ಹಿಂದೂಗಳಲ್ಲಿ ಪವಿತ್ರವಾದ ವಸ್ತುಗಳಲ್ಲಿ ರುದ್ರಾಕ್ಷಿ ಕೂಡ ಒಂದು. ರುದ್ರಾಕ್ಷಿಯನ್ನು ಶಿವನ ಕಣ್ಣೆಂದು ಹೇಳಲಾಗತ್ತೆ. ಇದನ್ನ ಧರಿಸುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ರುದ್ರಾಕ್ಷಿ ಉದ್ಭವವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ..
ರುದ್ರಾಕ್ಷಿಯಲ್ಲಿ ಶಿವ ನೆಲೆಸಿರುತ್ತಾನೆಂದು ಹೇಳಲಾಗುತ್ತದೆ. ಎಲ್ಲ ನಿಯಮವನ್ನು ಅನುಸರಿಸಿ, ಸರಿಯಾದ ರೀತಿಯಲ್ಲಿ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ, ಅಂಥವರ ಮೇಲೆ ಶಿವನ ಕೃಪೆ ಇರುತ್ತದೆ ಅಂತಾ ಹೇಳಲಾಗುತ್ತದೆ. ಅಲ್ಲದೇ, ಮಹಾಮೃತ್ಯುಂಜಯ ಮಂತ್ರ ಜಪಿಸುವಾಗ, ರುದ್ರಾಕ್ಷಿ ಮಾಲೆಯನ್ನು ಹಿಡಿದೇ ಮಂತ್ರ ಜಪಿಸಿದ್ದಲ್ಲಿ ಅದರ ಪ್ರಭಾವ ಹೆಚ್ಚುತ್ತದೆ ಅಂತಾ ಹೇಳಲಾಗುತ್ತದೆ.
ಪದ್ಮ ಪುರಾಣದ ಪ್ರಕಾರ, ಶಿವನ ಕಣ್ಣೀರಿನಿಂದಲೇ ರುದ್ರಾಕ್ಷಿ ಉತ್ಪತ್ತಿಯಾಗಿದ್ದಂತೆ. ಸಾವಿರಾರು ವರ್ಷಗಳ ತನಕ ಶಿವ ತಪಸ್ಸಿಗೆ ಕುಳಿತಿದ್ದ. ಈ ತಪಸ್ಸು ಮುಗಿಸಿ, ಶಿವ ಕಣ್ಣು ತೆರೆದಾಗ, ಅವನ ಕಣ್ಣಿಂದ ಕೆಲ ಹನಿಗಳು ಬಿದ್ದವಂತೆ. ಆ ಕಣ್ಣೀರ ಹನಿಗಳೇ ರುದ್ರಾಕ್ಷಿ ಗಿಡ ಹುಟ್ಟಿದವು ಅಂತಾ ಹೇಳಲಾಗುತ್ತದೆ. ಈ ರುದ್ರಾಕ್ಷಿ ಗಿಡದಲ್ಲಿರುವ ಕಾಯಿಗಳೇ, ಒಣಗಿಸಿದಾಗ, ರುದ್ರಾಕ್ಷಿಯಾಗೋದು.
ಇನ್ನೊಂದು ಕಥೆಯ ಪ್ರಕಾರ, ಸತ್ಯಯುಗದಲ್ಲಿ ತ್ರಿಪುರ ಎಂಬ ರಾಕ್ಷಸನಿದ್ದ. ಅವನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದ. ಯುದ್ಧ ಸಾರಿ, ಹಲವು ದೇವತೆಗಳ ಪರ ಇರುವ ಸೈನಿಕರನ್ನು ಕೊಂದಿದ್ದ. ತನಗೆ ಬ್ರಹ್ಮನಿಂದ ವರ ಸಿಕ್ಕಿತ್ತು ಎಂಬ ಅಹಂ ಇತ್ತು ಅವನಿಗೆ. ಹಾಗಾಗಿ ದೇವತೆಗಳೆಲ್ಲ ಸೇರಿ, ಶಿವನ ಬಳಿ ಸಹಾಯ ಕೇಳಿದರು. ಕ್ರೋಧಿತನಾದ ಶಿವ, ತ್ರಿಪುರನ ಜೊತೆ ಯುದ್ಧ ಮಾಡಿ, ಅವರ ವಧೆ ಮಾಡಿದ. ಈ ವೇಳೆ ಶಿವನ ದೇಹದಿಂದ ಸುರಿದ ಬೆವರಿನ ಹನಿಯಿಂದ ರುದ್ರಾಕ್ಷಿ ಗಿಡ ಉದ್ಭವವಾಯಿತು ಅಂತಾ ಹೇಳಲಾಗತ್ತೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?