ನವದೆಹಲಿ: 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣವಚನ ಸ್ವೀಕರಿಸಿದ್ರು. ನವದೆಹಲಿಯ ರಾಷ್ಟ್ರಪತಿ ಭವನದೆದುರಿನ ಫೋರ್ ಕೋರ್ಟ್ ನಲ್ಲಿ ಸಜ್ಜಾಗಿದ್ದ ಬೃಹತ್ ವೇದಿಕೆಯಲ್ಲಿ ಮೋದಿ ಸೇರಿದಂತೆ 58 ಮಂದಿ ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು.
ಇವತ್ತು ನವದೆಹಲಿಯ ರಾಷ್ಟ್ರಪತಿ ಭವನದೆದುರು ಹಬ್ಬದ ಸಂಭ್ರಮ. ಎಲ್ಲೆಡೆ ಮೋದಿ ಮೋದಿ ಎಂಬ ಕೂಗು ಕವಿಗಡಚಿಕ್ಕುತ್ತಿತ್ತು. ಸರಿಯಾಗಿ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಿಸೋದಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.ರಾಷ್ಟ್ರಪತಿ ಭವನದಲ್ಲಿ ನಡೆಯಲಿರೋ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗೋ ನಿರೀಕ್ಷೆ ಇದ್ದು, ಸಮಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ.
ಸಮಾರಂಭದಲ್ಲಿ ಬಾಂಗ್ಲಾದೇಶ್,ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್, ಥೈಲ್ಯಾಂಡ್, ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಇಂದು ಸಂಜೆ...
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರೋ ಶೋಭಾ ಕರಂದ್ಲಾಜೆ ಈ ಬಾರಿಯಾದ್ರೂ ತಮಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತೆ ಅಂತ ನಿರೀಕ್ಷೆಯಿಟ್ಟುಕೊಂಡಿದ್ರು. ಆದ್ರೆ ಇದೀಗ ಕ್ಯಾಬಿನೇಟ್ ನ ಬಹುತೇಕ ಸದಸ್ಯರ ಹೆಸರು ಫೈನಲ್ ಆಗಿದ್ದು, ಶೋಭಾ ಕರಂದ್ಲಾಜೆ ಹೆಸರನ್ನ ಕೈಬಿಡಲಾಗಿದೆ.
ಇದರಿಂದ ಬೇಸರಗೊಂಡಿರೋ ಸಂಸದೆ ಶೋಭಾ ಕರಂದ್ಲಾಜೆ ಬೆಳಗ್ಗಿನಿಂದಲೂ ತಮ್ಮ ಮೊಬೈಲ್...
ನೋಡ್ರಿ ಮೋದಿ ಮತ್ತೆ ಪ್ರಧಾನಿಯಾದ್ರೆ ನಾನು ರಾಜಕೀಯ ನಿವೃತ್ತಿ ಪಡೀತೀನಿ ಅಂತ ಫಲಿತಾಂಶಕ್ಕೂ ಮೊದಲು ಹೆಚ್.ಡಿ ರೇವಣ್ಣ ಅಬ್ಬರಿಸಿದ್ರು. ಆದ್ರೆ, ಫಲಿತಾಂಶ ಬಂದ್ಮೇಲೆ ರೇವಣ್ಣ ಮಾಧ್ಯಮದವರ ಹತ್ತಿರನೂ ಸುಳೀತಿಲ್ಲ. ಯಾವಾಗ ಸ್ವಾಮಿ ರಾಜಕೀಯ ನಿವೃತ್ತಿ ತಗೋತೀರಾ ಅಂತ ಕೇಳೋದಕ್ಕೂ ಸಿಗ್ತಿಲ್ಲ. ಇತ್ತ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ದೋಸ್ತಿ ಪಕ್ಷ 22 ಸೀಟ್ ಗೆಲ್ಲುತ್ತೆ....
ಬೆಳಗಾವಿ: ಅತ್ತ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಂಪುಟ ಪುನಾರಚನೆ, ವಿಸ್ತರಣೆ ಕಸರತ್ತು ನಡೀತಿದ್ರೆ, ಇತ್ತ ಜೆಡಿಎಸ್ ನ ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆಯಾಗುವ ಅನುಮಾನ ಮೂಡಿಸಿದ್ದಾರೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸದಲ್ಲಿ ಮಾತನಾಡುತ್ತಿದ್ದ ಸಚಿವ ಜಿ.ಟಿ ದೇವೇಗೌಡ ಎಂದೂ ಇಲ್ಲದೆ ಇವತ್ತು ಮೋದಿಯವರನ್ನ ಕೊಂಡಾಡಿದ್ದಾರೆ. ಪ್ರಧಾನಮಂತ್ರಿ...
ಕರ್ನಾಟಕದ ರಿಯಲ್ ಸಿಂಗಂ ಖಡಕ್ ಪೊಲೀಸ್ ಅಧಿಕಾರಿ ರಾಜೀನಾಮೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣವಂತೆ. ಈ ರೀತಿಯ ಸುದ್ದಿ ಈಗ ಕೇಳಿ ಬರ್ತಿದೆ.
ಐಪಿಎಸ್ ಅಧಿಕಾರಿ ಅಣ್ಣಾಮಲೈ ವಯಕ್ತಿ ಕಾರಣ ನೀಡಿ ಪೊಲೀಸ್ ಕೆಲಸಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಣ್ಣಾಮಲೈ ಪೊಲೀಸ್ ಇಲಾಖೆಯಲ್ಲಿ ತಮ್ಮ ದಕ್ಷತೆಯಿಂದಾಗಿಯೇ ಕಡಿಮೆ ಸೇವಾವಧಿಯಲ್ಲೇ ಕೋಟ್ಯಂತರ ಕನ್ನಡಿಗರ ಮನಗೆದ್ದಿದ್ದಾರೆ.
ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ...
ಚೆನ್ನೈ: ನೆಹರೂ ಮತ್ತು ರಾಜೀವ್ ಗಾಂಧಿ ಬಳಿಕ
ಮೋದಿಯೂ ಕೂಡ ಅವರಂತೆಯೇ ವರ್ಚಸ್ಸು ಹೊಂದಿರೋ ನಾಯಕ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಫಲಿತಾಂಶದ ಕುರಿತಾಗಿ ಮಾತನಾಡಿದ ಸೂಪರ್ ಸ್ಟಾರ್, ಇದು ಬಿಜೆಪಿ ಗೆಲುವಲ್ಲ. ಬದಲಾಗಿ ಮೋದಿಯವರ ಗೆಲುವು ಅಂತ ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ ನ ನೆಹರೂ ಮತ್ತು...
ಬೆಂಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ
ಆಯ್ಕೆಯಾಗಿರೋ ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವೆ ಸ್ಥಾನ ನೀಡುವ ಬಗ್ಗೆ ವರಷ್ಠರಿಗೆ ಮನವರಿಕೆ ಮಾಡಿಕೊಳ್ಳುತ್ತೇನೆ ಅಂತ ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ವೈ, ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ...
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ....
ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರನ್ನ ಮಾಜಿ ಡಿಸಿಎಂ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಚುನಾವಣೆ ಸಮಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನರೇಂದ್ರ ಮೋದಿ ಅವ್ರನ್ನ ತೆಗಳಿದರು. ಕಳ್ಳರು, ಸುಳ್ಳರು, ಜೈಲಿಗೆ ಹೋಗಿ ಬಂದವರು ಅಂತ ಹೇಳಿದ್ರು.
ಇನ್ನಾದ್ರೂ ಬಿಎಸ್ ವೈ ಅವ್ರ ಬಗ್ಗೆ ಗೌರವ ಕೊಟ್ಟು...