ಶಿವ ಬಳಸುವ ಒಂದೊಂದು ವಸ್ತುಗಳಿಗೂ ಒಂದೊಂದು ಕಥೆ ಇದೆ. ನಾವು ಈಗಾಗಲೇ ನಿಮಗೆ ಶಿವನ ಕೊರಳಿನಲ್ಲಿ ಸರ್ಪವೇಕೆ ಬಂತು..? ನಂದಿ ಶಿವನ ವಾಹನ ಆಗಿದ್ದು ಹೇಗೆ..? ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..? ಹೀಗೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ನಾವು ಶಿವ ಹುಲಿಯ ಚರ್ಮವನ್ನು ಏಕೆ ಬಳಸುತ್ತಾನೆ ಅಂತಾ ಹೇಳಲಿದ್ದೇವೆ..
ಒಮ್ಮೆ ಶಿವ ವಾಯುವಿಹಾರಕ್ಕಾಗಿ ಭೂಮಿಗೆ ಬಂದಾಗ, ಒಂದು ಕಾಡಿಗೆ ಹೋದರು. ಅಲ್ಲಿ ಹಲವು ಋಷಿಮುನಿಗಳು, ತಮ್ಮ ಪರಿವಾರದೊಂದಿಗೆ ವಾಸ ಮಾಡಿಕೊಂಡಿದ್ದರು. ಆದರೆ ಈ ವಿಷಯ ಶಿವನಿಗೆ ಗೊತ್ತಿರಲಿಲ್ಲ. ಅವರು ಆ ಕಾಡಿನಲ್ಲಿ ತಾನೊಬ್ಬನೇ ಇದ್ದೇನೆ ಎಂದು ತಿಳಿದು, ದಿಗಂಬರನಾಗಿ ಹೋಗುತ್ತಿದ್ದರು.
ಅದೇ ರೀತಿ ಋಷಿಮುನಿಗಳಿಗೂ ಹಾಗೆ ಹೋಗುತ್ತಿರುವುದು ಶಿವನೆಂದು ಗೊತ್ತಿರಲಿಲ್ಲ. ಅವರು ಶಿವನನ್ನು ಸಾಮಾನ್ಯ ಮನುಷ್ಯನೆಂದು ತಿಳಿದಿದ್ದರು. ಹೀಗೆ ಮಾನವರು ಕಾಡಿನಲ್ಲಿ ದಿಗಂಬರರಾಗಿ ಓಡಾಡಿದ್ದಲ್ಲಿ, ನಮ್ಮ ಪತ್ನಿಯರಿಗೆ ತೊಂದರೆಯಾಗುತ್ತದೆ. ಅವರು ಮುಜುಗರದಿಂದಿರಬೇಕಾಗುತ್ತದೆ ಎಂದು ಋಷಿಮುನಿಗಳು ಸಿಟ್ಟಾಗತೊಡಗಿದರು.
ಹಾಗಾಗಿ ಆ ಮಾನವನಿಗೆ ಬುದ್ಧಿ ಕಲಿಸಬೇಕು ಎಂದು, ಒಂದು ದೊಡ್ಡ ಹೊಂಡವನ್ನು ತೋಡಿದರು. ಶಿವ ನಡೆದುಕೊಂಡು ಬರುವಾಗ, ಆ ಹೊಂಡದಲ್ಲಿ ಬಿದ್ದ. ಋಷಿಗಳು ಶಿವನ ಮೇಲೆ ಹುಲಿಯನ್ನ ಬಿಟ್ಟರು. ಯಾಕಂದ್ರೆ ಆ ಮಾನವನನ್ನು ಹುಲಿ ಆಹಾರ ಮಾಡಿಕೊಳ್ಳಲಿ. ಇವನಿಗೆ ಹೀಗಾದರೆ, ಮತ್ತೆ ಯಾವ ಮಾನವರೂ ಕಾಡಿನಲ್ಲಿ ಈ ರೀತಿ ಓಡಾಡುವುದಿಲ್ಲ ಎಂದು ಅವರ ಯೋಚನೆಯಾಗಿತ್ತು.
ಆದರೆ ಮಹಾದೇವ,. ಆ ಹುಲಿಯ ಜೊತೆ ಕಾದಾಡಿ, ಅದರ ಚರ್ಮವನ್ನು ತೆಗೆದು, ಬಟ್ಟೆ ರೀತಿ ಅದನ್ನು ತೊಟ್ಟುಕೊಂಡರು. ಇದನ್ನು ನೋಡಿ, ಋಷಿಮುನಿಗಳು ಆಶ್ಚರ್ಯಚಕಿತರಾದರು., ನಂತರ ಅವರಿಗೆ ಇವನು ಸಾಕ್ಷಾತ್ ಪರಶಿವ ಎಂದು ಗೊತ್ತಾಯಿತು. ಇದಾದ ಬಳಿಕ, ಶಿವ ಹುಲಿಯ ಚರ್ಮವನ್ನೇ ವಸ್ತ್ರವನ್ನಾಗಿಸಿಕೊಂಡರು.