ಕಳೆದ ವರ್ಷ ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗಚೈತನ್ಯ ಡಿವೋರ್ಸ್ ತೆಗೆದುಕೊಂಡಿದ್ದರು. ಸ್ಯಾಮ್ ಐಟಂ ಡಾನ್ಸ್, ವೆಬ್ ಸಿರೀಸ್ ಮಾಡೋಕ್ಕೆ, ನಾಗಚೈತನ್ಯ ಮತ್ತು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಈ ಸಂಬಂಧ ಮುರಿದು ಬಿದ್ದಿತ್ತು ಎಂದು ಸುದ್ದಿಯಾಗಿತ್ತು. ಈಗೆರಡು ದಿನಗಳಿಂದ ನಾಗಚೈತನ್ಯ ಇನ್ನೋರ್ವ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಯಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಯಾರ ಜೊತೆ ಡೇಟಿಂಗ್ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ ಪ್ರೀತಿಯ ಮೌಲ್ಯವನ್ನ ತಿಳಿಯದವರು ಎಷ್ಟು ಜನರ ಜೊತೆ ಡೇಟಿಂಗ್ ಮಾಡಿದ್ರೂ ಕಣ್ಣೀರು ಹಾಕುತ್ತಾರೆ. ಕನಿಷ್ಟ ಆಕೆಯೊಂದಿಗಾದರೂ ಅವರು ಚೆನ್ನಾಗಿ ಇರಬೇಕು. ಆ ಹುಡುಗಿ ಖುಷಿಯಾಗಿರಬೇಕು. ಅವರು ತಮ್ಮ ನಡುವಳಿಕೆ ಬದಲಾಯಿಸಿಕೊಂಡು ಜೀವನ ಮಾಡಿದರೆ ಎಲ್ಲರಿಗೂ ಒಳ್ಳೆಯದು ಎಂದು ಸಮಂತಾ, ಹೇಳಿದ್ದಾರೆ.
ನಟ ನಾಗಚೈತನ್ಯ, ಶೋಭಿತಾ ಧೂಲಿಪಾಲ್ ಎಂಬಾಕೆಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಾಗಚೈತನ್ಯ ಈಕೆಯೊಂದಿಗೆ ವಿದೇಶ ಪ್ರವಾಸಕ್ಕೆ ಹೋದ ಫೋಟೋಗಳು ಕೂಡ ಇದೆ. ಈ ಫೋಟೋಗೆ ಕೆಲವರು ಬೆಸ್ಟ್ ಆಫ್ ಲಕ್ ತಿಳಿಸಿದ್ರೆ, ಇನ್ನು ಕೆಲವರು ಇನ್ನಾದರೂ ಖುಷಿಯಾಗಿರಿ ಎಂದಿದ್ದಾರೆ. ಇನ್ನು ಸಮಂತಾ ಫ್ಯಾನ್ಸ್ ಮತ್ತು ಕೆಲ ಹೆಣ್ಣುಮಕ್ಕಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘’ಮದುವೆ ಮುರಿದು ಒಂದು ವರ್ಷವೂ ಕಳೆದಿಲ್ಲ. ಈಗಲೇ ಡೇಟಿಂಗ್ ಮಾಡುತ್ತಿದ್ದೀರಲ್ಲ’’ ಎಂದು ಕಿಡಿಕಾರಿದ್ದಾರೆ.
‘ರಾತ್ರಿ ಇಬ್ಬರೂ ಮಾತಾಡ್ಕೋತಾರೆ, ಬೆಳಿಗ್ಗೆ ಒಬ್ಬರಿಗೊಬ್ಬರು ಬೈಕೋತಾರೆ, ಅಡ್ಜಸ್ಟಮೆಂಟ್ ರಾಜಕೀಯ’