ಸಿಹಿ ಪೊಂಗಲ್ ರೆಸಿಪಿ..

ಪೊಂಗಲ್ ಅಂದ್ರೆ ಹಲವರಿಗೆ ಇಷ್ಟದ ರೆಸಿಪಿ. ಆದ್ರೆ ಅದನ್ನ ಸಂಕ್ರಾಂತಿ ಸಮಯದಲ್ಲಷ್ಟೇ ಮಾಡ್ತಾರೆ. ಆದ್‌ರೆ ನಾವಿಂದು ಸಿಹಿ ಪೊಂಗಲ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾಗಿ ನಿಮಗೆ ಸ್ವೀಟ್ ಪೊಂಗಲ್ ತಿನ್ನೋಕ್ಕೆ ಮನಸ್ಸಾದಾಗ, ನೀವು ಇದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ : ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ, ಅರ್ಧ ಕಪ್ ತುಪ್ಪ, ಬೇಕಾದಷ್ಟು ಡ್ರೈಫ್ರೂಟ್ಸ್, ಒಂದು ಕಪ್ ಹಾಲು, 2 ಕಪ್ ಬೆಲ್ಲ, ಕೊಂಚ ಏಲಕ್ಕಿ ಪುಡಿ.

ಮಾಡುವ ವಿಧಾನ : ಮೊದಲು ಅಕ್ಕಿ ಮತ್ತು ಬೇಳೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ ಕುಕ್ಕರ್ ಬಿಸಿ ಮಾಡಿ, ಅದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ. ಜೊತೆಗೆ ಅಕ್ಕಿ ಮತ್ತು ಬೇಳೆ ಸೇರಿಸಿ. ಜೊತೆಗೆ ನೀರು ಮತ್ತು ಹಾಲು ಬೆರೆಸಿ. ಈಗ ಕುಕ್ಕರ್‌ನಲ್ಲಿ 3 ವಿಶಲ್ ಬರಿಸಿ, ಅಕ್ಕಿ ಬೇಳೆ ಬೇಯಿಸಿ. ಅಲ್ಲಿಯವರೆಗೂ ತುಪ್ಪದಲ್ಲಿ ಡ್ರೈಫ್ರೂಟ್ಸ್ ಹುರಿದಿಡಿ. ನಂತರ ಅದೇ ಪ್ಯಾನ್ ಮತ್ತೆ ಬಿಸಿ ಮಾಡಿ, ಕೊಂಚ ತುಪ್ಪ ಹಾಕಿ, ಅದಕ್ಕೆ ಬೆಲ್ಲ ಸೇರಿಸಿ ಪಾಕ ತಯಾರಿಸಿಕೊಳ್ಳಿ.

ಬೆಲ್ಲದ ಪಾಕ ಸರಿಯಾಗಿ ರೆಡಿಯಾದ ಬಳಿಕ, ಬೆಂದ ಅನ್ನ ಮತ್ತು ಬೇಳೆಗೆ ಈ ಬೆಲ್ಲದ ಪಾಕ ಸೇರಿಸಿ. ಇವೆರಡು ಸರಿಯಾಗಿ ಮಿಕ್ಸ್ ಆದ ಬಳಿಕ ಈ ಮಿಶ್ರಣಕ್ಕೆ ಏಲಕ್ಕಿ ಪುಡಿ, ಹುರಿದ ಡ್ರೈಫ್ರೂಟ್ಸ್ ಸೇರಿಸಿ. ನಿಮಗೆ ಕರ್ಪೂರದ ಫ್ಲೆವರ್ ಬೇಕಂದ್ರೆ ಮಾತ್ರ, ಕೊಂಚ ಕರ್ಪೂರದ ಪುಡಿಯನ್ನ ಇದಕ್ಕೆ ಸೇರಿಸಿ. ಇದನ್ನು ತಿನ್ನಲು ಕೊಡುವಾಗ ಕೊಂಚ ತುಪ್ಪ ಬೆರೆಸಿ ಕೊಡಿ.

Ugadi Special: ಈ ಬಾರಿ ಯುಗಾದಿಗೆ ಈ ಸಿಹಿ ತಿಂಡಿ ಮಾಡಿ ನೋಡಿ..

Ugadi Special : ಯುಗಾದಿ ಹಬ್ಬಕ್ಕಾಗಿ ಹಾಲಿನ ಪಾಯಸದ ರೆಸಿಪಿ..

Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್‌ ರೈಸ್..

About The Author