ನೀವು ಟಿವಿಯಲ್ಲಿ, ಅಥವಾ ಶಿವನ ಫೋಟೋಗಳಲ್ಲಿ ನೋಡಿರಬಹುದು, ಶಿವ ಯಾವಾಗಲೂ ಧ್ಯಾನಮಗ್ನನಾಗಿಯೇ ಇರುತ್ತಾನೆ. ಅಷ್ಟೇ ಯಾಕೆ ಶಿವನ ಧ್ಯಾನ ಭಂಗ ಮಾಡಿದವರಿಗೆ ಶಿವ ಎಂಥೆಂಥ ಶಾಪ ಕೊಟ್ಟ ಅನ್ನೋ ಕಥೆಯನ್ನ ನಾವು ಕೇಳಿರ್ತೀವಿ ಅಥವಾ ಓದಿರ್ತೀವಿ. ಹಾಗಾದ್ರೆ ಶಿವ ಯಾವಾಗಲೂ ಯಾರ ಧ್ಯಾನ ಮಾಡುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪದ್ಮಪುರಾಣದಲ್ಲಿ ವರ್ಣನೆ ಮಾಡಿರುವ ಪ್ರಕಾರ, ಒಮ್ಮೆ ಪಾರ್ವತಿ ಶಿವನಲ್ಲಿ ಕೇಳಿದಳು. ಇಡೀ ಜಗತ್ತೇ ನಿಮ್ಮನ್ನು ಧ್ಯಾನಿಸುತ್ತದೆ. ಆದ್ರೆ ನೀವು ಯಾರನ್ನು ಧ್ಯಾನಿಸುತ್ತೀರಿ ಎಂದು. ಅದಕ್ಕೆ ಶಿವ ಹೇಳುತ್ತಾನೆ, ನಾನು ರಾಮನಾಮ ಸ್ಮರಣೆ ಮಾಡುತ್ತೇನೆಂದು. ಅದಕ್ಕೆ ಪಾರ್ವತಿ ಹೇಳುತ್ತಾಳೆ, ರಾಮ ಅಂದರೆ ವಿಷ್ಣುವಿನ ರೂಪ. ನೀವು ವಿಷ್ಣುವನ್ನು ಸ್ಮರಣೆ ಮಾಡುವುದು ಬಿಟ್ಟು, ರಾಮನನ್ನು ಏಕೆ ಸ್ಮರಣೆ ಮಾಡುತ್ತೀರಿ ಎಂದು ಕೇಳುತ್ತಾಳೆ.
ಅದಕ್ಕೆ ಶಿವ ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೆ ಎಂದು ಹೇಳುತ್ತಾನೆ. ಅದರೆ, ರಾಮನು ವಿಷ್ಣುವಿನ ರೂಪವೇ ಇರಬಹುದು. ಆದರೆ ರಾಮನಾಮ ಜಪವು, ವಿಷ್ಣು ಸಹಸ್ರನಾಮದ ಸಮಾನವಾಗಿದೆ. ವಿಷ್ಣು ಸಹಸ್ರನಾಮವನ್ನು ಹೇಳಲು ಬರದವರು, ಶ್ರೀ ರಾಮ ಜಯರಾಮ ಜಯ ಜಯ ರಾಮ ಎಂದು ಹೇಳಬಹುದು. ಎಲ್ಲ ಜಪ, ಮಂತ್ರಾದಿಗಳಿಗಿಂತಲೂ ರಾಮನಾಮ ಜಪ ಶ್ರೇಷ್ಠವಾಗಿದೆ.
ಈ ಜಪ ಮಾಡುವುದರಿಂದ ಅವರ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ. ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ. ಭಯ ದೂರವಾಗುತ್ತದೆ. ಅಷ್ಟು ಶ್ರೇಷ್ಠವಾಗಿದೆ ಈ ಮಂತ್ರವೆಂದು ಹೇಳುತ್ತಾನೆ ಶಿವ. ಹಾಗಾಗಿ ನಿಮಗೆ ಯಾವುದೇ ಮಂತ್ರ ಬರದಿದ್ದರೂ, ರಾಮ ನಾಮ ಜಪವೊಂದನ್ನ ಮಾಡಿದರೆ ಸಾಕು. ಎಲ್ಲ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?