ಶಿವನ ಭಕ್ತರ ಬಾಯಲ್ಲಿ ಸದಾ ಓಂ ನಮಃ ಶಿವಾಯ ಎನ್ನುವ ಜಪವನ್ನ ನೀವು ಕೇಳಿರ್ತೀರಿ. ಈ ಜಪ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಹಾಗಾದ್ರೆ ಈ ಚಮತ್ಕಾರಿ ಮಂತ್ರ ಪಠಣೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಶಿವಪುರಾಣದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಷಡಾಕ್ಷರ ಮಂತ್ರವೆಂದು ಹೇಳಲಾಗಿದೆ. ಓಂ ನಮಃ ಶಿವಾಯ ಮಂತ್ರದ ಅರ್ಥವೇನೆಂದರೆ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ, ಈ ಅರಿಷಡ್ವರ್ಗಗಳನ್ನ ತೊರೆದು, ಪ್ರೀತಿ ಆನಂದದಿಂದಿರುವುದು. ಇದರಿಂದ ಆತ್ಮಕ್ಕೆ ಪರಮಾತ್ಮನ ಮಿಲನವಾಗುತ್ತದೆ. ಹಾಗಾಗಿ ಓಂ ನಮಃ ಶಿವಾಯ ಮಂತ್ರ ಅತೀ ಶಕ್ತಿಯುತವಾದ ಮಂತ್ರ ಅಂತಾ ಹೇಳಲಾಗತ್ತೆ.
ರುದ್ರಾಕ್ಷಿ ಮಾಲೆಯನ್ನು ಹಿಡಿದು, ಬ್ರಾಹ್ಮಿ ಮುಹೂರ್ತದಲ್ಲಿ ಓಂ ನಮಃ ಶಿವಾಯ ಎಂಬ ಜಪವನ್ನು 108 ಬಾರಿ ಮಾಡಬೇಕು. ಈ ಜಪ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಈ ಮಂತ್ರ ಪಠಿಸುವಾಗ ನೀವು ಸ್ನಾನವನ್ನು ಮಾಡಿರಬೇಕು. ಮದ್ಯ, ಮಾಂಸಾಹಾರ ಸೇವಿಸಿರಬಾರದು. ಮಡಿಯಿಂದ ಈ ಜಪ ಮಾಡಿದ್ದಲ್ಲಿ, ನಿಮಗೆ ಅದ್ಭುತ ಲಾಭ ದೊರೆಯಲಿದೆ.
ಓಂ ನಮಃ ಶಿವಾಯ ಮಂತ್ರದ ಜಪ ಮಾಡುವುದರಿಂದ ಏಕಾಗೃತೆ ಹೆಚ್ಚುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಆದ್ರೆ ಓಂ ನಮಃ ಶಿವಾಯ ಮಂತ್ರವನ್ನ ಕ್ರಬದ್ಧವಾಗಿ ಹೇಳಬೇಕು. ಓಂ ಹೇಳುವಾಗ, ಓ ಅ ಮ ಎಂದು ಸರಿಯಾಗಿ ಹೇಳಬೇಕು. ನಿಮಗೆ ಪ್ರತಿದಿನ ಈ ಮಂತ್ರೋಚ್ಛಾರಣೆ ಮಾಡಲಾಗದಿದ್ರೆ, ಸೋಮವಾರವಷ್ಟೇ ಮಾಡಬಹುದು. ಸೋಮವಾರವೂ ಆಗದಿದ್ದರೆ, ಶಿವರಾತ್ರಿಯಂದು ಷಡಾಕ್ಷರಿ ಮಂತ್ರವನ್ನ ಜಪ ಮಾಡಬಹುದು.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?