Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಆದರೆ ಗರುಡ ಪುರಾಣದ ಪ್ರಕಾರ, ಕೊನೆಗಾಲದಲ್ಲಿ ಅಪ್ಪ ಅಮ್ಮನನ್ನು ನೋಡಿಕೊಳ್ಳದೇ, ಮನೆಯಿಂದ ಹೊರಹಾಕಿದರೆ, ಕಠೋರ ಶಿಕ್ಷೆ ಸಿಗುತ್ತದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಹಿರಿಯರು ಹೇಳುವ ಪ್ರಕಾರ, ಹಿರಿಯರಿಗೆ ನೀವು ಶಿಕ್ಷೆ ನೀಡಿದರೆ, ಮನಸ್ಸು ನೋಯಿಸಿದರೆ, ಅದು ದೇವರಿಗೆ ಶಿಕ್ಷೆ ನೀಡಿದಂತೆ. ಅದೇ ನೀವು ಹಿರಿಯರ ಸೇವೆ ಮಾಡಿದರೆ, ದೇವರ ಸೇವೆ ಮಾಡಿದಂತೆ ಎಂದು ಹೇಳಿದ್ದಾರೆ. ಹಾಗಾಗಿ ತಂದೆ ತಾಯಿ ಅಥವಾ ಅತ್ತೆ ಮಾವ ಯಾರೇ ಆಗಲಿ, ಅಂಥವರು ವೃದ್ಧರಾದಾಗ, ಅವರ ಸೇವೆ ಮಾಡುವುದು ಮಕ್ಕಳ ಕರ್ತವ್ಯ. ಅವರಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡುವುದು. ಮಾತ್ರೆ ಕೊಡುವುದು. ಇರಲು ಸರಿಯಾದ ವ್ಯವಸ್ಥೆ, ಹಾಕಲು ಬಟ್ಟೆ, ಎಲ್ಲವೂ ಕೂಡುವುದು ಮಕ್ಕಳ ಕರ್ತವ್ಯ. ಜೊತೆಗೆ ಸೌಜನ್ಯದ ಮಾತನ್ನಾಡುವುದು ಕೂಡ ಮಕ್ಕಳ ಕರ್ತವ್ಯವೇ.
ಆದರೆ ಯಾವ ಮಕ್ಕಳು ತಂದೆ ತಾಯಿ ವೃದ್ಧರಾದಾಗ, ಅವರಿಗೆ ಹೊಡೆಯುತ್ತಾರೋ, ಯಾರು ಸರಿಯಾಗಿ ಊಟ ಹಾಕುವುದಿಲ್ಲವೋ, ಯಾರು ಅವರಿಗೆ ಹಿಂಸೆ ನೀಡುತ್ತಾರೋ, ಅಂಥವರಿಗೆ ನರಕದಲ್ಲಿ ಕಠಿಣ ಶಿಕ್ಷೆ ಕೊಡಲಾಗುತ್ತದೆ. ನರಕದ ಅಗ್ನಿಯಲ್ಲಿ ಅವರನ್ನು ಸುಡಲಾಗುತ್ತದೆ. ಅಲ್ಲದೇ, ಕುದುರೆಯಿಂದ ಹೊಡಿಸಲಾಗುತ್ತದೆ. ಕತ್ತಿಯಿಂದ ಹೊಡೆದು ಶಿಕ್ಷಿಸಲಾಗುತ್ತದೆ.
ಹಾಗಾದ್ರೆ ಯಾಕೆ ನಾವು ತಂದೆ ತಾಯಿಗೆ ಕೊನೆಗಾಲದಲ್ಲಿ ಪ್ರೀತಿ, ಕಾಳಜಿಯಿಂದ ಸಾಕಬೇಕು ಎಂದಲ್ಲಿ, ಅವರು ನಿಮ್ಮನ್ನು ಹೆತ್ತು ಹೊತ್ತು, ಸಾಕಿ ಸಲಹುತ್ತಾರೆ. ತಮ್ಮ ಸಮಯ, ಪ್ರೀತಿ, ಕಾಳಜಿ ಎಲ್ಲ ನಿಮಗಾಗಿ ಮೀಸಲಿಡುತ್ತಾರೆ. ನಿಮಗೆ ಎತ್ತಿಕೊಂಡು ತಿರುಗುತ್ತಾರೆ. ನೀವು ಮಾಡಿದ ಗಲೀಜನ್ನೆಲ್ಲ ಒಂಚೂರು ಬೇಸರ ಮಾಡಿಕೊಳ್ಳದೇ, ಸ್ವಚ್ಛಮಾಡುತ್ತಾರೆ. ನಡೆಯುವಾಗ ಎಲ್ಲಿ ನೀವು ಎಡವುತ್ತೀರಿ ಎಂದು, ಸದಾ ನಿಮ್ಮೊಂದಿಗೆ ಇರುತ್ತಾರೆ. ಅವರ ಕೊನೆಗಾಲದಲ್ಲಿ ಅವರು ಕೂಡ ಮಗುವಂತೆ ಆಗುತ್ತಾರೆ. ಆಗ ಮಕ್ಕಳ ಜಾಗದಲ್ಲಿ ನಿಂತು ಅವರನ್ನು ಕಾಳಜಿಯಿಂದ ಕಾಣುವ ಸಮಯ ನಿಮ್ಮದಾಗಿರುತ್ತದೆ. ಅವರು ನಿಮ್ಮನ್ನೆಷ್ಟು ಪ್ರೀತಿ, ಕಾಳಜಿಯಿಂದ ಕಂಡಿದ್ದಾರೋ, ಅಷ್ಟೇ ಪ್ರೀತಿ ಕಾಳಜಿಯಿಂದ ನೀವು ಅವರನ್ನು ಕಾಣಬೇಕು. ಆಗಲೇ ದೇವರ ಕೃಪೆಗೆ ನೀವು ಪಾತ್ರರಾಗುವುದು.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..