Saturday, October 19, 2024

Latest Posts

ಬ್ಯೂಟಿ ಪಾರ್ಲರ್ನಲ್ಲಿ ಸಿಗುವಂಥ ಲುಕ್ ಮನೆಯಲ್ಲೇ ಗಳಿಸಿ..

- Advertisement -

ಕೆಲವರಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿ, ಅಲ್ಲಿ ಮಾಡುವ ಫೇಶಿಯಲ್, ಬ್ಲೀಚಿಂಗ್ ಮಾಡಿಸಿಕೊಂಡರೆನೇ, ಸೌಂದರ್ಯ ಹೆಚ್ಚೋದು ಅನ್ನೋ ಭ್ರಮೆ ಇದೆ. ಆದ್ರೆ ಅದರಿಂದ ನಿಮ್ಮ ಮುಖದ ಅಂದ ಹಾಳಾಗತ್ತೆ. ಕಳೆ ಕುಂದಿಹೋಗತ್ತೆ. ಹಾಗಾಗಿ ಮನೆಯಲ್ಲೇ ತಯಾರಿಸಿದ, ಫೇಸ್‌ಪ್ಯಾಕ್ ಬಳಸಿಕೊಂಡು, ಅಥವಾ ಮನೆಮದ್ದು ಮಾಡಿಯೇ, ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ನಿಮಗೆ ಬ್ಯೂಟಿ ಪಾರ್ಲರ್‌ನಲ್ಲಿ ಸಿಗುವಂಥ ಗ್ಲೋ ಮನೆಯಲ್ಲೇ ಸಿಗಬೇಕಂದ್ರೆ, ನೀವು ಸೋಪ್‌ನಿಂದ ಸ್ನಾನ ಮಾಡುವುದನ್ನ ನಿಲ್ಲಿಸಿ. ಕೊಂಚ ಕಡಲೆ ಹಿಟ್ಟು ಮತ್ತು ಹಾಲನ್ನ ಸೇರಿಸಿ, ಅರ್ಧ ಗಂಟೆ ನೆನೆಸಿಡಿ. ನಂತರ ಅದನ್ನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ. ರಾತ್ರಿ ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಅದರಿಂದ ಸ್ನಾನ ಮಾಡಿ. ಮುಖಕ್ಕೆ ಅದರ ಫೇಸ್‌ಪ್ಯಾಕ್ ಹಾಕಿ, 15 ನಿಮಿಷದ ಬಳಿಕ ಮುಖ ತೊಳೆಯಿರಿ.

ಹಸುವಿನ ಹಸಿ ಹಾಲನ್ನ ತೆಗೆದುಕೊಂಡು ಮುಖಕ್ಕೆ ಹಚ್ಚಿ, ಕೊಂಚ ಹೊತ್ತು ಬಿಟ್ಟು, ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ಮುಖದಲ್ಲಿರುವ ಕೊಳೆ ಹೊರಗೆ ಬರುತ್ತದೆ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನೀವು ಮುಖಕ್ಕೆ ಫೇಸ್‌ವಾಶ್ ಬಳಸುವ ಬದಲು, ಹೆಸರು ಕಾಳಿನ ಪುಡಿ ಬಳಸಿ. ಹೆಸರು ಕಾಳನ್ನ ಚೆನ್ನಾಗಿ ಪುಡಿ ಮಾಡಿ, ಡಬ್ಬದಲ್ಲಿ ಹಾಕಿಡಿ. ಇದರಿಂದ ಪ್ರತಿದಿನ ಒಂದು ಬಾರಿ ಮುಖ ತೊಳೆದರೆ ಸಾಕು, ಮುಖದಲ್ಲಿರುವ ಕೊಳೆ, ಕೆಲ ಎರಡೂ ಮಾಯವಾಗುತ್ತದೆ.

ನೀವು ಇದಿಷ್ಟೇ ಮಾಡಿದ್ರೆ ಸಾಲಲ್ಲ. ಚೆನ್ನಾಗಿ ನೀರು ಕುಡಿಯಿರಿ, 8 ಗಂಟೆ ನಿದ್ರಿಸಿ. ಕರಿದ ಪದಾರ್ಥ ತಿನ್ನಬೇಡಿ. ಮಸಾಲೆಯುಕ್ತ ಪದಾರ್ಥ ಸೇವನೆ ಕಡಿಮೆ ಮಾಡಿ. ತರಕಾರಿ ಹಣ್ಣು ಹಂಪಲು ಚೆನ್ನಾಗಿ ತಿನ್ನಿ. ವಾಕಿಂಗ್, ಯೋಗ, ಧ್ಯಾನ ಮಾಡಿದ್ರೆ, ನೀವು ಯಂಗ್ ಆಗಿ, ಚೆಂದವಾಗಿ ಕಾಣ್ತೀರಾ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

- Advertisement -

Latest Posts

Don't Miss