ಮುಂಬೈ: ಅತೃಪ್ತ ಶಾಸಕರನ್ನು ಬಿಜೆಪಿ ಗನ್ ಪಾಯಿಂಟ್ ನಲ್ಲಿ ಇರಿಸಿದೆ ಎನ್ನುವ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೈ ಶಾಸಕ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮುಂಬೈನ ಸೊಫಿಟೆಲ್ ಹೋಟೆಲ್ ನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ರಾಜೀನಾಮೆ ನೀಡಿರೋ ನಾವೆಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ನಾಯಕರು ನಮ್ಮ ಸಮಸ್ಯೆಗಳನ್ನು ಆಲಿಸದೆ ನಮ್ಮನ್ನು ನಿರ್ಲಕ್ಷ್ಯ...
ಬೆಂಗಳೂರು: ಕೈ ಶಾಸಕ ರೋಷನ್ ಬೇಗ್ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನವಾಗಿದೆ. ಹೀಗಾಗಿ ದೋಸ್ತಿಗಳು ಮತ್ತೊಂದು ಸ್ಥಾನ ಕಳೆದುಕೊಂಡು ಸಂಖ್ಯಾಬಲ ಇಳಿಮುಖವಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದು ಮುನಿಸಿಕೊಂಡು ಬಂಡಾಯವೆದ್ದಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ಇದೀಗ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಸಂಖ್ಯಾಬಲ...
ಬೆಂಗಳೂರು: ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರಿಗೆ ಸಿಎಲ್ ಪಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲದಿದ್ರೆ ಮುಂದಾಗೋ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಅಂತ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಸರ್ಕಾರವನ್ನು...
ಬೆಂಗಳೂರು: ಶಾಸಕರ ರಾಜೀನಾಮೆಯಿಂದಾಗಿ ಅಭದ್ರಗೊಂಡಿರೋ ಮೈತ್ರಿ ಸರ್ಕಾರ ನೈತಿಕ ಬಲ ಕಳೆದುಕೊಂಡಿದೆ. ಅನುಭವಿ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡೋ ಮೂಲಕ ಕುದುರೆ ವ್ಯಾಪಾರ ಮಾಡ್ತಿರೋ ಸಿಎಂ ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಈಗಾಗಲೇ ರಾಜೀನಾಮೆ ನೀಡಿರುವವರೆಲ್ಲರೂ...
ಬೆಂಗಳೂರು: ಸಚಿವರುಗಳ ಸಾಮೂಹಿಕ ರಾಜೀನಾಮೆ ಪಡೆಯೋ ಮೂಲಕ ಸಚಿವ ಸಂಪುಟ ಪುನಾರಚಿಸಿ ಅತೃಪ್ತರನ್ನು ಒಲಿಸಿಕೊಳ್ಳೋ ದೋಸ್ತಿಗಳ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸಿಎಂ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ರಾಜಕೀಯ ಚದುರಂಗದಾಟದಲ್ಲಿ ಮುಳುಗಿಹೋಗಿರೋ ರಾಜ್ಯ ರಾಜಕಾರಣಿಗಳ ಒಂದೊಂದೂ ನಡೆ ಒಂದೊಂದು ರೀತಿಯ ತಿರುವು ಪಡೆದುಕೊಳ್ತಿದೆ. ಸಚಿವರುಗಳ ರಾಜೀನಾಮೆ...
ಬೆಂಗಳೂರು: ಪಕ್ಷೇತರ ಶಾಸಕ ಎಚ್.ನಾಗೇಶ್ ರನ್ನು ನಂಬಬೇಡಿ ಅಂತ ನಾನು ಕಾಂಗ್ರೆಸ್ ನಾಯಕರಿಗೆ ಮೊದಲೇ ಹೇಳಿದ್ದೆ. ಆದ್ರೆ ಇವತ್ತು ಅವರೇ ರಾಜೀನಾಮೆ ನೀಡಿ ಹೋಗಿದ್ದಾರೆ ಅಂತ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡಿರೋ ವಿಚಾರವಾಗಿ...
ಬೆಂಗಳೂರು: ಮೈತ್ರಿ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ದೋಸ್ತಿಗಳನ್ನು ಪೇಚಾಟಕ್ಕೆ ಸಿಲುಕಿಸಿರೋ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರ್ಜರಿ ಆಫರ್ ನೀಡಿದ್ದಾರೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ನಿಮಗೆ ಸಚಿವ ಸ್ಥಾನ ನೀಡ್ತೇವೆ ಅಂತ ಅತೃಪ್ತರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ.
ಶಾಸಕರು ಮತ್ತು ಸಚಿವರುಗಳಿಗೆ ಉಪಹಾರಕೂಟದ ಹೆಸರಿನಲ್ಲಿ ಆಹ್ವಾನಿಸಿ ಅವರಿಂದ ಸಾಮೂಹಿಕ ರಾಜೀನಾಮೆ...
ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಜೋರಾಗಿ ನಡೆಯುತ್ತಿರೋ ಮಧ್ಯೆಯೇ ಕೈ ಶಾಸಕ ತನ್ನ ಕ್ಷೇತ್ರಕ್ಕೆ ನೀರು ಬಿಡದಿದ್ರೆ ತಾವು ರಾಜೀನಾಮೆ ಕೊಡುವುದಾಗಿ ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಮ್ಮ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ನೀರು ಹರಿಬಿಡದಿದ್ದರೆ ನಾನು ಖಂಡಿತ ರಾಜೀನಾಮೆ ನೀಡುತ್ತೇನೆ ಅಂತ ಕಾಂಗ್ರೆಸ್ ನಾಯಕರಿಗೆ...
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಶಾಸಕರು ಸಾಮೂಹಿಕ ರಾಜೀನಾಮೆಯಿಂದ ಸರ್ಕಾರ ಅಭದ್ರಗೊಂಡ ಶಾಕ್ ನಲ್ಲಿರೋ ದೋಸ್ತಿಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ನಾನಾ ಕಾರಣಗಳನ್ನು ನೀಡಿ ಕಾಂಗ್ರೆಸ್-ಜೆಡಿಎಸ್ ನ ಮಂದಿ ಶಾಸಕರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆದ್ರೆ ಇದೀಗ ನಾಳೆ ಕಾಂಗ್ರೆಸ್ ನ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲು ರೆಡಿಯಾಗಿದ್ದಾರೆ...
ಬೆಳಗಾವಿ: ಮೈತ್ರಿಯಲ್ಲಿ ಉಂಟಾಗಿರೋ ಅಲ್ಲೋಲ ಕಲ್ಲೋಲದ ಬಗ್ಗೆ ತಕ್ಷಣವೇ ಯಾವುದೇ ನಿರ್ಧಾರಕ್ಕೆ ಬರಲು ಜೆಡಿಎಸ್ ಒದ್ದಾಡುತ್ತಿದ್ರೆ ಮತ್ತೊಂದೆಡೆ ಮೈತ್ರಿಗೆ ಕೈಕೊಟ್ಟಿರೋ ಶಾಸಕರೆಲ್ಲರ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು ಅಂತ ಸ್ವತಃ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕಾಂಗ್ರೆಸ್-ಜೆಡಿಎಸ್ ಶಾಸಕರು ಸಾಮೂಹಿಕ...