ನಾವು ನಿಮಗೆ ಈಗಾಗಲೇ ಭಾರತದಲ್ಲಿರುವ ಪ್ರಮುಖ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಕರ್ನಾಟಕದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಮೊದಲನೇಯ ದೇವಸ್ಥಾನ ಮುರುಡೇಶ್ವರ ದೇವಸ್ಥಾನ. ಈ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿದೆ. ಏಷ್ಯಾದಲ್ಲೇ ಮೂರನೇ ಅತೀ ದೊಡ್ಡ ಶಿವನ ಮೂರ್ತಿ ಅಂದ್ರೆ ಅದು ಮುರ್ಡೇಶ್ವರದಲ್ಲಿರುವ ಶಿವನ ಮೂರ್ತಿ.
ಎರರಡನೇಯ ದೇವಸ್ಥಾನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ. ಈ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿದೆ. ರಾವಣ ತನ್ನ ತಾಯಿಗೆ ಪೂಜೆ ಮಾಡಲು ಶಿವನಿಂದ ಆತ್ಮಲಿಂಗವನ್ನು ತೆಗೆದುಕೊಂಡು ಹೋಗುವಾಗ ಇದೇ ಜಾಗದಲ್ಲಿ ಸಂಧ್ಯಾವಂದನೆಗೆ ನಿಂತಿದ್ದ. ನಂತರ ಉಪಾಯದಿಂದ ಗಣೇಶ ಆ ಆತ್ಮಲಿಂಗ ಧರೆಗಿಳಿಸಿದ.ಹಾಗೆ ಧರೆಗಿಳಿಸಿದ ಆತ್ಮಲಿಂಗವನ್ನು ಎತ್ತಲು ರಾವಣ ಪ್ರಯತ್ನಿಸಿದಾಗ, ಅದು ಗೋವಿನ ಕಿವಿಯ ಆಕಾರಕ್ಕೆ ತಿರುಗಿತು. ಹಾಗಾಗಿ ಈ ಸ್ಥಳಕ್ಕೆ ಗೋಕರ್ಣ ಎಂದು ಕರೆಯಲಾಯಿತು. ಇಲ್ಲಿ ಮಹಾಬಲೇಶ್ವರನನ್ನು ಪೂಜಿಸಲಾಗುತ್ತದೆ.
ಮೂರನೇಯ ದೇವಸ್ಥಾನ ಧರ್ಮಸ್ಥಳ ಮಂಜುನಾಥ ದೇವಸ್ಥಾನ. ಇದು ದಕ್ಷಿಣಕನ್ನಡ ತಾಲೂಕಿನ ನೇತ್ರಾವತಿ ನದಿ ದಡದಲ್ಲಿರುವ ಪ್ರಸಿದ್ಧ ದೇವಸ್ಥಾನ. ಉಡುಪಿಯ ಯತಿಗಳಾದ ವಾದಿರಾಜರು, ಶ್ರೀ ಮಂಜುನಾಥನನ್ನು ಇಲ್ಲಿ ಪ್ರತಿಷ್ಠಾಪಿಸಿದರು ಅಂತಾ ಹೇಳಲಾಗಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ ಎಂಬುದಾಗಿತ್ತು. ಹಾಗಾಗಿ ಶ್ರೀ ಮಂಜುನಾಥನನ್ನು ಕುಡುಮ ಪುರಾಧೀಶ್ವರ ಎಂದು ಹೇಳಲಾಗುತ್ತದೆ.
ನಾಲ್ಕನೇಯ ದೇವಸ್ಥಾನ ಧಾರೇಶ್ವರದ ಧಾರಾನಾಥ ದೇವಸ್ಥಾನ. ಇದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ. ರಾವಣ ಗೋಕರ್ಣದಲ್ಲಿದ್ದ ಆತ್ಮಲಿಂಗವನ್ನು ಎತ್ತಲು ಹೋದಾಗ, ಅದರಿಂದ ಶಿವಲಿಂಗ 5 ಭಾಗವಾಗಿ, ಒಂದೊಂದು ದಿಕ್ಕಿಗೆ ಹೋಯಿತು. ಆ ಆತ್ಮಲಿಂಗದ ಒಂದು ಭಾಗ, ಧಾರೇಶ್ವರದ ಈ ಧಾರಾನಾಥ ದೇವಸ್ಥಾನದಲ್ಲಿದೆ ಅಂತಾ ಹೇಳಲಾಗಿದೆ.
ಐದನೇಯ ದೇವಸ್ಥಾನ.. ಕದ್ರಿ ಮಂಜುನಾಥ ದೇವಸ್ಥಾನ.. ಇದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿದೆ. ದಕ್ಷಿಣ ಕನ್ನಡವನ್ನು ಪರಶುರಾಮ ಕ್ಷೇತ್ರವೆಂದು ಹೇಳಾಗಿದೆ. ಒಮ್ಮೆ ಪರಶುರಾಮ ಶಿವನಿಗಾಗಿ ತಪಸ್ಸು ಮಾಡಿದನಂತೆ. ಆಗ ಪ್ರತ್ಯಕ್ಷನಾದ ಶಿವನಲ್ಲಿ ಲೋಕ ಕಲ್ಯಾಣಕ್ಕಾಗಿ ಪರಶುರಾಮರು ಪ್ರಾರ್ಥಿಸಿದರು. ಆಗ ತಾನು ಮಂಜುನಾಥನಾಗಿ ಲೋಕವನ್ನು ಕಾಪಾಡುವುದಾಗಿ ಶಿವ ಹೇಳಿದನಂತೆ., ಹಾಗೆ ಕೊಟ್ಟ ಮಾತಿನಂತೆ, ಕದ್ರಿಯಲ್ಲಿ ಶ್ರೀ ಮಂಜುನಾಥ ನೆಲೆಸಿದ ಎನ್ನಲಾಗಿದೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?