Tuesday, April 22, 2025

Latest Posts

6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

- Advertisement -

ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು ಬಂದಿದೆ. ಹೈದರಾಬಾದ್‌ನ ಈ ವ್ಯಕ್ತಿ 8,428 ಪ್ಲೇಟ್ ಇಡ್ಲಿಯನ್ನ ಆರ್ಡರ್ ಮಾಡಿದ್ದಾನೆ.

ಇದು ಬರೀ ತನಗಷ್ಟೇ ತಿನ್ನಲಲ್ಲ ಬದಲಾಗಿ ತನ್ನ ಸಂಬಂಧಿಕರಿಗೆ, ಸ್ನೇಹಿತರಿಗೆ ಕೂಡ ಆರ್ಡರ್ ಮಾಡಿದ್ದಾನೆ. ಹಾಗಾಗಿ ಇಷ್ಟು ಬೆಲೆ ಇಡ್ಲಿ ಆರ್ಡರ್ ಆಗಿದೆ. ಹೈದರಾಬಾದ್, ಬೆಂಗಳೂರು, ಚೆನ್ನೈ, ಕೊಯಂಬತ್ತೂರ್, ಮುಂಬೈ ಸೇರಿ, ಹಲವು ಸಿಟಿಗಳಲ್ಲಿ ಜನ ಹೆಚ್ಚಾಗಿ ಇಡ್ಲಿಯನ್ನೇ ಆರ್ಡರ್ ಮಾಡಿದ್ದಾರಂತೆ. ಬೆಂಗಳೂರಿಗರು ರವಾ ಇಡ್ಲಿ ಆರ್ಡರ್ ಮಾಡಿದ್ರೆ, ತಮಿಳಿಗರು ತುಪ್ಪ ಬೆರೆಸಿದ ಪುಡಿ ಇಡ್ಲಿಗೆ ಮಾನ್ಯತೆ ಕೊಟ್ಟಿದ್ದಾರೆ. ಇನ್ನು ಸಾಧಾ ಇಡ್ಲಿ ಅಂದ್ರೆ ಹಲವರಿಗೆ ಇಷ್ಟ ಅಂತೆ. ತಟ್ಟೆ ಇಡ್ಲಿ, ಮಿನಿ ಇಡ್ಲಿಗೂ ಭಾರೀ ಬೇಡಿಕೆ ಇದೆ.

ಇನ್ನು ತಮ್ಮ ಇಡ್ಲಿಗೆ ಮ್ಯಾಚ್ ಆಗುವಂತೆ, ಕೊಬ್ಬರಿ ಚಟ್ನಿ, ಚಟ್ನಿ ಪುಡಿ, ಟೀ, ಕಾಫಿ, ಮೆದು ವಡಾ, ಸಾಗು,ಕೆಂಪು ಚಟ್ನಿ, ಜೈನ್ ಸಾಂಬಾರ್ ಕೂಡ ಆರ್ಡರ್ ಮಾಡಿದ್ದಾರೆ. ಪ್ರತೀಬಾರಿಯೂ ಹೆಚ್ಚು ಸೇಲ್ ಆಗುವ ತಿಂಡಿ ಅಂದ್ರೆ ಇಡ್ಲಿಯಾಗಿದೆ. ಎರಡನೇಯದಾಗಿ ಸ್ವಿಗ್ಗಿಯಲ್ಲಿ ಹೆಚ್ಚು ಸೇಲ್ ಆಗಿರುವ ತಿಂಡಿ ಅಂದ್ರೆ ಮಸಾಲಾ ದೋಸೆ.

ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..

ಅಸೆಂಬ್ಲಿಯಲ್ಲಿ ಪೋರ್ನ್ ವೀಡಿಯೋ ಕಂಡ ತ್ರಿಪುರಾ ಬಿಜೆಪಿ ಎಂಎಲ್ಎ..

ಲಿಫ್ಟ್ನ ಬಾಗಿಲಿಗೆ ಸಿಲುಕಿ ಬಾಲಕ ಸಾವು..

- Advertisement -

Latest Posts

Don't Miss