Monday, December 23, 2024

Latest Posts

ಭಾರತದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 2 MAHA SHIVARATHRI SPECIAL

- Advertisement -

ಈ ಮೊದಲು ನಾವು ಇದರ ಮೊದಲ ಭಾಗದಲ್ಲಿ ಭಾರತದಲ್ಲಿರುವ ಶಿವನ 10 ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಆರನೇಯ ದೇವಸ್ಥಾನ ಆದಿ ಯೋಗಿ ಮಂದಿರ. ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಆದಿ ಯೋಗಿ ಮಂದಿರವಿದೆ. ಇಲ್ಲಿ ಪ್ರತೀ ವರ್ಷ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಶ್ರೀ ಜಗ್ಗಿ ವಾಸುದೇವ್ ಗುರೂಜಿ ಈ ಮಂದಿರವನ್ನು ನಿರ್ಮಿಸಿದ್ದಾರೆ. ಮತ್ತು ಅವರ ನೇತೃತ್ವದಲ್ಲೇ ಇಲ್ಲಿ ಮಹಾಶಿವರಾತ್ರಿಯನ್ನ ನಡೆಸಲಾಗತ್ತೆ. ಈ ದಿನ ಇಲ್ಲಿ ನೃತ್ಯ, ಭಜನೆ ಮಾಡುವ ಮೂಲಕ, ಜಾಗರಣೆ ಮಾಡಲಾಗತ್ತೆ.

ಏಳನೇಯ ದೇವಸ್ಥಾನ ರಾಮೇಶ್ವರಂ ಮಂದಿರ. ತಮಿಳುನಾಡಿನ ರಾಮೇಶ್ವರಂನಲ್ಲಿ ಈ ದೇವಸ್ಥಾನವಿದೆ. ಶ್ರೀರಾಮ ರಾವಣನ ವಧೆ ಮಾಡಿದ್ದ. ಬಳಿಕ ಬ್ರಹ್ಮ ಹತ್ಯಾದೋಶದಿಂದ ಮುಕ್ತಿ ಪಡೆಯಲು ಇಲ್ಲಿ ರಾಮ, ಶಿವನನ್ನು ಪೂಜಿಸಿದನಂತೆ. ಹಾಗಾಗ ಇಲ್ಲಿ ಶಿವನನ್ನು ರಾಮನಾಥೇಶ್ವರನೆಂದು ಪೂಜಿಸಲಾಗುತ್ತದೆ.

ಎಂಟನೇಯ ದೇವಸ್ಥಾನ ಸೋಮನಾಥೇಶ್ವರ ಮಂದಿರ. ಗುಜರಾತ್‌ನ ಸೌರಾಷ್ಟ್ರದ, ಪ್ರಭಾಸ ಎಂಬ ಸ್ಥಳದಲ್ಲಿ ಸೋಮನಾಥೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಇಲ್ಲಿ ಶಿವನನ್ನು ಸೋಮನಾಥೇಶ್ವರನೆಂದು ಪೂಜಿಸಲಾಗುತ್ತದೆ.

ಒಂಭತ್ತನೇಯ ದೇವಸ್ಥಾನ ಲೇಪಾಕ್ಷಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುಂದರವಾದ ಶಿವನ ದೇವಸ್ಥಾನವೇ ಲೇಪಾಕ್ಷಿ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಬಂದು ತಡೆಯುತ್ತಾನೆ. ಆಗ ರಾವಣ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಾನೆ. ನಂತರ ರಾಮ ಬಂದು ವಿಚಾರಿಸಿದಾಗ, ರಾವಣ, ಸೀತೆಯ ಅಪಹರಣ ಮಾಡಿದ್ದನ್ನು ಹೇಳುತ್ತಾನೆ. ಆಗ ರಾಮ ಆ ಪಕ್ಷಿಯನ್ನು ಲೇ ಪಕ್ಷಿ ಎಂದು ಕರೆದು, ಅದು ಆ ಸ್ಥಳದಲ್ಲೇ ಲೀನವಾಗುವಂತೆ ಮಾಡಿದನಂತೆ. ಹಾಗಾಗಿ ಈ ಸ್ಥಳವನ್ನು ಲೇಪಾಕ್ಷಿ ಎಂದು ಕರೆಯುತ್ತಾರೆ.

ಹತ್ತನೇಯ ದೇವಸ್ಥಾನ ಮಂಗೇಶಿ ದೇವಸ್ಥಾನ. ಇದು ಗೋವಾ ರಾಜ್ಯದ ಪೋಂಡಾ ತಾಲೂಕಿನಲ್ಲಿದೆ. ಇದು ಗೋವಾದ ಪ್ರಸಿದ್ಧ ದೇವಸ್ಥಾನವಾಗಿದ್ದು, ಇಲ್ಲಿ ಅತೀ ಹೆಚ್ಚು ಜನರು ಭೇಟಿ ನೀಡಿ, ಮಂಗೇಶಿಯ ದರ್ಶನ ಪಡೆಯುತ್ತಾರೆ. ಕೌಂಡಿಣ್ಯ ಮತ್ತು ವತ್ಸ ಗೋತ್ರದ ಸಾರಸ್ವತರು, ಬ್ರೀಟಿಷರಿಂದ ತಮ್ಮ ನೆಲವನ್ನು ಉಳಿಸಿಕೊಳ್ಳಲು, ಇಲ್ಲಿ ಲಿಂಗ ಪ್ರತಿಷ್ಠಾಪಿಸಿದರು. ಸುಂದರ ಶಿಲಾನ್ಯಾಸ ಹೊಂದಿರುವ ದೇವಸ್ಥಾನ ಇದಾಗಿದೆ.

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

- Advertisement -

Latest Posts

Don't Miss