ಕದಂಬ ವೃಕ್ಷ. ಈ ಮರದಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆಂಬ ನಂಬಿಕೆ ಇದೆ. ಈ ಮರದ ಕೆಳಗೆ ಹೋಮ ಮಾಡುವುದರಿಂದ, ಮನೆಯಲ್ಲಿ ಧನಾಭಿವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.
ಗರಿಕೆ. ಮಹಾಗಣಪತಿಗೆ ಅತೀ ಪ್ರಿಯವಾದ ಎಲೆ ಅಂದ್ರೆ ಗರಿಕೆ. ಮಂಗಳವಾರದ ದಿನ 21 ಗರಿಕೆಯನ್ನು ಗಣೇಶನಿಗೆ ಸಲ್ಲಿಸಿದರೆ, ನಮ್ಮ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಅನ್ನೋ ನಂಬಿಕೆ ಇದೆ. ನೀವು ಗಣೇಶನಿಗೆ ಭಕ್ಷ್ಯ ಭೋಜನಗಳನ್ನು ನೈವೇದ್ಯ ಮಾಡದಿದ್ದರೂ, ಗರಿಕೆ ಸಲ್ಲಿಸಿದರೂ, ಗಣೇಶ ಸಂತುಷ್ಟನಾಗುತ್ತಾನೆಂಬ ನಂಬಿಕೆ ಇದೆ.
ಅಶೋಕ ಮರ. ಇದನ್ನು ಪವಿತ್ರ ಮತ್ತು ಶುಭವೃಕ್ಷವೆಂದು ಪರಿಗಣಿಸಲಾಗಿದೆ. ಈ ಮರದಲ್ಲಿ ಶಿವನ ವಾಸವಿರುತ್ತದೆ. ಈ ಮರವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡುವುದರಿಂದ, ಮನೆಯ ಅಭಿವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇದರ ಎಲೆಯನ್ನ ಕೂಡ ಪೂಜೆಯಲ್ಲಿ, ಶುಭಕಾರ್ಯದಲ್ಲಿ ಬಳಸಲಾಗುತ್ತದೆ.
ವೀಳ್ಯದೆಲೆ. ವೀಳ್ಯದೆಲೆಯ ಮರವನ್ನು ಪೂಜಿಸುವುದಿಲ್ಲ. ಆದ್ರೆ ವೀಳ್ಯದೆಲೆಯನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಹಣ್ಣು ಕಾಯಿಯ ಜೊತೆ, ವೀಳ್ಯದೆಲೆ ಮತ್ತು ಅಡಿಕೆ ಇಟ್ಟು ಪೂಜೆ ಮಾಡುವುದರಿಂದ ಪೂಜೆ ಸಂಪೂರ್ಣವಾಗುತ್ತದೆ ಅನ್ನೋ ನಂಬಿಕೆ ಇದೆ. ಇಷ್ಟೇ ಅಲ್ಲದೇ, ವೀಳ್ಯದೆಲೆ ಹಲವು ರೋಗಗಳಿಗೆ ಮದ್ದಿನ ರೀತಿ ಬಳಸಲಾಗತ್ತೆ.