Thursday, August 7, 2025

Latest Posts

ಕನಸಿನಲ್ಲಿ ಇಂಥ ಪ್ರಾಣಿಗಳು ಬಂದರೆ, ನೀವು ಹುಷಾರಾಗಿರಬೇಕು ಎಂದರ್ಥ..

- Advertisement -

ಕನಸು ನಿಮ್ಮಿಷ್ಟದಂತೆ ಬೀಳಲ್ಲ. ಕನಸು ಬೀಳಕ್ಕೆ ಒಂದಲ್ಲ ಒಂದು ಕಾರಣವಿರತ್ತೆ. ನೀವು ಮನಸ್ಸಿನಲ್ಲಿ ಯಾರನ್ನಾದರೂ ನೆನೆಸಿಕೊಂಡು ಮಲಗಿದ್ರೆ, ಅವರದ್ದೇ ಕನಸು ಬೀಳಬಹುದು. ಇನ್ನು ಕೆಲವರ ನಂಬಿಕೆ ಪ್ರಕಾರ, ಯಾರಾದರೂ ನಿಮ್ಮನ್ನು ನೆನೆದು ಮಲಗಿದ್ರೆ, ಅವರು ನಿಮ್ಮ ಕನಸಿನಲ್ಲಿ ಬರ್ತಾರಂತೆ. ಆದ್ರೆ ಕೆಲವರು ಪ್ರಾಣಿ, ಪಕ್ಷಿ, ವಸ್ತುಗಳು ಕೂಡ ಕನಸಿನಲ್ಲಿ ಬರತ್ತೆ. ಹಾಗಾಗಿ ನಾವಿಂದು ಕೆಲ ಪ್ರಾಣಿಗಳು ಕನಸಿನಲ್ಲಿ ಬಂದ್ರೆ ಏನರ್ಥ..? ಆ ಬಗ್ಗೆ ನಾವೇಕೆ ಗಮನ ಹರಿಸಬೇಕು ಅಂತಾ ತಿಳಿಯೋಣ ಬನ್ನಿ..

ಕನಸಿನಲ್ಲಿ ಜೇಡ ಕಾಣಿಸಿಕೊಂಡರೆ, ಅಂಥವರಿಗೆ ದೇವರಲ್ಲಿ ಭಕ್ತಿ ಕಡಿಮೆ ಇದೆ ಎಂದರ್ಥ. ಅವರಿಗೆ ಕನಸಿನಲ್ಲಿ ಜೇಡ ಕಾಣಿಸಿಕೊಂಡ ಬಳಿಕ, ಅವರ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಹಾಗಾಗಿ ಅಂಥವರು ನಕಾರಾತ್ಮಕ ಯೋಚನೆಯನ್ನು ದೂರ ಮಾಡಲು ಪೂಜೆ, ಧ್ಯಾನದಂಥ ಕೆಲಸ ಮಾಡಬೇಕು.

ನೀವು ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಕಳವಳದಲ್ಲಿದ್ದಾಗ, ನಿಮಗೆ ಕನಸಿನಲ್ಲಿ ಗೂಬೆ ಕಾಣಿಸಿಕೊಂಡರೆ, ನಿಮ್ಮ ಮನಸ್ಸಿನ ಮಾತನ್ನೇ ನೀವು ಕೇಳಬೇಕು ಅನ್ನೋದು ಇದರ ಅರ್ಥ. ಈ ವಿಷಯದಲ್ಲಿ ನೀವು ಬೇರೆಯವರ ಮಾತನ್ನ ಕೇಳಿ ನಿರ್ಧಾರ ತೆಗೆದುಕೊಂಡ್ರೆ, ಅದರಿಂದ ನಿಮಗೆ ಒಳ್ಳೆಯದಾಗದಿರಬಹುದು. ಹಾಗಾಗಿ ನೀವೇ ನಿರ್ಧಾರವನ್ನು ತೆಗೆದುಕೊಳ್ಳಿ.

ನಿಮ್ಮ ಕನಸಿನಲ್ಲಿ ಕಾಡು ಕಾಗೆ ಕಾಣಿಸಿಕೊಂಡರೆ, ಅದು ಉತ್ತಮ ಸಂಕೇತವಲ್ಲ. ಯಾಕಂದ್ರೆ ಕನಸಿನಲ್ಲಿ ಕಾಡು ಕಾಗೆ ಕಾಣಿಸಿಕೊಳ್ಳುವುದರಿಂದ, ನಮ್ಮಲ್ಲಿ ಬರೀ ನಕಾರಾತ್ಮಕ ಯೋಚನೆಗಳೇ ಬರುತ್ತದೆ. ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತಿದ್ದರೂ, ನೀವು ಅದರಲ್ಲೂ ಬರೀ ಕೆಟ್ಟದ್ದನ್ನೇ ಕಾಣುತ್ತೀರಿ. ಹಾಗಾಗಿ ಈ ರೀತಿ ಕನಸು ಬಿದ್ದಾಗ, ದೇವರ ಧ್ಯಾನ ಮಾಡಿ. ಸಕಾರಾತ್ಮಕ ಯೋಚನೆ ಮಾಡಲು ಪ್ರಯತ್ನಿಸಿ.

ಇನ್ನು ನಿಮ್ಮ ಕನಸಿನಲ್ಲಿ ಚಿಟ್ಟೆ ಕಾಣಿಸಿಕೊಂಡರೆ, ಅವರು ತಮಗಿರುವ ಕೆಟ್ಟ ಚಟವನ್ನು ಬಿಡಬೇಕು ಎಂದರ್ಥ. ನೀವು ನಿಮ್ಮನ್ನು ಸುಧಾರಿಸಿಕೊಂಡಲ್ಲಿ, ನಿಮ್ಮ ಜೀವನ ಉತ್ತಮವಾಗಲಿದೆ ಅನ್ನೋದೇ ಇದರ ಅರ್ಥ. ಅಲ್ಲದೇ ನಿಮ್ಮ ಕನಸಿನಲ್ಲಿ ಚಿಟ್ಟೆ ಕಾಣಿಸಿಕೊಂಡರೆ, ನಿಮ್ಮ ಬಳಿ ಯಾರಾದರೂ ಕೆಟ್ಟದಾಗಿ, ನಿಷ್ಠುವಾಗಿ ಮಾತನಾಡಿದರೂ, ನೀವು ಅದನ್ನ ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳಬಾರದು. ಮತ್ತು ನಿಮ್ಮ ಕೆಲಸದಲ್ಲಿ ನೀವು ತೊಡಗಿಕೊಂಡು, ಅದರಲ್ಲಿ ಯಶಸ್ಸು ಗಳಿಸಬೇಕು ಎಂಬುದು ಈ ಕನಸಿನ ಅರ್ಥ.

ಕನಸಿನಲ್ಲಿ ಸರ್ಪ ಕಾಣಿಸಿಕೊಂಡರೆ, ಸದ್ಯದಲ್ಲೇ ನಿಮ್ಮ ಲಕ್ ಖುಲಾಯಿಸಲಿದೆ ಎಂದರ್ಥ. ಅದರಲ್ಲೂ ಸರ್ಪ ಬಂದು ನಿಮಗೆ ಕಚ್ಚಿದ ಹಾಗೆ ಕನಸು ಬಿದ್ದರೆ, ಆ ದಿನ ನಿಮಗೆ ಹಣಕಾಸಿನ ಲಾಭವಾಗಲಿದೆ. ಅಥವಾ ಆ ದಿನದಿಂದಲೇ ನಿಮ್ಮ ಅದೃಷ್ಟವೇ ಬದಲಾಗಲಿದೆ ಎಂದರ್ಥ.

ನರಕದಲ್ಲಿ ಕೊಡುವ ಭಯಂಕರ ಶಿಕ್ಷೆಗಳಿವು..

ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು..?

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

- Advertisement -

Latest Posts

Don't Miss