ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ಗಾಗಿ ಹಲವರು ರುದ್ರಾಕ್ಷಿ ಧರಿಸುತ್ತಾರೆ. ಕೆಲವೆಡೆ ಪ್ಲಾಸ್ಟಿಕ್ ರುದ್ರಾಕ್ಷಿ ಸರ ಮಾಡಿ ಮಾರುತ್ತಾರೆ. ಇದನ್ನ ಧರಿಸಿದರೆ ಏನು ತೊಂದರೆ ಇಲ್ಲ. ಆದ್ರೆ ನಿಜವಾದ ರುದ್ರಾಕ್ಷಿಯನ್ನ ಎಲ್ಲರೂ ಧರಿಸುವಂತಿಲ್ಲ. ಮತ್ತು ರುದ್ರಾಕ್ಷಿ ಧರಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ರುದ್ರಾಕ್ಷಿ ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..
ರುದ್ರಾಕ್ಷಿಯಲ್ಲಿ ಹಲವು ವಿಧಗಳಿದೆ. ಏಕಮುಖಿ ರುದ್ರಾಕ್ಷಿ, ದ್ವಿಮುಖಿ ರುದ್ರಾಕ್ಷಿ, ತ್ರಿಮುಖಿ, ಪಂಚಮುಖಿ ಹೀಗೆ ಹಲವು ರೀತಿಯ ರುದ್ರಾಕ್ಷಿ ಇದೆ. ಇತ್ತೀಚೆಗೆ ಕೆಲವರು ನಕಲಿ ರುದ್ರಾಕ್ಷಿಯನ್ನ ಕೂಡ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನೀವು ಧರಿಸಲು ಬಯಸುವ ರುದ್ರಾಕ್ಷಿ ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಿ ನಂತರ ರುದ್ರಾಕ್ಷಿಯನ್ನು ಧರಿಸಿ.
ರುದ್ರಾಕ್ಷಿಯನ್ನು ಹೆಣ್ಣು ಮಕ್ಕಳು ಧರಿಸಬಾರದು ಅಂತಾ ಹೇಳಲಾಗತ್ತೆ. ಮುಟ್ಟು ನಿಂತ ಕೆಲ ಹೆಂಗಸರು ರುದ್ರಾಕ್ಷಿಯನ್ನು ಧರಿಸುತ್ತಾರೆ. ಇನ್ನು ರುದ್ರಾಕ್ಷಿ ಧರಿಸುವ ಪುರುಷರು ಮುಟ್ಟಾದ ಮಹಿಳೆಯನ್ನು ಮುಟ್ಟಬಾರದು. ಸೂತಕವಿರುವ ಮನೆಗೆ ಹೋಗಬಾರದು. ಯಾರಿಗೆ ಸೂತಕವಿರುತ್ತದೆಯೋ, ಅವರನ್ನು ಮುಟ್ಟಬಾರದು.
ರುದ್ರಾಕ್ಷಿಯನ್ನು ಧರಿಸಿ, ಮಲಗಬಾರದು. ಯಾಕಂದ್ರೆ ರಾತ್ರಿಯೆಲ್ಲ ನಮ್ಮ ಮೈಯಲ್ಲಿ ಋಣಾತ್ಮಕ ಅಂಶಗಳು ಉತ್ಪತ್ತಿಯಾಗತ್ತೆ. ಹಾಗಾಗಿ ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮುಗಿಸಿಯೇ, ರುದ್ರಾಕ್ಷಿಯನ್ನು ಧರಿಸಬೇಕು. ಇನ್ನು ವಿವಾಹಿತರು ರುದ್ರಾಕ್ಷಿಯನ್ನು ಧರಿಸಿ, ಸಂಭೋಗ ಮಾಡಬಾರದು. ಮಾಂಸಾಹಾರ. ಮದ್ಯಪಾನ ಸೇವಿಸಬಾರದು. ಇದರಿಂದ ನಿಮಗೂ ಪಾಪ ತಗುಲುವುದಲ್ಲದೇ, ರುದ್ರಾಕ್ಷಿಯ ಶಕ್ತಿ ಹೊರಟು ಹೋಗುತ್ತದೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?