Wednesday, January 22, 2025

Latest Posts

Ugadi special : ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನ ಯಾಕೆ ತಿನ್ನಬೇಕು..?

- Advertisement -

ಯುಗಾದಿ ಅಂದ್ರೆ ಹಿಂದೂಗಳಿಗೆ ಶುಭಾರಂಭ ಎಂದರ್ಥ. ಹೊಸ ವರ್ಷವನ್ನ ಪದ್ಧತಿ ಪೂರ್ವಕವಾಗಿ, ದೇವರಿಗೆ ಪೂಜೆ ಸಲ್ಲಿಸಿ ಆಚರಿಸಲಾಗುತ್ತದೆ. ಮನೆಯನ್ನ ಕ್ಲೀನ್ ಮಾಡಿ, ಅಂಗಳ ಗುಡಿಸಿ, ರಂಗೋಲಿ ಹಾಕಿ, ಬೇವು ಬೆಲ್ಲ ತಿನ್ನುವ ಮೂಲಕ, ಜೀವನದಲ್ಲಿ ಸಿಹಿಯ ಜೊತೆ ಕಹಿಯೂ ಮುಖ್ಯವೆಂಬ ಸಂದೇಶವನ್ನು ಸಾರುವ ಹಬ್ಬವೇ ಯುಗಾದಿ. ಹಾಗಾದ್ರೆ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ಯಾಕೆ ತಿನ್ನಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹಿಂದೂಗಳಲ್ಲಿ ಆಚರಿಸುವ ಪ್ರತೀ ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ದೀಪಾವಳಿ ಸಮಯದಲ್‌ಲಿ ಎಣ್ಣೆ ಸ್ನಾನ ಮಾಡಲಾಗತ್ತೆ. ನವರಾತ್ರಿಗೆ ಉಪವಾಸ ಮಾಡಿ, ದೇವಿಯನ್ನ ಆರಾಧಿಸಲಾಗತ್ತೆ. ಯಾಕಂದ್ರೆ ಈ ಸಮಯದಲ್ಲಿ ನಾವು ಮಳೆಗಾಲ ಮುಗಿಸಿ, ಚಳಿಗಾಲಕ್ಕೆ ಹೋಗುತ್ತೇವೆ. ಈ ಸಮಯದಲ್ಲಿ ನಮ್ಮ ಆರೋಗ್ಯದಲ್ಲಿ ಏನೂ ಏರುಪೇರಾಗಬಾರದು ಅನ್ನೋ ಕಾರಣಕ್ಕೆ, ಈ ಸಮಯದಲ್ಲಿ ನಾವು ಉಪವಾಸ ಮಾಡಬೇಕು. ಹೀಗೆ ಎಲ್ಲ ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ.

ಅದೇ ರೀತಿ ಯುಗಾದಿಯ ಶುಭದಿನದಂದು ಬೇವು ಬೆಲ್ಲ ತಿನ್ನುವುದಕ್ಕೂ ಕೂಡ ಕಾರಣವಿದೆ. ಯುಗಾದಿಗೆ ಬೇವು ಬೆಲ್ಲ ತಿನ್ನೋಕ್ಕೆ ಮುಖ್ಯವಾದ ಕಾರಣ ಅಂದ್ರೆ, ಸಿಹಿ ಜೊತೆ ಕಹಿ ಕೂಡ ಜೀವನದಲ್ಲಿರಬೇಕು. ಆಗಲೇ ಅದಕ್ಕೊಂದು ಅರ್ಥಾ ಇರೋದು ಅನ್ನೋ ಕಾರಣಕ್ಕೆ, ಬೇವು ಬೆಲ್ಲವನ್ನ ಒಟ್ಟಿಗೆ ತಿನ್ನೋದು. ಅಲ್ಲದೇ, ವಸಂತ ಮಾಸ ಬಂದಾಗ, ಯುಗಾದಿ ಶುರುವಾಗೋದು. ಈ ಮಾಸದಲ್ಲಿ ಬೇವು ಬೆಲ್ಲ ತಿಂದರೆ, ಆರೋಗ್ಯ ಅಭಿವೃದ್ಧಿಯಾಗತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚತ್ತೆ ಅನ್ನೋ ಸಲುವಾಗಿ ಬೇವು ಬೆಲ್ಲವನ್ನ ತಿನ್ನಲಾಗತ್ತೆ.

ಅಲ್ಲದೇ, ಯುಗಾದಿ ಶುರುವಾಗುತ್ತಿದ್ದಂತೆ, ಬೇಸಿಗೆಯ ಧಗೆಯೂ ಹೆಚ್ಚಾಗತ್ತೆ. ಈ ಸಮಯದಲ್ಲಿ ತಲೆ ನೋವು, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು, ಚರ್ಮದ ಸಮಸ್ಯೆ ಹೀಗೆ ಹಲವಾರು ಸಮಸ್ಯೆ ಬಂದೊದಗುತ್ತದೆ. ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದಲ್ಲಿ, ನೀವು ಯುಗಾದಿಯಂದು ಬೇವು ಬೆಲ್ಲದ ಸೇವನೆಯನ್ನು ಮಿತವಾಗಿ ಮಾಡಬೇಕು. ಬೇವು ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂದು ಅತೀಯಾಗಿ ತಿಂದ್ರೆ, ಅದು ನಿಮ್ಮ ಆರೋಗ್ಯ ಉತ್ತಮಗೊಳಿಸಲುವ ಬದಲು, ಹಾಳು ಮಾಡಬಹುದು. ಹಾಗಾಗಿ ಕೊಂಚ ಕೊಂಚ ಬೇವು ಬೆಲ್ಲವನ್ನ ಯುಗಾದಿಯಂದು ತಿನ್ನಲಾಗತ್ತೆ.

ಬೇವಿನಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಗುಣವಿದೆ. ದೇಹವನ್ನು ತಂಪಾಗಿರಿಸುವ ಗುಣವಿದೆ. ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚಾಗುವ ಉಷ್ಣತೆಯನ್ನ ತಡೆಯುವ ಗುಣವಿದೆ. ಅಲ್ಲದೇ ಈ ಸಮಯದಲ್ಲಿ ಕಜ್ಜಿ, ತುರಿಕೆ, ಸೆಕೆ ಬೊಕ್ಕೆಯಾಗುವ ಸಂಭವವಿರುತ್ತದೆ. ಈ ಸಮದಯಲ್ಲಿ ನೀವು ಬೇವಿನ ಎಲೆಯ ರಸವನ್ನು ಗುಳ್ಳೆಯಾದ ಜಾಗದಲ್ಲಿ ಲೇಪಿಸಿದರೆ, ಆ ಗುಳ್ಳೆ, ತುರಿಕೆ ಎಲ್ಲವೂ ಎರಡೇ ದಿನದಲ್ಲಿ ಮಾಯವಾಗತ್ತೆ. ಅಲ್ಲದೇ, ಇದು ನಿಮ್ಮ ತ್ವಚೆಯನ್ನ ಆರೋಗ್ಯಕರವಾಗಿ ಇಡುವುದರಲ್ಲಿಯೂ ಸಹಕಾರಿಯಾಗಿದೆ. ಇನ್ನು ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮವಾದ, ಮತ್ತು ರುಚಿಯಾದ ಆಹಾರ ಕೂಡ. ಇವೆರಡರ ಸಂಗಮದಿಂದಲೇ, ಆರೋಗ್ಯ ಅಭಿವೃದ್ಧಿಯಾಗೋದು.

Ugadi Special: ಈ ಬಾರಿ ಯುಗಾದಿಗೆ ಈ ಸಿಹಿ ತಿಂಡಿ ಮಾಡಿ ನೋಡಿ..

Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್‌ ರೈಸ್..

Ugadi Special : ಯುಗಾದಿ ಹಬ್ಬಕ್ಕಾಗಿ ಹಾಲಿನ ಪಾಯಸದ ರೆಸಿಪಿ..

- Advertisement -

Latest Posts

Don't Miss