Health Tips: ಹೆಣ್ಣು ಗರ್ಭಿಣಿಯಾಗಿ, ಮಗುವನ್ನು ಹೆರುವ ತನಕ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಎಷ್ಟೋ ಕೇಸ್‌ಗಳಲ್ಲಿ ಮಗು ಹುಟ್ಟಲು ಕೆಲ ದಿನಗಳು ಇರುವಾಗಲೇ, ನಿರ್ಲಕ್ಷ್ಯ ಮಾಡಿ, ಮಗು ಕಳೆದುಕೊಂಡವರನ್ನು ನೋಡಿದ್ದೇವೆ. ಹಾಗಾಗಿ ಮಗು ಹುಟ್ಟುವವರೆಗೂ ಗರ್ಭಿಣಿಯಾದವಳು, ಸರಿಯಾಗಿ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ, ಅದರ ಆರೈಕೆ ಜೊತೆಗೆ, ತನ್ನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಹಾಗಾಗಿ ನಾವಿಂದು ಹುಟ್ಟಿದ ಮಗುವಿನ ಆರೈಕೆ ಹೇಗೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಈ ಬಗ್ಗೆ ವೈದ್ಯರಾದ ಡಾ.ಸುರೇಂದ್ರ ಮಾಹಿತಿ ನೀಡಿದ್ದು, ಮಗು ಹುಟ್ಟಿದ ಬಳಿಕ, 48 ಗಂಟೆಗಳಲ್ಲಿ ತಾಯಿಯ ಸ್ತನದಲ್ಲಿ ಉತ್ಪತ್ತಿಯಾಗುವ ಹಾಲು ಅಮೃತಕ್ಕೆ ಸಮವಾಗಿರುತ್ತದೆ. ಈ ಹಾಲನ್ನು ಮಗು ಸೇವಿಸಿದರೆ, ಭವಿಷ್ಯದಲ್ಲೂ ಮಗು ಯಾವುದೇ ಆರೋಗ್ಯ ಸಮಸ್ಯೆಗೆ ಗುರಿಯಾಗುವುದಿಲ್ಲ. ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಏನೇ ಸಮಸ್ಯೆ ಇದ್ದರೂ, ಮಗು ಹುಟ್ಟಿದ ತಕ್ಷಣದಿಂದ ಸ್ತನಪಾನ ಮಾಡಿಸಲು ಶುರು ಮಾಡಬೇಕು.
ಇನ್ನು ಸ್ನಾನದ ವಿಷಯಕ್ಕೆ ಬಂದಾಗ, ಮಗು ಹುಟ್ಟಿ 24 ಗಂಟೆಯಾದ ಬಳಿಕ, ಮಗುವಿಗೆ ಸ್ನಾನ ಮಾಡಿಸಲಾಗುತ್ತದೆ. ಮಗುವಿಗೆ ಎಣ್ಣೆ ಮಸಾಜ್ ಮಾಡಿಸಿ, ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿದರೆ, ಅದರ ಮೂಳೆಗಳು ಗಟ್ಟಿಯಾಗುತ್ತದೆ. ಮಗುವಿನ ಚಲನವಲನ ಉತ್ತಮವಾಗಿರುತ್ತದೆ.
ಇನ್ನು ಮೋಷನ್ ಮಾಡುವ ಬಗ್ಗೆ ಹೇಳುವುದಾದರೆ, ಮಗು ದಿನಕ್ಕೆ 10 ಸಲ ಮೋಷನ್ ಮಾಡಿದ್ರೂ ಏನೂ ತೊಂದರೆ ಇಲ್ಲ. ಕೆಲವು ಮಕ್ಕಳು ಹಾಲಿನ ಸೇವನೆ ಮಾಡಿದ ತಕ್ಷಣ, ಮಲ ಮೂತ್ರ ವಿಸರ್ಜನೆ ಮಾಡುತ್ತದೆ. ಇದು ಕೂಡ ನಾರ್ಮಲ್. ಕೆಲವು ಮಕ್ಕಳು ವಾರಕ್ಕೊಮ್ಮೆ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಕೂಡ ನಾರ್ಮಲ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..