Sunday, September 8, 2024

Latest Posts

ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು..?

- Advertisement -

Spiritual: ನಮ್ಮ ಸನಾತನ ಧರ್ಮದಲ್ಲಿ ಹಲವಾರು ಪುರಾಣ ಕಥೆಗಳಿದೆ. ನೀವು ಎಷ್ಟೇ ವಿಚಾರಗಳನ್ನು ತಿಳಿದುಕೊಂಡಿದ್ದರೂ, ಒಂದಲ್ಲ ಒಂದು ವಿಚಾರ ತಪ್ಪಿಹೋಗಿರುತ್ತದೆ. ಇಂದು ಇಂಥ ಅಪರೂಪದ ವಿಚಾರವಾದ, ಶ್ರೀಕೃಷ್ಣನ ಕೊಳಲಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಯಾರು..? ಯಾಕೆ ಕೊಟ್ಟರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟಿದ್ದು ಶಿವ. ಶ್ರೀಕೃಷ್ಣ ಗೋಕುಲಕ್ಕೆ ಬಂದಾಗ, ಅವನನ್ನು ನೋಡಲು ಋಷಿಮುನಿಗಳು, ದೇವಾನು ದೇವತೆಗಳು ಕೂಡ ಗೋಕುಲದ ನಂದನ ಮನೆಗೆ ಬಂದಿದ್ದರು. ಬಾಲ ಕೃಷ್ಣನನ್ನು ಕಣ್ತುಂಬಿಕೊಂಡು, ಹಲವಾರು ಅಸ್ತ್ರ, ಶಸ್ತ್ರ, ವರದಾನಗಳನ್ನು ಉಡುಗೊರೆಯಾಗಿ ನೀಡಿದ್ದರು. ಅದೇ ರೀತಿ ಶಿವ ಕೂಡ ಶ್ರೀಕೃಷ್ಣನನ್ನು ಕಣ್ತುಂಬಿಕೊಳ್ಳಲು, ಗೋಕುಲಕ್ಕೆ ಬಂದಿದ್ದರಂತೆ. ಹಾಗೆ ಬಂದಾಗ, ಉಡುಗೊರೆಯಾಗಿ ಶ್ರೀಕೃಷ್ಣನಿಗೆ ಕೊಳಲನ್ನು ಕೊಟ್ಟರು ಎಂದು ಪುರಾಣ ಕಥೆಯಲ್ಲಿ ಹೇಳಲಾಗಿದೆ.

ಆದರೆ ಈ ದೇವಾನುದೇವತೆಗಳೆಲ್ಲ ತಮ್ಮ ನಿಜರೂಪದಲ್ಲಿ ಗೋಕುಲಕ್ಕೆ ಬರಲಿಲ್ಲ. ಬದಲಾಗಿ ವೇಷಭೂಷಣವನ್ನು ಬದಲಿಸಿಕೊಂಡು ಬಂದಿದ್ದರು. ಅದೇ ರೀತಿ ಶಿವ ಕೂಡ, ಸಾಧುವಿನ ರೂಪ ಧಾರಣೆ ಮಾಡಿ, ಶ್ರೀಕೃಷ್ಣನ ದರ್ಶನಕ್ಕೆ ಬಂದ. ಆದರೆ ಆ ಸಾಧುವನ್ನು ನೋಡಿ ತನ್ನ ಮಗನೆಲ್ಲಿ ಹೆದರುವನೋ ಎಂದು ಯಶೋಧಾ, ಆ ಸಾಧುವನ್ನು ಹೊರಗೆ ನಿಲ್ಲಿಸುತ್ತಾಳೆ.

ಆದರೆ ಶಿವ ಶ್ರೀಕೃಷ್ಣನನ್ನು ದರ್ಶನ ಮಾಡುವುದಕ್ಕಾಗಿ 12ಸಾವಿರ ವರ್ಷಗಳವರೆಗೆ ತಪಸ್ಸು ಮಾಡಿದ್ದರಂತೆ. ಹಾಗಾಗಿ ಶಿವನಿಗೂ ಶ್ರೀಕೃಷ್ಣನ ದರ್ಶನವಾಯಿತು. ಶಿವ ಯಾವ ಸ್ಥಳದಲ್ಲಿ ತಪಸ್ಸು ಮಾಡಿದ್ದನೋ, ಒಂದು ದಿನ ಕೃಷ್ಣನನ್ನು ಅದೇ ಸ್ಥಳದಲ್ಲಿ ಭೇಟಿಯಾದ. ಆಗ ಆ ಬಾಲಕೃಷ್ಣನಿಗೆ ಶಿವ ಕೊಳಲನ್ನು ಉಡುಗೊರೆಯಾಗಿ ಕೊಟ್ಟನಂತೆ. ಆ ಸ್ಥಳ ಯಾವುದೆಂದರೆ, ಮಥುರೆಯಲ್ಲಿರುವ ಒಂದು ಕಲ್ಯಾಣಿ. ಆ ಕಲ್ಯಾಣಿ ಹೆಸರು ಈಗ ಶಿವ ಕಲ್ಯಾಣಿ ಎಂದು ಕರೆಯಲ್ಪಡುತ್ತದೆ.

Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..

Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?

Ganesh Festival Special: ಕಾಣೆಯಾದ ಶ್ರೀವಿಷ್ಣುವಿನ ಶಂಖದ ಕಥೆ

- Advertisement -

Latest Posts

Don't Miss