Friday, November 22, 2024

Latest Posts

ಸಂತಾನ ಸಮಸ್ಯೆಯಾಗಲು, ಬಂಜೆತನವಾಗಲು ಕಾರಣವೇನು..?

- Advertisement -

Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್‌ನಂಥ ಮಷಿನ್‌ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ. ಜಂಕ್ ಫುಡ್ ಸೇವನೆ ಕೂಡ ಹೆಚ್ಚು. ಇಂಥ ಜೀವನ ಶೈಲಿಯಿಂದ ಬಂಜೆತನಕ್ಕೀಡಾಗುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಾಗಾದ್ರೆ ಬಂಜೆತನದ ಸಮಸ್ಯೆ ಹೆಚ್ಚಾಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ಬಂಜೆತನ ಉಂಟಾಗಲು ತುಂಬಾ ಕಾರಣಗಳಿರುತ್ತದೆ. ಬಂಜೆತನ ಬರೀ ಹೆಣ್ಣು ಮಕ್ಕಳಲ್ಲಷ್ಟೇ ಅಲ್ಲ, ಗಂಡು ಮಕ್ಕಳಲ್ಲೂ ಬರಬಹುದು. ಹಾಗಾಗಿ ಇಬ್ಬರಿಗೂ ಪರೀಕ್ಷಿಸಿ, ಏನು ಕಾರಣವೆಂದು ತಿಳಿದು, ಆ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಕೆಲಸದ ಒತ್ತಡ, ಕುಟುಂಬದಲ್ಲಿ ಕಿರಿಕಿರಿ, ಮಾನಸಿಕ ಸಮಸ್ಯೆಗಳಿಂದಲೂ ಬಂಜೆತನ ಬರುತ್ತದೆ.

ಇನ್ನು ಹೆಣ್ಣು ಮಕ್ಕಳಲ್ಲಿ ಸಮಯಕ್ಕೆ ಸರಿಯಾಗಿ ಮುಟ್ಟಾಗದ ಕಾರಣ, ಬಂಜೆತನ ಬರುವ ಸಾಧ್ಯತೆ ಇರುತ್ತದೆ.  ತಿಂಗಳಿಗೆ ಸರಿಯಾಗಿ ಮುಟ್ಟಾಗದವರಿಗೆ, ಥೈರಾಯ್ಡ್, ಪಿಸಿಓಡಿ, ಪಿಸಿಓಎಸ್ ಸಮಸ್ಯೆ ಬರುತ್ತದೆ. ಅಂಥವರಿಗೆ ಮಕ್ಕಳಾಗುವ ಸಂಭವ ತೀರಾ ಕಡಿಮೆಯಾಗಿರುತ್ತದೆ. ಅಂಥವರು ಸರಿಯಾಗಿ ಚಿಕಿತ್ಸೆ ಪಡೆದು, ಸಂತಾನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಎಷ್ಟೋ ಕೇಸ್‌ಗಳಲ್ಲಿ ಮಕ್ಕಳಾಗಲು ಸಾಧ್ಯವೇ ಇಲ್ಲವೆಂದರಿಗೂ, ಸರಿಯಾಗಿ ಚಿಕಿತ್ಸೆ ಸಿಕ್ಕಿದ ಬಳಿಕ, ಮಕ್ಕಳಾಗಿದ್ದುಂಟು. ಹಾಗಾಗಿ ಮಕ್ಕಳೇ ಆಗುವುದಿಲ್ಲವೆಂದು ಒಂದೇ ಬಾರಿಗೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ವೀಡಿಯೋ ನೋಡಿ..

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

- Advertisement -

Latest Posts

Don't Miss