ಹಿಂದೂ ಧರ್ಮದಲ್ಲಿ ಹಲವು ವೃಕ್ಷಗಳಿಗೆ ಪೂಜನೀಯ ಸ್ಥಾನವನ್ನು ಕೊಡಲಾಗಿದೆ. ಆಯಾ ದಿನಗಳಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ. ಹಾಗಾದ್ರೆ ಯಾಕೆ ವೃಕ್ಷಗಳನ್ನ ಪೂಜಿಸಲಾಗುತ್ತದೆ..? ಯಾವ ವೃಕ್ಷದಲ್ಲಿ ಯಾವ ದೇವರಿದ್ದಾರೆ..? ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಾಳೆಗಿಡ: ಬಾಳೆಗಿಡಕ್ಕೆ ಕೂಡ ಹಿಂದೂಗಳು ದೈವಿಕ ಸ್ಥಾನ ಕೊಟ್ಟಿದ್ದಾರೆ. ಯಾಕಂದ್ರೆ ಬಾಳೆಗಿಡದಿಂದ ಬರು ಬಾಳೆಹಣ್ಣು ನೈವೇದ್ಯಕ್ಕೆ ಶ್ರೇಷ್ಠವೆಂದು. ಅಲ್ಲದೇ, ಯಾರ ಮನೆಯಲ್ಲಿ ಬಾಳೆಗಿಡವಿರುತ್ತದೆಯೋ, ಅದು ಸೊಂಪಾಗಿ ಬೆಳೆಯುತ್ತದೆಯೋ, ಆ ಮನೆಯಲ್ಲಿ ಹೆಚ್ಚು ಧನಾತ್ಮಕ ಶಕ್ತಿ ಇರುತ್ತದೆ. ಅಲ್ಲದೇ ಈ ಗಿಡದಲ್ಲಿ ಬ್ರಹಸ್ಪತಿ ದೇವರು ಮತ್ತು ನಾರಾಯಣ ವಾಸವಾಗಿರುತ್ತಾರೆ ಅನ್ನೋ ನಂಬಿಕೆ ಇದೆ. ವಿವಾಹ ವಿಳಂಬವಾಗುತ್ತಿದ್ದರೆ, ಅಥವಾ ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ, ಬಾಳೆಗಿಡದ ಕೆಳಗೆ ತುಪ್ಪದ ದೀಪ ಹಚ್ಚಿಡಿ. ಮತ್ತು ಅರಿಶಿನ ನೀರನ್ನ ಬಾಳೆಗಿಡದ ಬುಡಕ್ಕೆ ಹಾಕಿ.
ನೆಲ್ಲಿಕಾಯಿ ಮತ್ತು ತುಳಸಿಯ ಪೂಜೆ: ತುಳಸಿ ಗಿಡ ಯಾರ ಮನೆಯಲ್ಲಿ ಸೊಂಪಾಗಿ ಬೆಳೆದಿರುತ್ತದೆಯೋ, ಯಾರು ಬೆಳಿಗ್ಗೆ ಮತ್ತು ಸಂಜೆ ತುಳಸಿಗೆ ದೀಪ ಹಚ್ಚಿ, ನೀರು ಹಾಕುತ್ತಾರೋ, ಅಂಥವರ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸುತ್ತಾಳೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ತುಳಸಿ ಗಿಡಕ್ಕೆ ದೈವಿಕ ಸ್ಥಾನವನ್ನ ನೀಡಲಾಗಿದೆ. ವಿಷ್ಣುಪ್ರಿಯೆಯಾಗಿರುವ ತುಳಸಿ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವಂಥವಳು. ಇನ್ನು ಏಕಾದಶಿಯ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆ ಮಾಡುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ.
ಬಿಲ್ವಪತ್ರೆ ಮತ್ತು ಅರಳಿ ಮರ: ಬಿಲ್ವದ ಮರ ಮತ್ತು ಅರಳಿಮರದಲ್ಲಿ ದೈವಿಕ ಶಕ್ತಿ ಇದೆ ಎಂದು ನಂಬಿಕೆ ಇದೆ. ಆಯಾ ದಿನಗಳಲ್ಲಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ, ಆರೋಗ್ಯ ಅಭಿವೃದ್ಧಿಯಾಗುತ್ತದೆ, ಸಂತಾನ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಬಿಲ್ವಪತ್ರೆಯ ಎಲೆಯನ್ನು ಶಿವನಿಗೆ ಅರ್ಪಿಸಿದ್ದಲ್ಲಿ, ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ.
ಶಮಿ ವೃಕ್ಷ: ಶಮಿ ವೃಕ್ಷಕ್ಕೆ ಪ್ರತೀ ಶನಿವಾರ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಅಲ್ಲದೇ ಶಮಿ ವೃಕ್ಷದ ಕೆಳಗೆ ಶನಿವಾರದ ದಿನ, ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು ಎಂದು ಹೇಳಲಾಗಿದೆ. ಇದರಿಂದ ಸುಖ ಸಮೃದ್ಧಿಯಾಗುವುದಲ್ಲದೇ, ದುಷ್ಟ ಶಕ್ತಿಗಳ ಕಾಟದಿಂದಲೂ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.