Sunday, September 8, 2024

Latest Posts

ಗೌರಿ ಗಣೇಶ ಹಬ್ಬದ ನೈವೇದ್ಯಕ್ಕಾಗಿ ರವಾ ಲಾಡು ರೆಸಿಪಿ..

- Advertisement -

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ರವೆ ಲಾಡು ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, 1 ಕಪ್ ಸಕ್ಕರೆ, ಅರ್ಧ ಕಪ್ ತುರಿದ ಒಣ ಕೊಬ್ಬರಿ, ನಿಮಗೆ ಬೇಕಾದಷ್ಟು ದ್ರಾಕ್ಷಿ, ಗೋಡಂಬಿ, 4 ಸ್ಪೂನ್ ಉಗುರು ಬೆಚ್ಚಗಿನ ಹಾಲು, 4 ಸ್ಪೂನ್ ತುಪ್ಪ, ಚಿಟಿಕೆ ಏಲಕ್ಕಿ ಪುಡಿ.

ಗಣೇಶನ ನೈವೇದ್ಯಕ್ಕೆ ಉತ್ತರ ಭಾರತದ ಸ್ಪೆಶಲ್ ಸ್ವೀಟ್ ಚೂರ್ಮಾ ಲಡ್ಡು ಮಾಡಿ ನೋಡಿ..

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿಯಿರಿ. ನಂತರ ಅದೇ ಪ್ಯಾನ್‌ಗೆ ಮತ್ತಷ್ಟು ತುಪ್ಪು ಹಾಕಿ ರವೆ ಹುರಿದುಕೊಳ್ಳಿ, ಇದಕ್ಕೆ ಒಣ ಕೊಬ್ಬರಿ ಆ್ಯಡ್ ಮಾಡಿ, ಮತ್ತಷ್ಟು ಹುರಿದುಕೊಳ್ಳಿ. ಇವೆಲ್ಲ ಕರೆಕ್ಟ್ ಆಗಿ ಹುರಿದ ಬಳಿಕ, ಇದಕ್ಕೆ ಸಕ್ಕರೆ ಆ್ಯಡ್ ಮಾಡಿ. ಸಕ್ಕರೆಯನ್ನು ಪುಡಿ ಮಾಡಿ ಬಳಸಿದರೆ ಇನ್ನೂ ಉತ್ತಮ.

ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ..

ಈ ಮಿಶ್ರಣ ಲಾಡು ಕಟ್ಟುವಷ್ಟು ತಣ್ಣಗಾದ ಮೇಲೆ ಇದಕ್ಕೆ ಏಲಕ್ಕಿ ಪುಡಿ, ಮತ್ತು ಕೊಂಚ ಕೊಂಚ ಹಾಲು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಲಾಡು ಕಟ್ಟಿ.

- Advertisement -

Latest Posts

Don't Miss