Thursday, July 30, 2026

Karnataka Tv

‘ರಾಜೀನಾಮೆ ಅಂಗೀಕಾರಕ್ಕೆ ಬಿಜೆಪಿಗೆ ಅವಸರವೇಕೆ..?’- ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತಾಗಿ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಅನ್ನೋ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಬಿಜೆಪಿಯವರು ಅವಸರ ಯಾಕೆ ಅಂತ ಪ್ರಶ್ನಿಸಿದ್ದಾರೆ. ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ರಾಜೀನಾಮೆ ಅಂಗೀಕರಿಸೋ ವಿಚಾರದಲ್ಲಿ ಪಕ್ಷದ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅನ್ನೋ ಬಿಜೆಪಿ ಆರೋಪಕ್ಕೆ...

ಧೋನಿ-ಜಡೇಜಾ ಹೋರಾಟ ವ್ಯರ್ಥ, ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಭಾರತ

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯ ಟೀಮ್ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ವಿಶ್ವಕಪ್ ಕಪ್ ಗೆಲ್ಲುವ ಕೊಹ್ಲಿ ಪಡೆಯ ಕನಸು, ನುಚ್ಚು ನೂರಾಯಿತು. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ್ಡ್ ನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ಮುಗ್ಗರಿಸಿತು. ಟಾಪ್ ಆರ್ಡರ್...

ಇಂದು ಮತ್ತಷ್ಟು ಶಾಸಕರು ರಾಜೀನಾಮೆ..!

ಬೆಂಗಳೂರು : ದೋಸ್ತಿ ಸರ್ಕಾರದ ಶಾಸಕರ ಸಾಲುಸಾಲು ರಾಜೀನಾಮೆ ಪರ್ವ ದು ಮುಂದುವರೆಯುವ ಸಾಧ್ಯತೆ ಇದೆ.. ನಿನ್ನೆಯಷ್ಟೆ ಡಾ. ಸುಧಾಕರ್, ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಇಂದು ಜಯನಗರ ಶಾಸಕಿ ಸೌಮ್ಯ ರಾಮಲಿಂಗಾರೆಡ್ಡಿ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ತಂದೆ ಹಾದಿಯಲ್ಲೇ ಸಾಗಲಿದ್ದಾರೆ ಸೌಮ್ಯ ರಾಮಲಿಂಗಾರೆಡ್ಡಿ..! ಮೊನ್ನೆ ಕಾಂಗ್ರೆಸ್-ಜೆಡಿಎಸ್...

ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ..!?

ಬೆಂಗಳೂರು: ಕೊನೆಗೂ ಕುಮಾರಸ್ವಾಮಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ನೀಡಿದ ಬೆನ್ನಲ್ಲೇ ದೋಸ್ತಿ ಸರ್ಕಾರ ಖತಂ ಆಗೋದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಬೆಳಗ್ಗೆ ಸಚಿವ ಸಂಪುಟ ಸಭೆ ಕರೆದಿದ್ದು ಅಲ್ಲಿ ಸರ್ಕಾರ ವಿಸರ್ಜನೆ ನಿರ್ಧಾರ ಕೈಗೊಳ್ತಾರೆ. 12ರಂದು ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ವಿದಾಯ...

ಸಚಿವ ಡಿ.ಕೆ ಶಿವಕುಮಾರ್ ಬರಿಗೈಲಿ ವಾಪಸ್..!

ಬೆಂಗಳೂರು: ಮುಂಬೈನಲ್ಲಿರೋ ಅತೃಪ್ತ ಶಾಸಕರೆಲ್ಲರೂ ನನ್ನ ಸ್ನೇಹಿತರು ಅವರಿಗೆ ತಿಳುವಳಿಕೆ ಹೇಳಿ ವೈಯಕ್ತಿಕವಾಗಿ ಮಾತನಾಡಿಕೊಂಡು ಬರ್ತೀನಿ ಅಂತ ಬಹಳ ಹುಮ್ಮಸ್ಸಿನಿಂದ ಮುಂಬೈಗೆ ತೆರಳಿದ್ದ ಸಚಿವ ಡಿಕೆಶಿ ಇದೀಗ ಬರಿಗೈಲಿ ವಾಪಸ್ಸಾಗಲಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಅತೃಪ್ತರು ತಂಗಿದ್ದ ರಿನೈಸೆನ್ಸ್ ಹೋಟೆಲ್ ಒಳಕ್ಕೆ ಹೋಗಲು ಯತ್ನಸಿದ್ದ ಸಚಿವ ಡಿಕೆಶಿಗೆ ಮುಂಬೈ ಪೊಲೀಸರು ತಡೆಯೊಡ್ಡಿದ್ರು....

ವಿಧಾನಸೌಧದಲ್ಲಿ ಬಿಜೆಪಿ-ಕಾಂಗ್ರೆಸ್ ಗಲಾಟೆ..!

ಬೆಂಗಳೂರು: ಸ್ವೀಕರ್ ಗೆ ರಾಜೀನಾಮೆ ಸಲ್ಲಿಸಿ ತೆರಳುತ್ತಿದ್ದ ಶಾಸಕ ಸುಧಾಕರ್ ರನ್ನು ಕಾಂಗ್ರೆಸ್ ಮುಖಂಡರು ಕೂಡಿ ಹಾಕಿದ್ದಾರೆ ಅಂತ ಆರೋಪಿಸಿ ಬಿಜೆಪಿ ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ವಾಗ್ವಾದಕ್ಕಿಳಿದು ಶಕ್ತಿ ಸೌಧದಲ್ಲಿ ಗದ್ದಲಕ್ಕೆ ನಾಂದಿ ಹಾಡಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್ ರಾಜೀನಾಮೆ ನೀಡಿ ಸ್ಪೀಕರ್ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ...

ಕಾಂಗ್ರೆಸ್ ನ ಮತ್ತೆರಡು ವಿಕೆಟ್ ಪತನ- ಶಾಸಕ ಸುಧಾಕರ್, ಎಂ.ಟಿ.ಬಿ ನಾಗರಾಜ್ ರಾಜೀನಾಮೆ..!

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಉಂಟಾಗಿರೋ ಬಿಕ್ಕಟ್ಟು ಮತ್ತಷ್ಟು ಕಗ್ಗಾಂಟಾಗುತ್ತಿದ್ದು ಇಂದು ಕಾಂಗ್ರೆಸ್ ನ ಇಬ್ಬರು ಶಾಸಕರು ರಾಜೀನಾಮೆ ನೀಡಿ ದೋಸ್ತಿಗೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ದೋಸ್ತಿಗಳು ಕಣ್ ಕಣ್ ಬಿಡುವಂತಾಗಿದೆ. ಮಂತ್ರಿಗಿರಿ ಕೈ ತಪ್ಪಿದ ಹಿನ್ನೆಲೆಯಲ್ಲಿ ದೋಸ್ತಿ ವಿರುದ್ಧ ಅಸಮಾಧಾನಗೊಂಡು ರೆಬೆಲ್ ಆಗಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಸುಧಾಕರ್ ಸ್ಪೀಕರ್ ಕಚೇರಿಗೆ...

ರೈಲುಗಳಲ್ಲಿ ನಕಲಿ ನೀರು ಮಾರಾಟ- 800 ಜನರ ಬಂಧನ

ನವದೆಹಲಿ: ಇನ್ನು ಮುಂದೆ ರೈಲುಗಳಲ್ಲಿ ಪ್ರಯಾಣ ಮಾಡೋವಾಗ ಬಾಟಲಿ ನೀರುಗಳನ್ನು ಕೊಂಡುಕೊಳ್ಳೋ ಮುನ್ನ ಎಚ್ಚರದಿಂದಿರಿ. ಯಾಕಂದ್ರೆ ದೇಶಾದ್ಯಂತ ರೈಲುಗಳಲ್ಲಿ ನಕಲಿ ನೀರು ಬಾಟಲಿಗಳ ಮಾರಾಟ ಜಾಲ ಬೆಳಕಿಗೆ ಬಂದಿದ್ದು, ಸುಮಾರು 800 ಮಂದಿಯನ್ನು ಬಂಧಿಸಲಾಗಿದೆ. ರೈಲುಗಳಲ್ಲಿ ನೀರು ಬಾಟಲಿಗಳಿಗೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ರೈಲ್ವೇ...

ಐಸಿಸಿ ವಿಶ್ವಕಪ್- ಭಾರತಕ್ಕೆ 240 ರನ್ ಗುರಿ ನೀಡಿದ ನ್ಯೂಜಿಲೆಂಡ್

ಇಂಗ್ಲೆಂಡ್: ಟೀಂ ಇಂಡಿಯಾ- ನ್ಯೂಜಿಲೆಂಡ್ ನಡುವಿನ ಏಕ ದಿನ ವಿಶ್ವಕಪ್ ನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಇದೀಗ ಕ್ಲೈಮಾಕ್ಸ್ ತಲುಪಿದೆ. ಇಂದು ಇನ್ನಿಂಗ್ಸ್ ಪೂರೈಸಿರೋ ನ್ಯೂಜಿಲೆಂಡ್ ತಂಡ ಭಾರತಕ್ಕೆ 240 ರನ್ ಗಳ ಗುರಿ ನೀಡಿದೆ. ನಿನ್ನೆ ಮಂಗಳವಾರ ಮಳೆಯಿಂದಾಗಿ ನ್ಯೂಜಿಲೆಂಡ್-ಭಾರತ ನಡುವಿನ ಪಂದ್ಯ ಸ್ಥಗಿತಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್...

ಕೈ ಚೆಲ್ಲಿದ ರಾಜ್ಯಪಾಲರು- ಬಿಜೆಪಿ ನಿಯೋಗಕ್ಕೆ ಹಿನ್ನಡೆ..!

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅತೃಪ್ತರ ರಾಜೀನಾಮೆಯನ್ನು ಊರ್ಜಿತ ಗೊಳಿಸಿ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗಕ್ಕೆ ಹಿನ್ನಡೆಯಾಗಿದೆ. ಶಾಸಕರ ರಾಜೀನಾಮೆ ಅಂಗೀಕಾರ ವಿಚಾರವಾಗಿ ವಿಧಾನಸಭಾ ಸ್ವೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿದ್ದಾರೆ ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಶಾಸಕರ ರಾಜೀನಾಮೆಯನ್ನು...

About Me

32780 POSTS
0 COMMENTS
- Advertisement -spot_img

Latest News

Political News: ಬಿ.ವೈ.ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್

Political News: ಸಿದ್ದರಾಮಯ್ಯ ಪಾಪ ಬಹಳ ಅತ್ಯಂತ ಸ್ವಚ್ಛ ರಾಜಕಾರಣಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ...
- Advertisement -spot_img