Health Tips: ಕೆಲವರಿಗೆ ಬರೀ ಮುಖದ ಮೇಲಷ್ಟೇ ಅಲ್ಲದೇ, ಇಡೀ ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಕೆಲವೊಮ್ಮೆ ಮೊಡವೆಗಳೂ ಆಗುತ್ತದೆ. ಇದಕ್ಕೆ ಆಹಾರ ಕ್ರಮ, ನಾವು ಬಳಸುವ ಸೋಪ್, ಕ್ರೀಮ್ ಇದೆಲ್ಲವೂ ಕಾರಣವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಈ ಬಗ್ಗೆ ವೇದ್ಯರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯೆ ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ದೇಹದ ಮೇಲೆಲ್ಲ ಈ ರೀತಿ ಮೊಡವೆಗಳಾಗುತ್ತಿದ್ದಲ್ಲಿ, ಹೆಚ್ಚು ತಡ ಮಾಡದೇ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ, ಇದು ನಿಮ್ಮ ಇಡೀ ದೇಹವನ್ನು ಹರಡಿ, ನಿಮ್ಮನ್ನು ಕುರೂಪಿಯನ್ನಾಗಿಸುತ್ತದೆ. ಇದಕ್ಕೆ ನೀವು ಸೇವಿಸುವ ಆಹಾರ, ಬಳಸುವ ಸೋಪ್, ಇತರೆ ಪ್ರಾಡಕ್ಟ್ಗಳು ಕಾರಣವಾಗುತ್ತದೆ ಎನ್ನುತ್ತಾರೆ ಡಾ.ದೀಪಿಕಾ.
ಇನ್ನು ಈ ರೀತಿ ಗುಳ್ಳೆಗಳಾಗಬಾರದು ಅಂದ್ರೆ, ನೀವು ಕರಿದ ಪದಾರ್ಥಗಳು, ಜಂಕ್ ಫುಡ್, ಮಸಾಲೆ ಪದಾರ್ಥಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಣ್ಣು, ತರಕಾರಿ, ಎಳನೀರು, ಮಜ್ಜಿಗೆ, ಇಂಥವುಗಳನ್ನು ಸೇವಿಸಬೇಕು. ಸಿಕ್ಕ ಸಿಕ್ಕ ಕ್ರೀಮ್ಗಳನ್ನು ಬಳಸುವ ಬದಲು, ವೈದ್ಯರ ಬಳಿ ವಿಚಾರಿಸಿ, ಬಳಿಕ ಅವರು ಹೇಳಿದ ಔಷಧಿ ಬಳಸುವುದು ಸೂಕ್ತ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
Dandruffನಿಂದ ತಲೆಬಿಸಿ ಆಗಿದ್ಯಾ? Tension ಬಿಡಿ, ಈ Tips Follow ಮಾಡಿ