ಕ್ಯಾಬೇಜ್ನಿಂದ ಮಾಡುವ ಕ್ಯಾಬೇಜ್ ರೈಸ್, ಕ್ಯಾಬೇಜ್ ಪಲ್ಯ, ಸಾಂಬಾರ್, ಸಲಾಡ್ ಎಲ್ಲವೂ ಸಖತ್ ಟೇಸ್ಟಿಯಾಗಿರತ್ತೆ. ಅದೇ ರೀತಿ ನಾವಿಂದು ಸಂಜೆ ಟೀ, ಕಾಫಿಯೊಂದಿಗೆ ಸೇವಿಸಬಹುದಾದ, ಕ್ಯಾಬೇಜ್ ಕಟ್ಲೇಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ : ಒಂದೂವರೆ ಕಪ್ ಸಣ್ಣಗೆ ಕತ್ತರಿಸಿದ ಕ್ಯಾಬೇಜ್, ಕೊಂಚ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಅರ್ಧ ಕಪ್ ಅಕ್ಕಿ ಹುಡಿ, ಅರ್ಧ ಕಪ್ ರವೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ : ಮೊದಲು ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು, ಅದಕ್ಕೆ ಕ್ಯಾಬೇಜ್, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಅರ್ಧ ಕಪ್ ಅಕ್ಕಿ ಹುಡಿ, ಅರ್ಧ ಕಪ್ ರವೆ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. 15 ನಿಮಿಷ ಹಾಗೆ ಇರಿಸಿ. ನಂತರ ವಡೆ ರೀತಿ ಶೇಪ್ ಕೊಟ್ಟು ಕಾದ ಎಣ್ಣೆಯಲ್ಲಿ ಇದನ್ನು ಕರಿಯಿರಿ. ಕ್ಯಾಬೇಜ್ ಕಟ್ಲೇಟನ್ನು ಟೊಮೆಟೋ ಸಾಸ್ನೊಂದಿಗೆ ಬೆರೆಸಿ ತಿನ್ನಬಹುದು.
Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್ ರೈಸ್..




