Tuesday, April 15, 2025

Latest Posts

Sandalwood News: ರಿಲೇಷನ್‌ಶಿಪ್‌ ಬಗ್ಗೆ ರಶ್ಮಿಕಾ ಮಾತು ಬಾಯ್ ಫ್ರೆಂಡ್ ಯಾರು ಗೊತ್ತಾ?

- Advertisement -

Sandalwood News: ಸಿನಿಮಾ ಅಂದರೆ ಅದೊಂಥರಾ ಮಜವೆನಿಸೋ ರಂಗ. ಅಲ್ಲಿರುವ ಕೆಲವು ಸ್ಟಾರ್ಸ್ ಗಳ ಚಿತ್ರಗಳಿಗಿಂತ ಅವರ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆ ಆಗುತ್ತಿರುತ್ತವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇರಲಿ, ತೆಲುಗಿನ ಸ್ಟಾರ್ ನಟ ಪ್ರಭಾಸ್ ಇರಲಿ ಇವರಿಬ್ಬರ ಸುದ್ದಿ ಆಗಾಗ ಬರುತ್ತಲೇ ಇರುತ್ತೆ. ಅವರು ಯಾರೊಂದಿಗೆ ಡೇಟಿಂಗ್ ಮಾಡ್ತಾರೆ, ಮದ್ವೆ ಯಾವಾಗ ಇವಿಷ್ಟೇ ಪ್ರಶ್ನೆಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ.

ಇವರ ಜೊತೆಗೀಗ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಸುದ್ದಿ ಕೂಡ ಮುಂಚೂಣಿಯಲ್ಲಿದೆ. ಹಲವು ನಟ, ನಟಿಯರು ಡೇಟಿಂಗ್ ವಿಚಾರದಲ್ಲಿ ಸುದ್ದಿಯಾದರೆ, ಇನ್ನೂ ಕೆಲವರು ಸೆಲಿಬ್ರಿಟಿಗಳು ಡೇಟಿಂಗ್ ವಿಷಯಕ್ಕೆ ಸದ್ದು ಮಾಡ್ತಾರ. ಈಗ ಸದ್ಯಕ್ಕೆ ಭಾರೀ ಸುದ್ದಿಯಲ್ಲಿರೋದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇವರಿಬ್ಬರೂ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ ಅನ್ನೊದೇ ಸುದ್ದಿ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ. ಇವರಿಬ್ಬರೂ ಆದಷ್ಟು ಬೇಗ ಮದ್ವೆ ಆಗ್ತಾರೆ ಎಂಬ ನಿಜವಾದ ಸುದ್ದಿಯೋ ಅಥವಾ ಗಾಸಿಪ್ಪೋ ಆಗಾಗ ಹರಿದಾಡುತ್ತಲೇ ಇದೆ. ಆದರೆ, ಈವರೆಗೆ ಇವರಿಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಆದರೀಗ ಇದೇ ಮೊದಲ ಬಾರಿಗೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ ಅನ್ನೋದು ಈ ಹೊತ್ತಿನ ಸುದ್ದಿ.

ಸಿನಿಮಾ ಮಂದಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಅವರು ನಿಂತ್ರೂ, ಕುಂತ್ರೂ, ಹೊಸ ಕಾರು, ಬೈಕ್ ಇತ್ಯಾದಿ ಏನೇ ಮಾಡಿದ್ರೂ ಸಖತ್ ಸುದ್ದಿ ಬಿಡಿ. ಅದರಲ್ಲೂ ಈ ಡೇಟಿಂಗ್ ಮತ್ತು ಮದ್ವೆ ಅನ್ನೋ ಸುದ್ದಿ ಹರಿದಾಡಿದರಂತೂ ಅದು ಸೆನ್ಸೇಷನಲ್ ನ್ಯೂಸು. ಈಗ ರಶ್ಮಿಕಾ ಮಂದಣ್ಣ ಕೂಡ ಅಂಥದ್ದೊಂದು ಸುದ್ದಿಗೆ ಕಾರಣರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ಕೊಟ್ಟಿದ್ದರು. ಆ ಸಂದರ್ಶನದ ವೇಳೆ ಪುರುಷನ ಯಾವ ಗುಣ ಅವರನ್ನು ಆಕರ್ಷಿಸುತ್ತೆ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸುವ ವೇಳೆ ತಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂಬ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಆದರೆ ತಾನು ಯಾರೊಂದಿಗೆ ರಿಲೇಷನ್ ಶಿಪ್ ಇದ್ದೇನೆ ಅನ್ನೊದನ್ನು ಹೇಳಿಲ್ಲ. ಅಪ್ಪಿತಪ್ಪಿಯೂ ಅವರು ನಟ ವಿಜಯ್ ದೇವರಕೊಂಡ ಹೆಸರನ್ನೂ ಹೇಳಿಕೊಂಡಿಲ್ಲ.

ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣಗೆ ಯಾವ ಸ್ಥಳದಲ್ಲಿ ಖುಷಿಯಾಗಿ ಇರುತ್ತೀರಿ ಎಂಬ ಪ್ರಶ್ನೆ ಬಂದಿದೆ. ಆ ಪ್ರಶ್ನೆಗೆ ರಶ್ಮಿಕಾ “ಮನೆಯೇ ನನ್ನ ಹ್ಯಾಪಿ ಪ್ಲೇಸ್” ಯಶಸ್ಸು ಬರುತ್ತೆ ಹೋಗುತ್ತೆ. ಆದರೆ, ನನ್ನ ಮನೆ ಯಾವಾಗಲೂ ಇರುತ್ತೆ. ಆಗ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ತನ್ನ ರಿಲೇಷನ್‌ಶಿಪ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.

“ನನಗೆ ಅದೆಷ್ಟೇ ಪ್ರೀತಿ, ಖ್ಯಾತಿ ಸಿಕ್ದರೂ ನಾನು ಕೇವಲ ಒಬ್ಬಳು ಮಗಳು, ಒಬ್ಬಳು ಸಹೋದರಿ, ಕೇವಲ ಒಬ್ಬ ಸಂಗಾತಿ. ಆ ಖಾಸಗಿ ಜೀವನಕ್ಕೆ ನಾನು ಗೌರವ ಕೊಡುತ್ತೇನೆ. ಸದ್ಯ ನಾನು ಈ ಎರಡೂ ಪ್ರಪಂಚವನ್ನು ಎಂಜಾಯ್ ಮಾಡ್ತೀನಿ. ಆದರೆ ನಾನು ಹೇಗೆಂದರೆ, ನನ್ನ ಈ ಜೀವನದಿಂದ ವೈಯಕ್ತಿಕ ಜೀವನವನ್ನು ಕಾಪಾಡಿಕೊಳ್ತೀನಿ. ಎಂದಿದ್ದಾರೆ. ಇದೇ ವೇಳೆ ಪುರುಷನ ಯಾವ ಗುಣಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? ” ಕಣ್ಣುಗಳು ಒಬ್ಬ ವ್ಯಕ್ತಿಯ ಆತ್ಮದ ಕಿಟಕಿಯಿದ್ದಂತೆ. ನಾನು ಅದನ್ನು ನಂಬುತ್ತೇನೆ. ನಾನು ಯಾವಾಗಲೂ ನಗುತ್ತಿರುತ್ತೇನೆ. ಈ ಕಾರಣಕ್ಕೆ ನಾನು ನಗು ಮುಖವಿರುವ ಜನರ ಕಡೆಗೆ ಹೆಚ್ಚು ಆಕರ್ಷಿತನಾಗುತ್ತೇನೆ.” ಎಂದಿದ್ದಾರೆ. ಆದರೆ, ಎಲ್ಲಿಯೂ ವಿಜಯ್ ದೇವರಕೊಂಡ ಹೆಸರನ್ನು ಹೇಳಿಲ್ಲ. ಅತ್ತ ಕೆಲವು ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ ಕೂಡ ಡೇಟಿಂಗ್ ಮಾಡುತ್ತಿರುವ ವಿಷಯ ಒಪ್ಪಿಕೊಂಡಿದ್ದರು. “ನನಗೀಗ 35 ವರ್ಷ. ನಾನಿನ್ನು ಸಿಂಗಲ್ ಆಗಿದ್ದೇನೆ ಅಂತ ನಿಮಗೆ ಅನಿಸುತ್ತಿದೆಯೇ?” ಎನ್ನುವ ಮೂಲಕ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದರು.

ಅದೇನೆ ಇರಲಿ, ಯಾವ ನಟ,ನಟಿಯಾಗಲಿ, ನೇರವಾಗಿ ಎಲ್ಲವನ್ನೂ ಹೇಳುವುದಿಲ್ಲ. ಆದರೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇವರಿಬ್ಬರ ಮಧ್ಯೆ ಏನೋ ಇದೆ ಎಂಬ ಮಾತು ಇದ್ದೇ ಇದೆ. ಇದಕ್ಕೆ ಪೂರಕ ಎಂಬಂತೆ ಅವರಿಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅದೂ ಕೂಡ ಅವರಿಬ್ಬರ ಡೇಟಿಂಗ್ ಗೆ ಸಾಕ್ಷಿ ಎನ್ನಲಾಗುತ್ತಿದೆಯಾದರೂ, ಇಬ್ಬರು ಪರಸ್ಪರ ಭೇಟಿ ಆಗುತ್ತಿದ್ದಾರೆ. ಹರಟುತ್ತಾರೆ. ಆದರೆ, ಡೇಟಿಂಗ್ ವಿಚಾರ ಮಾತ್ರ ಹಂಚಿಕೊಂಡಿಲ್ಲ. ಸುದ್ದಿ ಹರಡಿದರೂ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಇಬ್ಬರೂ ಸದ್ಯ ಚಿತ್ರರಂಗದಲ್ಲಿ ಬೇಡಿಕೆ ಇಟ್ಟುಕೊಂಡವರು. ಹಾಗೆ ನೊಡಿದರೆ, ರಶ್ಮಿಕಾ ಈಗ ಎಲ್ಲೆಡೆ ಬೇಡಿಕೆ ಇರುವ ನಟಿ. ಅದರಲ್ಲೂ ಬಾಲಿವುಡ್ ಅಂಗಳದಲ್ಲಂತೂ ಸಿಕ್ಕಾಪಟ್​ಟೆ ಬಿಜಿ. ಆ ಬಿಜಿ ನಡುವೆಯೂ ಡೇಟಿಂಗ್ ಮಾಡಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಇದ್ದೇ ಇದೆ. ಅದೇನೆ ಇರಲಿ, ಎಲ್ಲದ್ದಕ್ಕೂ ಕಾಲ ಉತ್ತರ ಕೊಡುತ್ತೆ. ಅಲ್ಲಿಯವರೆಗೂ ಈ ಅಂತೆ-ಕಂತೆಯ ಗಾಸಿಪ್ ಸುದ್ದಿಗಳಿಗೇನೂ ಕಮ್ಮಿ ಇಲ್ಲ ಬಿಡಿ.

- Advertisement -

Latest Posts

Don't Miss