Sunday, September 8, 2024

Latest Posts

ನ್ಯಾಚುರಲ್ ಆಗಿ ಎದೆಯ ಗಾತ್ರವನ್ನು ಹೆಚ್ಚಿಸುವುದು ಹೇಗೆ..?

- Advertisement -

Health: ಹಲವು ಹೆಣ್ಣು ಮಕ್ಕಳು, ವಯಸ್ಸಿಗೆ ಬಂದರೂ, ಋತುಮತಿಯಾದರೂ ಎದುರಿಸುವ ಸಮಸ್ಯೆ ಎಂದರೆ, ಸಣ್ಣ ಸ್ತನದ ಸಮಸ್ಯೆ. ಈ ಬಗ್ಗೆ ಹೇಳಿಕೊಳ್ಳುವುದಕ್ಕೆ, ಮತ್ತು ವಿವರಿಸುವುದಕ್ಕೆ ಹಲವರು ಮುಜುಗರ ಪಡುವುದು ನಿಜ. ಆದರೆ, ಇದು ಆರೋಗ್ಯದ ವಿಷಯವಾಗಿರುವುದರಿಂದ, ಇಂದು ನಾವು ಎದೆಯ ಗಾತ್ರವನ್ನು ನ್ಯಾಚುರಲ್ ಆಗಿ ಹೆಚ್ಚಿಸುವುದು ಹೇಗೆ ಎಂದು ಹೇಳಲಿದ್ದೇವೆ.

ಮೊದಲನೇಯದಾಗಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗದಂತೆ ತಡೆಯಬೇಕು. ಇದಕ್ಕಾಗಿ ಉತ್ತಮ ನಿದ್ದೆ ಮಾಡಬೇಕು. ಸರಿಯಾದ ಆಹಾರ ಸೇವಿಸಬೇಕು. ಶಿಶು ಹೊಟ್ಟೆಯಲ್ಲಿರುವಾಗ, ತಾಯಿ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸದಿದ್ದಲ್ಲಿ, ಮದ್ಯಪಾನ, ಧೂಮಪಾನ ಮಾಡಿದ್ದಲ್ಲಿ, ಅಥವಾ ಆಕೆಗೆ ಬೇಕಾದ ಪೋಷಕಾಂಶ ವಿರದಿದ್ದಲ್ಲಿ, ಮಗುವಿನ ಎದೆಯ ಭಾಗ ಚಪ್ಪಟೆಯಾಗಿರುತ್ತದೆ. ಹಾಗಾಗಿ ತಾಯಂದಿರು ಉತ್ತಮ ಆಹಾರ ಸೇವಿಸಬೇಕು. ಮಕ್ಕಳು ಸಣ್ಣವರಿದ್ದಾಗಲೇ, ಉತ್ತಮ ಆಹಾರ ನೀಡಬೇಕು. ಹೆಣ್ಣು ಮಕ್ಕಳಿಗೆ ಹೆಚ್ಚು ಮಾನಸಿಕ ನೆಮ್ಮದಿ ಇಲ್ಲದಿದ್ದಲ್ಲಿ, ಈ ರೀತಿ ಆಗುತ್ತದೆ.

ಎರಡನೇಯದಾಗಿ ಡಯಟ್. ಈ ಮೊದಲೇ ಹೇಳಿದ ಹಾಗೆ, ಹೆಣ್ಣು ಋತುಮತಿಯಾದರೂ, ಆಕೆಯ ಸ್ತನದ ಗಾತ್ರ ಸರಿಯಾಗಿ ಇಲ್ಲದಿದ್ದಾಗ, ಆಕೆ ಉತ್ತಮ ಆಹಾರವನ್ನು ಸೇವಿಸಬೇಕು. ಕಣ್ತುಂಬ ನಿದ್ರೆ ಮಾಡಬೇಕು. ಹಾಲು, ತುಪ್ಪ, ಬೆಣ್ಣೆ, ಮೊಸರು, ಪನೀರ್, ಚೀಸ್, ಹಸಿರು ಸೊಪ್ಪು, ತರಕಾರಿ, ನೆನೆಸಿಟ್ಟ ಡ್ರೈ ಫ್ರೂಟ್ಸ್ ಇವನ್ನೆಲ್ಲ ಸೇವಿಸುವುದರಿಂದ, ಎದೆಯ ಭಾಗ ಸರಿಯಾಗಿ ಆಗುತ್ತದೆ.

ಮೂರನೇಯದಾಗಿ ಎಣ್ಣೆಯ ಮಸಾಜ್. ಪ್ರತಿದಿನ ಎದೆಯ ಭಾಗಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಎದೆಯ ಭಾಗ ಸರಿ ಆಗುತ್ತದೆ. ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಇನ್ನೂ ಉತ್ತಮ.

ನಾಲ್ಕನೇಯದಾಗಿ ಯೋಗಾಸನ ಮಾಡಬೇಕು. ಉಷ್ಟ್ರಾಸನ, ಗೋಮುಖಾಸನ, ಭುಜಂಗಾಸನ, ಇಷ್ಟು ಯೋಗಾಸನವನ್ನು ಮಾಡುವುದರಿಂದ, ಸ್ತನ ಭಾಗವನ್ನು ಸರಿ ಮಾಡಬಹುದು.

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

ಬೇಲದ ಹಣ್ಣಿನ ಜ್ಯೂಸ್ ರೆಸಿಪಿ

ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..

- Advertisement -

Latest Posts

Don't Miss