ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಈ ದಿನ ಪವಿತ್ರವಾದ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸೋಮವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಸೋಮವಾರ ಅನ್ನದ ಸೇವನೆ ಮಾಡುವುದು. ಸೋಮವಾರ ಯಾರು ಉಪವಾಸ ಮಾಡುತ್ತಾರೋ, ಅವರಿಗೆ ಮನುಷ್ಯ ಜನ್ಮದಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿಯೇ ಸೋಮವಾರ ಮರಣ ಹೊಂದಿದವರಿಗೆ ಪುಣ್ಯವಂತರು ಎಂದು ಹೇಳುತ್ತಾರೆ. ಹಾಗಾಗಿ ಸೋಮವಾರದಂದು ಅನ್ನ ಊಟ ಮಾಡಬಾರದು, ಅಕ್ಕಿ ಬೇಯಿಸಿ ಮಾಡಿದ ಪದಾರ್ಥ ತಿನ್ನಬಾರದು ಅಂತಾ ಹೇಳಲಾಗುತ್ತದೆ.
ಎರಡನೇಯ ತಪ್ಪು ನೀವು ಸೋಮವಾರ ಉಪವಾಸ ಮಾಡುವವರಾಗಿದ್ದರೆ, ಈ ದಿನ ಉಪ್ಪಿನ ಸೇವನೆ ಮಾಡಬೇಡಿ. ಶಿವನನ್ನು ಕುರಿತು ಭಕ್ತಿ ಮಾಡುವವರು, ಸೋಮವಾರ ಉಪವಾಸ ಮಾಡುವವರು, ಉಪ್ಪಿನ ಸೇವನೆ ಮಾಡಬಾರದು. ಹಾಗೇನಾದರೂ ನೀವು ಶಿವನಿಗಾಗಿ ಮಾಡುವ ಉಪವಾಸದ ದಿನ ಉಪ್ಪು ಸೇವಿಸಿದ್ರೆ, ಆ ಉಪವಾಸ ಮಾಡಿಯೂ ವ್ಯರ್ಥವಾಗುತ್ತದೆ.
ಮೂರನೇಯ ತಪ್ಪು ನೀವು ಸೋಮವಾರದ ದಿನ ಉಪವಾಸ ಮಾಡುತ್ತಿದ್ದರೆ, ನೀವು ಬ್ರಹ್ಮಚರ್ಯ ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಪತಿ- ಪತ್ನಿ ಸೇರಬಾರದು. ಹಾಗೇನಾದರೂ ನೀವು ಸಂಭೋಗ ಮಾಡಿದ್ದಲ್ಲಿ, ನೀವು ಇಡೀ ದಿನ ಮಾಡಿದ ಉಪವಾಸಕ್ಕೆ ಅರ್ಥವಿರುವುದಿಲ್ಲ. ಅದರ ಪುಣ್ಯ ಲಭಿಸುವುದಿಲ್ಲ.
ನಾಲ್ಕನೇಯ ತಪ್ಪು ಕೋಪ ಮಾಡುವುದು. ನೀವು ಶಿವನನ್ನು ಕುರಿತು, ಸೋಮವಾರದಂದು ಉಪವಾಸ ಮಾಡುತ್ತಿದ್ದಲ್ಲಿ, ನಿಮ್ಮ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಇರಬೇಕು. ಭಕ್ತಿ ಇರಬೇಕೇ ಹೊರತು ಕೋಪವಿರಬಾರದು. ಕೋಪ ಮಾಡಿಕೊಂಡು ಅರ್ಪಿಸಿದ ಉಪವಾಸವನ್ನು ಶಿವ ಎಂದೂ ಸ್ವೀಕರಿಸುವುದಿಲ್ಲ ಎಂಬ ನಂಬಿಕೆ ಇದೆ.
ಐದನೇಯ ತಪ್ಪು ಮದ್ಯಪಾನ ಮಾಡಬೇಡಿ. ಮಾಂಸಾಹಾರ ಸೇವನೆ ಮಾಡಬೇಡಿ. ಮದ್ಯಪಾನ ಧೂಮಪಾನ ಮಾಡುವುದರಿಂದ ನಮ್ಮಲ್ಲಿ ಭಕ್ತಿ ಬರುವುದಿಲ್ಲ. ಇನ್ನು ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ತಮಾಸಿಕ ಆಹಾರಗಳು. ಇವುಗಳ ಸೇವನೆಯಿಂದ ಆಲಸ್ಯ ಬರುತ್ತದೆ. ಕ್ರೋಧ ಉತ್ಪತ್ತಿಯಾಗುತ್ತದೆ. ಹಾಗಾಗಿ ಇಂಥ ದಿನಗಳಲ್ಲಿ ಇವುಗಳ ಸೇವನೆ ಮಾಡಬಾರದು.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?