ನವರಾತ್ರಿಯ ಮೂರನೇಯ ದಿನ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಗೆ ಹಾಲಿನ ನೈವೇದ್ಯ ಮಾಡುವುದು ಉತ್ತಮ. ಹಾಗಾಗಿ ಹಾಲಿನ ಪಾಯಸದ ರೆಸಿಪಿಯನ್ನ ಹೇಳಲಿದ್ದೇವೆ.
ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..
ಒಂದು ಲೀಟರ್ ದನದ ಹಾಲನ್ನು ಬಾಣಲೆಗೆ ಹಾಕಿ, ಕಾಯಿಸಿ. ಹಾಲು ಉಕ್ಕಿ ಬಂದ ಮೇಲೂ ಕೂಡ ನೀವು, ಅದನ್ನು 10 ನಿಮಿಷ ಚೆನ್ನಾಗಿ ಕುದಿಸಬೇಕು. ಹೀಗೆ ಹಾಲು ಕುದಿಯುವಾಗ, ನೀವು ಅರ್ಧ ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನೀವು ಪಾಯಸ ಮಾಡುವ ಒಂದು ಗಂಟೆ ಮುನ್ನ, ಅಕ್ಕಿಯನ್ನು ನೆನೆಸಿಟ್ಟರೆ ಇನ್ನೂ ಉತ್ತಮ. ಈ ಅಕ್ಕಿಯನ್ನು ಹಾಲಿಗೆ ಹಾಕಿ, ಚೆನ್ನಾಗಿ ಬೇಯಿಸಿ. ಅಕ್ಕಿ ಮುಕ್ಕಾಲು ಭಾಗವಷ್ಟೇ ಬೇಯಿಸಿ. ಪೂರ್ತಿ ಬೇಯಿಸಬೇಡಿ.
ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..
ಈಗ ಮಂದ ಉರಿಯಲ್ಲಿಟ್ಟು, ಇದಕ್ಕೆ ಮುಕ್ಕಾಲು ಕಪ್ ಸಕ್ಕರೆ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಏಲಕ್ಕಿ ಪುಡಿ, ಪಿಸ್ತಾ, ಬಾದಾಮ್, ಗೋಡಂಬಿ, ಮತ್ತು ಕೇಸರಿ ಹಾಲನ್ನು ಇದಕ್ಕೆ ಮಿಕ್ಸ್ ಮಾಡಿ. ಒಂದು ಸ್ಪೂನ್ ತುಪ್ಪವನ್ನೂ ಸೇರಿಸಿ. ಈಗ ದೇವಿಯ ಪ್ರಸಾದಕ್ಕೆ ಬೇಕಾಗಿರುವ ಅಕ್ಕಿ ಖೀರು ರೆಡಿ.