ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಹಾಲಿನ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಕಾಲು ಕಪ್ ಅಕ್ಕಿ, ಅರ್ಧ ಲೀಟರ್ ಹಾಲು(ಇದಕ್ಕೆ ಹೆಚ್ಚು ಹಾಲನ್ನ ಬಳಸಬಹುದು), 2 ಸ್ಪೂನ್ ತುಪ್ಪ, 2 ಸ್ಪೂನ್ ಕೇಸರಿ ಹಾಲು, ಕಾಲು ಕಪ್ ಸಕ್ಕರೆ.
ಮಾಡುವ ವಿಧಾನ: ಅಕ್ಕಿಗೆ ನೀರು ಹಾಕಿ 2 ತಾಸು ನೆನೆಸಬೇಕು. 2 ತಾಸಿನ ಬಳಿಕ ಆ ಅಕ್ಕಿಯನ್ನ ಸ್ವಚ್ಛವಾಗಿ ತೊಳೆಯಬೇಕು. ಈಗ ಹಾಲನ್ನು ಕಾಯಿಸಿ, ಹಾಲು ಕಾದ ಬಳಿಕ, ಅದಕ್ಕೆ ಅಕ್ಕಿ ಹಾಕಬೇಕು. ಅಕ್ಕಿ ಸರಿಯಾಗಿ ಬೇಯುವ ತನಕ, ಅದನ್ನು ಹಾಲಿನಲ್ಲೇ ಕದಡುತ್ತಿರಬೇಕು. ತಳ ತಾಗಲು ಬಿಡಬಾರದು. ಅಕ್ಕಿ ಸರಿಯಾಗಿ ಬೆಂದ ಬಳಿಕವೇ ಸಕ್ಕರೆ ಸೇರಿಸಿ.
ನಂತರ ಏಲಕ್ಕಿ ಪುಡಿ, ಕೇಸರಿ ಹಾಲನ್ನ ಕೂಡ ಇದಕ್ಕೆ ಮಿಕ್ಸ್ ಮಾಡಿ. ಈಗ ತುಪ್ಪ ಬಿಸಿ ಮಾಡಿ, ಅದಕ್ಕೆ ಡ್ರೈಫ್ರೂಟ್ಸ್ ಹಾಕಿ, ಹುರಿಯಿರಿ. ಇದನ್ನ ಹಾಲಿಗೆ ಸೇರಿಸಿದರೆ, ಹಾಲು ಪಾಯಸ ರೆಡಿ.
Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್ ರೈಸ್..
Ugadi Special: ಈ ಬಾರಿ ಯುಗಾದಿಗೆ ಈ ರೀತಿ ಕ್ಯಾರೆಟ್ ಹೋಳಿಗೆ ತಯಾರಿಸಿ..