ಭಾರತದಲ್ಲಿ ದೇವಸ್ಥಾನಗಳಿಗೇನು ಕಮ್ಮಿ ಇಲ್ಲ. ಗಲ್ಲಿ ಗಲ್ಲಿಗೂ ಒಂದೊಂದು ದೇವರ ದೇವಸ್ಥಾನವಿದೆ. ಅದೇ ರೀತಿ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಶಿವನ ದೇವಸ್ಥಾನಗಳೂ ಸುಮಾರಷ್ಟಿವೆ. ಅದರಲ್ಲಿ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ..
ಮೊದಲನೇಯ ದೇವಸ್ಥಾನ ಕಾಶಿ ವಿಶ್ವನಾಥ ದೇವಸ್ಥಾನ. ಹಿರಿಯರು ಒಮ್ಮೆಯಾದರೂ ತಾವು, ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿ ಬರಬೇಕು ಎಂದುಕೊಳ್ಳುವುದಂತೂ ನಿಜ. ಯಾಕಂದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದರೆ, ಕೈಲಾಸ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಈ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಎರಡನೇಯ ದೇವಸ್ಥಾನ ಕೇದಾರನಾಥ ದೇವಸ್ಥಾನ. ಉತ್ತರಾಖಂಡದಲ್ಲಿರುವ ಕೇದಾರನಾಥದಲ್ಲಿ, ಮಂದಾಕಿನಿ ನದಿ ಸಮೀಪದ ಹಿಮ ಪರ್ವತದ ಮೇಲೆ ಕೇದಾರನಾಥ ದೇವಸ್ಥಾನವಿದೆ. ಇಲ್ಲಿ ಚಳಿ ಹೆಚ್ಚಾಗಿ ಇರುವುದರಿಂದ ನವೆಂಬರ್ ವರೆಗೂ ಮಾತ್ರ ದೇವರಿಗೆ ಪೂಜೆ ಸಲ್ಲಿಸಲಾಗತ್ತೆ. ಮತ್ತೆ ದೇವರ ವಿಗ್ರಹವನ್ನು ಬೇರೆ ದೇವಸ್ಥಾನಕ್ಕೆ ಸ್ಥಳಾಂತರಿಸಿ, ಅಲ್ಲಿ ಆರು ತಿಂಗಳು ಪೂಜಿಸಲಾಗತ್ತೆ.
ಮೂರನೇಯ ದೇವಸ್ಥಾನ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ, ನಂದಿ ಕೊಟಕೂರು ತಾಲೂಕಿನ, ನಲ್ಲಮಲೈ ಪರ್ವತ ಶ್ರೇಣಿಯಲ್ಲಿ ದಟ್ಟ ಕಾನನದ ಮಧ್ಯೆ ಇರುವ ದೇವಸ್ಥಾನವೇ ಶ್ರೀಶೈಲ ದೇವಸ್ಥಾನ. ಇಲ್ಲಿ ಶಿವನನ್ನು ಮಲ್ಲಿಕಾರ್ಜುನನಾಗಿ ಪೂಜಿಸಲಾಗುತ್ತದೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ನಾಲ್ಕನೇಯ ದೇವಸ್ಥಾನ ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ದೇವಸ್ಥಾನವಿದೆ. ಕ್ಷಿಪ್ರಾನದಿ ತೀರದಲ್ಲಿರುವ ಈ ದೇವಸ್ಥಾನದಲ್ಲಿ ಶಿವನನ್ನು ಮಹಾಕಾಳೇಶ್ವರನೆಂದು ಪೂಜಿಸಲಾಗುತ್ತದೆ.
ಐದನೇಯ ದೇವಸ್ಥಾನ.. ನಾಸಿಕ್ ನ ತ್ರಯಂಬಕೇಶ್ವರ ಮಂದಿರ. ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ತ್ರಯಂಬಕೇಶ್ವರ ಎಂಬಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಶಿವನನ್ನು ತ್ರಯಂಬಕೇಶ್ವನೆಂದು ಪೂಜಿಸಲಾಗುತ್ತದೆ. 12 ಜ್ಯೋತಿರ್ಲಿಂಗಗಳಲ್ಲಿ ಈ ದೇವಸ್ಥಾನ ಕೂಡ ಒಂದಾಗಿದೆ. ಗೋದಾವರಿ ನದಿಯಲ್ಲಿ ಮಿಂದು ಶಿವನಿಗೆ ಪೂಜೆ ಸಲ್ಲಿಸಿದರೆ, ಸಕಲ ಮನೋಕಾಮನೆಗಳು ಪೂರ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?