Friday, October 18, 2024

Latest Posts

ಈ ಸ್ಟೆಪ್ಸ್ ಫಾಲೋ ಮಾಡಿದ್ರೆ, ನಿಮ್ಮ ಸ್ಕಿನ್ ಗ್ಲೋ ಆಗತ್ತೆ..

- Advertisement -

ಯಾರಿಗೆ ತಾನೇ ತಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ಆ ಸೌಂದರ್ಯ ಮತ್ತೆ ಹಾಳಾಗಬಾರದು ಅಂತಾ ಆಸೆ ಇರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ನಿಮ್ಮ ಸ್ಕಿನ್ ಗ್ಲೋ ಆಗಕ್ಕೆ, ಕೆಲ ಟಿಪ್ಸ್ ಹೇಳಲಿದ್ದೇವೆ.

ಮೊದಲನೇಯ ಸ್ಟೆಪ್ ನೀವು ಕೆಲಸಕ್ಕೆ ಹೋಗುವವರಾಗಿದ್ರೆ, ನಿಮ್ಮ ಮುಖವನ್ನ ಫುಲ್ ಕವರ್ ಮಾಡಿ. ಮುಖದ ಗ್ಲೋ ಕಡಿಮೆಯಾಗೋದು, ಮೊಡವೆಯಾಗೋಕ್ಕೆ ಕಾರಣವೇನೆಂದ್ರೆ ಧೂಳು. ಆ ಧೂಳಿನಿಂದ ನಿಮ್ಮ ಮುಖಕ್ಕೆ ತೊಂದರೆಯಾಗಬಾರದು ಅಂದ್ರ ನೀವು ಮುಖವನ್ನ ಫುಲ್ ಕವರ್ ಮಾಡಬೇಕು. ಆಫೀಸಿನಲ್ಲಿ ಕೆಲಸ ಮಾಡುವಾಗ ಪದೇ ಪದೇ ಕೊಂಚ ಕೊಂಚ ನೀರು ಕುಡಿಯುತ್ತಿರಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯಿರಿ.

ಎರಡನೇಯದಾಗಿ ರಾತ್ರಿ ಮಲಗುವಾಗ ಕೊಂಚ ಹರಳೆಣ್ಣೆ ಮತ್ತು ವಿಟಾಮಿನ್ ಈ ಕ್ಯಾಪ್ಸೂಲ್ ಸೇರಿಸಿ, ಮುಖಕ್ಕೆ ಹಚ್ಚಿ ಮಲಗಬೇಕು. ಯಾವುದೇ ಕಾರಣಕ್ಕೂ ದಿನದ ಹೊತ್ತಲ್ಲಿ ಇದನ್ನ ಬಳಸಬೇಡಿ. ರಾತ್ರಿ ಮಲಗುವಾಗಲೇ ಈ ಮನೆಮದ್ದು ಬಳಸಿ. ಇದರಿಂದ ಮುಖ ಸಾಫ್ಟ್ ಆಗತ್ತೆ. ಹೈಡ್ರೇಟೆಡ್ ಇರತ್ತೆ. ವಾರದಲ್ಲಿ ಎರಡು ಬಾರಿ ಮುಲ್ತಾನಿ ಮಿಟ್ಟಿ ಮತ್ತು ಹಸುವಿನ ಹಸಿ ಹಾಲನ್ನ ಮಿಕ್ಸ್ ಮಾಡಿ ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಇದರ ಜೊತೆಗೆ ನೀವು ಸರಿಯಾದ ಸಮಯಕ್ಕೆ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ, ಸಣ್ಣ ಪುಟ್ಟ ವಿಷಯಕ್ಕೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬೇಡಿ. ಕರಿದ ಪದಾರ್ಥ, ಸಿಹಿ ತಿಂಡಿ, ಮಸಾಲೆ ಪದಾರ್ಥದ ಸೇವನೆ ಕಂಟ್ರೋಲಿನಲ್ಲಿರಲಿ. ಯಾವುದೇ ಕಾರಣಕ್ಕೂ ಅಂಗಡಿಯಲ್ಲಿ ಸಿಗುವ ಕೂಲ್ ಡ್ರಿಂಕ್ಸ್ ಕುಡಿಯಬೇಡಿ. ಇವೆಲ್ಲವನ್ನ ಪಾಲಿಸಿದ್ರೆ, ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಉತ್ತಮವಾಗಿರತ್ತೆ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

- Advertisement -

Latest Posts

Don't Miss