Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ ಸಾಯುವವರೆಗೂ ಮರೆಯುವುದಿಲ್ಲ. ಹಾಗಾಗಿ ಓರ್ವ ಹೆಣ್ಣು ಗರ್ಭಿಣಿಯಾಗಿದ್ದಾಗ, ಹೆರಿಗೆಯಾದಾಗ, ಬಾಣಂತನದ ವೇಳೆ ಚೆನ್ನಾಗಿ ಕಾಣಬೇಕು. ಹಾಗಾದ್ರೆ ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಅಂತಾ ತಿಳಿಯೋಣ ಬನ್ನಿ..
ಹೆರಿಗೆಯಾದ ಬಳಿಕ, ಹೊಟ್ಟೆ ಮುಂದೆ ಬರಬಾರದು ಅಂದ್ರೆ, ಹೊಟ್ಟೆಗೆ ಬಟ್ಟೆ ಕಟ್ಟಬೇಕು. ಬೆಲ್ಟ್ ಸಿಗುತ್ತದೆ. ಅದನ್ನೂ ಬಳಸಬೇಕು. ಸಿಸರಿನ್ ಆಗಿದ್ದರೆ, 15 ದಿನದ ಬಳಿಕ, ಆಪರೇಷನ್ ಮಾಡಿದ ಜಾಗ ಒಣಗಿದ ಬಳಿಕ, ಹೊಟ್ಟೆಗೆ ಬಟ್ಟೆ ಸುತ್ತಿಕೊಳ್ಳಿ. ಇದಕ್ಕೂ ಮುನ್ನ ವೈದ್ಯರ ಸಲಹೆ ಪಡೆದರೂ ಉತ್ತಮ.
ಎರಡನೇಯದಾಗಿ ಮಾಲೀಶ್. ದೇಹಕ್ಕೆ ಎಣ್ಣೆಯಿಂದ ಚೆನ್ನಾಗಿ ಮಾಲೀಶ್ ಮಾಡಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಪ್ರತಿದಿನ ತಲೆಸ್ನಾನ ಮಾಡಬೇಕು. ತಲೆಗೆ ಬಿಸಿ ನೀರನ್ನೇ ಬಳಸಬೇಕು. ಇಲ್ಲವಾದಲ್ಲಿ ಶೀತವಾಗುವ ಸಾಧ್ಯತೆ ಇರುತ್ತದೆ. ಆಮೇಲೆ ಜೀವನಪೂರ್ತಿ ಸೀನುತ್ತ ಕೂರುವ ಪರಿಸ್ಥಿತಿ ಬರುತ್ತದೆ. ಇನ್ನು ಎಣ್ಣೆ ಮಾಲೀಶ್ ಮಾಡಿ, ಬಿಸಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಕೈ, ಕಾಲು, ಮೂಳೆ ನೋವೆಲ್ಲ ಹೋಗುತ್ತದೆ.
ಯಾವುದೇ ಕಾರಣಕ್ಕೂ ಮಲಗಿದಾಗ, ಫ್ಯಾನ್ ಬಳಸಬಾರದು. ನೀವು ಎಷ್ಟು ಬೆವರುತ್ತೀರೋ, ಅಷ್ಟು ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ ಕಿವಿಗೆ ಗಾಳಿ ಹೋಗದಂತೆ, ಬಟ್ಟೆ ಸುತ್ತಿಕೊಳ್ಳಿ. ಕಾಲುಗಳಿಗೆ ಸಾಕ್ಸ್ ಬಳಸಿ. ಮಲಗುವಾಗ, ದಪ್ಪನೆಯ ಹೊದಿಕೆ ಹೊದ್ದು ಮಲಗಿ. ಈ ಸಮಯದಲ್ಲಿ ಆಹಾರ ಸೇವನೆಯಲ್ಲೂ ನಿರ್ಲಕ್ಷ್ಯ ಮಾಡುವಂತಿಲ್ಲ. ಮಸಾಲೆ ಪದಾರ್ಥ, ಖಾರ ಪದಾರ್ಥ, ಹೊರಗಿನ ತಿಂಡಿಗಳನ್ನು ತಿನ್ನುವಂತಿಲ್ಲ. ಸಪ್ಪೆ ತಿಂಡಿ, ಬಿಸಿ ನೀರು, ಹಾಲು, ತುಪ್ಪವೇ ನಿಮ್ಮ ಊಟವಾಗಿರಬೇಕು.
ಅದರಲ್ಲೂ ಬಾಣಂತನದ ವೇಳೆ ತಾಯಿಗೆ ಮಲಬದ್ಧತೆ ಸಮಸ್ಯೆ, ಹಾಲಿನ ಸಮಸ್ಯೆ ಇರುತ್ತದೆ. ಇದೆಲ್ಲದಕ್ಕೂ ಪರಿಹಾರವೆಂದರೆ, ಬಿಸಿ ನೀರು. ಬಿಸಿ ಬಿಸಿ ನೀರನ್ನು ಪದೇ ಪದೇ ಕುಡಿಯಬೇಕು. ಇದರಿಂದ ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಎದೆಹಾಲು ಹೆಚ್ಚಾಗುತ್ತದೆ. ಇನ್ನು ಹಣ್ಣು, ಹಾಲು, ತುಪ್ಪ, ಮೊಸರು, ಮಜ್ಜಿಗೆ, ಬೇಳೆ ಕಾಳಿನ ಪದಾರ್ಥ, ಜೀರಿಗೆ ನೀರು ಇವನ್ನೆಲ್ಲ ತೆಗೆದುಕೊಳ್ಳಬೇಕು.
ಯಾಕೆ ಈ ನಿಯಮವನ್ನು ಅನುಸರಿಸಬೇಕು ಅಂತಾ ಹೇಳುವುದು ಅಂದ್ರೆ, ಬಾಣಂತನದ ವೇಳೆ ಏನಾದರೂ ಅನಾರೋಗ್ಯ ಸಂಭವಿಸಿದರೆ, ಅದು ಸಾಯುವವರೆಗೂ ಇರುತ್ತದೆ. ಕೈ ಕಾಲು ನೋವು, ಶೀತ, ಗ್ಯಾಸ್ ಪ್ರಾಬ್ಲಮ್ ಇವನ್ನೆಲ್ಲ ಯಾವುದೇ ಕಾರಣಕ್ಕೂ ಬಾಣಂತನದಲ್ಲಿ ನಿರ್ಲಕ್ಷ್ಯ ಮಾಡಬಾರದು.
ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..