ಬಿ ಅಕ್ಕಿಹಿಟ್ಟು ತಯಾರಿಸಿ. ಈಗ ಉದ್ದಿನ ಬೇಳೆಯನ್ನು ಘಮ ಬರುವವರೆಗೂ ಹುರಿದು ಪುಡಿ ಮಾಡಿ. ಈ ಹಿಟ್ಟನ್ನು ಕೂಡ ಅಕ್ಕಿ ಹಿಟ್ಟಿಗೆ ಸೇರಿಸಿ.

ಕರ್ಚಿಕಾಯಿಯನ್ನು ಈ ರೀತಿ ಮಾಡಿದ್ದಲ್ಲಿ ಹೆಚ್ಚು ಟೇಸ್ಟಿಯಾಗಿರತ್ತೆ ನೋಡಿ..

ಹೀಗೆ ಸೇರಿಸುವಾಗ, ಎಳ್ಳು, ಓಮ, ಜೀರಿಗೆ, ಬೆಣ್ಣೆ ಮತ್ತು ಉಪ್ಪು ಹಾಕಿ, ಚಕ್ಕುಲಿ ಹಿಟ್ಟು ಕಲೆಸಿ. ಈ ಹಿಟ್ಟು ಹೆಚ್ಚು ಮೆದುವಾಗಲೂಬಾರದು ಹೆಚ್ಚು ಗಟ್ಟಿಯಾಗಿರಲೂಬಾರದು. ಈಗ ಚಕ್ಕುಲಿ ಅಚ್ಚಿಗೆ ಎಣ್ಣೆ ಸವರಿ, ಸರಿಯಾಗಿ ಚಕ್ಕುಲಿ ಹಿಟ್ಟನ್ನು ತುಂಬಿಸಿ. ಚಕ್ಕುಲಿ ಮಾಡಿ, ಗೋಲ್ಡನ್ ಬ್ರೌನ್ ಆಗುವವರೆಗೂ ಕರಿದರೆ, ಚಕ್ಕುಲಿ ರೆಡಿ. ನಿಮಗೆ ಬೇಕಾದಲ್ಲಿ ನೀವು ಇದಕ್ಕೆ ಖಾರದ ಪುಡಿ ಬಳಸಬಹುದು.

- Advertisement -

Latest Posts

Don't Miss