Wednesday, April 17, 2024

Latest Posts

ಶಿವನಿಗೆ ಜಲ ಅರ್ಪಿಸಲು ಕಾರಣವೇನು..? MAHA SHIVARATHRI SPECIAL

- Advertisement -

ಗಣೇಶನಿಗೆ ಭೋಜನವನ್ನು ಅರ್ಪಿಸಬೇಕು. ಸೂರ್ಯನಿಗೆ ನಮಸ್ಕಾರವನ್ನು ಅರ್ಪಿಸಬೇಕು. ಕೃಷ್ಣನಿಗೆ ಅಲಂಕಾರವನ್ನು ಮಾಡಬೇಕಾದ ರೀತಿ, ಶಿವನಿಗೆ ಜಲವನ್ನು ಅರ್ಪಿಸಿದರೆ ಸಾಕು, ಎಲ್ಲವೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಶಿವನನ್ನು ಒಲಿಸುವುದಕ್ಕೆ ಒಂದು ಚಿಕ್ಕ ಬಿಂದಿಗೆ ನೀರು ಸಾಕು ಅಂತಾ ಹೇಳಲಾಗತ್ತೆ. ಹಾಗಾದ್ರೆ ಶಿವನಿಗೆ ಏಕೆ ಜಲವನ್ನ ಅರ್ಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದೇವತೆಗಳು ಮತ್ತು ದಾನವರು ಸೇರಿ, ಅಮೃತಕ್ಕಾಗಿ ಸಮುದ್ರ ಮಂಥನ ಮಾಡುತ್ತಾರೆ. ಅಮೃತ ಸಿಕ್ಕರೆ, ತಾವು ಚಿರಂಜೀವಿಗಳಾಗಬಹುದು ಎಂದು ದಾನವರ ಯೋಚನೆಯಾಗಿರುತ್ತದೆ. ಹಾಗಾಗಿ ವಾಸುಕಿಯನ್ನು ಹಗ್ಗದಂತೆ ಬಳಸಿ, ಸಮುದ್ರ ಮಂಥನ ಮಾಡಲಾಗತ್ತೆ. ಈ ವೇಳೆ ಒಳ್ಳೆಯ ವಸ್ತು ಮತ್ತು ಒಳ್ಳೆಯದಲ್ಲದ ವಸ್ತುಗಳು ಉದ್ಭವವಾಗುತ್ತದೆ.

ಲಕ್ಷಿ, ಐರಾವತ, ಕಲ್ಪವೃಕ್ಷ ಸೇರಿ ಹಲವು ಉತ್ತಮ ವಸ್ತುಗಳು ಬಂದ್ರೆ, ದರಿದ್ರ ಲಕ್ಷ್ಮೀ, ಹಾಲಾಹಲದಂಥ ಉತ್ತಮವಲ್ಲದ ವಸ್ತುಗಳು ಕೂಡಾ ಬಂದವು. ಲೋಕವನ್ನು ಉಳಿಸುವುದಕ್ಕಾಗಿ ಹಾಲಾಹಲವನ್ನು ಕುಡಿದ ಶಿವ, ವಿಷಕಂಠನಾದ. ಆದ್ರೆ ಹಾಲಾಹಲವನ್ನು ಕುಡಿದ ಬಳಿಕ, ಶಿವ ದೇಹ ನೀಲಿ ಬಣ್ಣಕ್ಕೆ ತಿರುಗಿತು. ಶಿವನ ದೇಹದಲ್ಲಿ ಉಷ್ಣತೆ ಹೆಚ್ಚತೊಡಗಿತು. ಹಾಗಾಗಿ ಶಂಭೋವನ್ನು ತಣ್ಣಗಿರಿಸಲು, ಎಲ್ಲ ದೇವ ದೇವತೆಗಳು ಸೇರಿ, ಶಿವನ ತಲೆಯ ಮೇಲೆ ಜಲವನ್ನು ಹಾಕತೊಡಗಿದರು. ಆಗ ಶಿವ ಕೊಂಚ ಕೊಂಚವಾಗಿ ಸುಧಾರಿಸಿದ. ಹಾಗಾಗಿ ಶಿವನನ್ನು ಶಾಂತವಾಗಿರಿಸಲು ಜಲಾಭಿಷೇಕ ಮಾಡಲಾಗುತ್ತದೆ.

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

- Advertisement -

Latest Posts

Don't Miss