Saturday, July 27, 2024

Latest Posts

ಹೃದಯಾಘಾತದಿಂದ ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ನಿಧನ..

- Advertisement -

Movie News: ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 48 ವರ್ಷದ ಡ್ಯಾನಿಯಲ್ ಎದೆ ನೋವಿನಿಂದ ಚೆನ್ನೈ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಡ್ಯಾನಿಯಲ್ ನಿಧನರಾಗಿದ್ದಾರೆ. ಇಂದು ಡ್ಯಾನಿಯಲ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಡ್ಯಾನಿಯಲ್ ಸಾವಿಗೆ ತಮಿಳು ಸೇರಿ, ಭಾರತೀಯ ಚಿಂತ್ರರಂಗ ಸಂತಾಪ ಸೂಚಿಸಿದೆ.

ಚಿತ್ತಿ ಹೆಸರಿನ ಧಾರಾವಾಹಿಯಲ್ಲಿ ಡ್ಯಾನಿಯಲ್ ಬಾಲಾಜಿ ನಟಿಸಿದ್ದರು. ಕಮಲ್ ಹಾಸನ್‌ ನಟನೆಯ ಮರುಡನಯಗಂ ಸಿನಿಮಾದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಡ್ಯಾನಿಯಲ್ ಬಾಲಾಜಿ, ನಟನೆಯಲ್ಲಿ ಆಸಕ್ತಿ ಹೊಂದಿ, ಮುಂದಿನ ದಿನಗಳಲ್ಲಿ ಕಮಲ್ ಜೊತೆಯೇ ತೆರೆ ಹಂಚಿಕೊಂಡರು. ವೆಟ್ಟೈಯಾಡು ವಿಲೈಯಾಡು ಸಿನಿಮಾದಲ್ಲಿ ಡ್ಯಾನಿಯಲ್ ಕಮಲ್ ಹಾಸನ್ ಜೊತೆ ನಟಿಸಿದರು.

ಬಳಿಕ ಡ್ಯಾನಿಯಲ್‌ಗೆ ನಟನೆಯಲ್ಲಿ ಉತ್ತಮ ಅವಕಾಶ ದೊರಕಿ ಬಂದು, ಅವರು ತಮಿಳಿನ ಅತ್ಯುತ್ತಮ ಖಳನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಿನ್ನೆ ರಾತ್ರಿ ಡ್ಯಾನಿಯಲ್ ಹೃದಯಾಘಾತದಿಂದ ಮೃತಪಟ್ಟಿದ್ದು, ಸಂಬಂಧಿಕರು, ತಾರೆಯರು ಸಂತಾಪ ಸೂಚಿಸಿದ್ದಾರೆ.

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಯಾವುದೇ ಗೊಂದಲಗಳಿಲ್ಲ. ಈ ಸಭೆಯ ಮೂಲಕ ಎಲ್ಲರಿಗೂ ಸ್ಟ್ರಾಂಗ್ ಮೆಸೇಜ್ ಹೋಗಿದೆ: ಪ್ರಜ್ವಲ್ ರೇವಣ್ಣ

- Advertisement -

Latest Posts

Don't Miss