ಹಿಂದೂಗಳಲ್ಲಿ ಪವಿತ್ರ ಸ್ಥಾನ ನೀಡಲ್ಪಟ್ಟ ಎಲೆಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಯಾಕಂದ್ರೆ ಬಿಲ್ವಪತ್ರೆ, ಶಿವನಿಗೆ ಇಷ್ಟವಾಗುವ ಎಲೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ, ಸಕಲ ಇಷ್ಟಾರ್ಥವನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆಯನ್ನು ಯಾಕೆ ಅರ್ಪಿಸಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬಿಲ್ವಪತ್ರೆಯನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗತ್ತೆ. ಅಲ್ಲದೇ ಬಿಲ್ವಪತ್ರೆಯ ಮೂರು ಎಲೆಗಳು ಯಜುರ್ವೇದ, ಋಗ್ವೇದ, ಸಾಮವೇದದ ಸಂಕೇತವಾಗಿದೆ. ಅಲ್ಲದೇ ಶೈಲಪರ್ವತದ ಮೇಲೆ ಮಹಾಲಕ್ಷ್ಮೀ ಬಿಲ್ವಪತ್ರೆಯ ಗಿಡವಾಗಿ ರೂಪ ತಾಳಿದ್ದಳಂತೆ. ಯಾಕೆ ಲಕ್ಷ್ಮೀ ದೇವಿ ಬಿಲ್ವಪತ್ರೆಯ ಗಿಡದ ರೂಪ ತಾಳಿದ್ದಳೆಂದರೆ, ವಿಷ್ಣು, ಲಕ್ಷ್ಮೀಗಿಂತ ಹೆಚ್ಚು ವಾಗ್ದೇವಿಯನ್ನು ಗೌರವಿಸುತ್ತಿದ್ದನಂತೆ.
ಹಾಗಾಗಿ ಕ್ರೋಧಿತಳಾದ ಲಕ್ಷ್ಮೀ ಶೈಲಪರ್ವತದ ಮೇಲೆ ಬಂದು ಕುಳಿತು ಶಿವನಿಗಾಗಿ ತಪಸ್ಸು ಮಾಡಿದಳಂತೆ. ಎಷ್ಟು ತಪಸ್ಸು ಮಾಡಿದರೂ ಶಿವ ಪ್ರತ್ಯಕ್ಷವಾಗಿಲ್ಲವೆಂದು, ಆಕೆ ಬಿಲ್ವಪತ್ರೆಯ ಗಿಡವಾಗಿ ರೂಪ ತಾಳಿ, ಅದರಿಂದ ಒಂದೊಂದೆ ಎಲೆ ಶಿವನ ಲಿಂಗದ ಮೇಲೆ ಬೀಳುವಂತೆ ಮಾಡಿದಳು.
ಹಲವು ವರ್ಷಗಳ ಬಳಿಕ ಶಿವ ಪ್ರತ್ಯಕ್ಷನಾಗಿ, ಲಕ್ಷ್ಮೀಯ ಸಮಸ್ಯೆ ಕೇಳಿದಾಗ, ವಿಷ್ಣುವಿಗೆ ತನಗಿಂತ, ವಾಗ್ದೇವಿಯ ಮೇಲೆ ಹೆಚ್ಚು ಪ್ರೀತಿ ಎಂದು ದೂರು ಹೇಳುತ್ತಾಳೆ. ಅದಕ್ಕೆ ಶಿವ, ಇಲ್ಲ ಮಾತೆ, ವಿಷ್ಣುವಿನ ಹೃದಯದಲ್ಲಿ ನಿಮಗೆ ಮಾತ್ರ ಜಾಗವಿದೆ. ಆದ್ರೆ ವಾಗ್ದೇವಿಯನ್ನ ಕಂಡರೆ ವಿಷ್ಣುವಿಗೆ ಗೌರವವಿದೆ ಎಂದು ಹೇಳುತ್ತಾನೆ ಶಿವ. ಇದನ್ನು ಕೇಳಿ ಲಕ್ಷ್ಮೀ ದೇವಿ ಸಂತೋಷಗೊಳ್ಳುತ್ತಾಳೆ. ಇದಾದ ಬಳಿಕ, ಶಿವನಿಗೆ ಬಿಲ್ವಪತ್ರೆ ಇಷ್ಟದ ಎಲೆಯಾಯಿತು. ಹಾಗಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?