ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಶಿವರಾತ್ರಿಯ ದಿನ ಭಕ್ತರು ಉಪವಾಸ ಮಾಡಿ, ಶಿವನಾಮಸ್ಮರಣೆ ಮಾಡಿ, ಹಬ್ಬವನ್ನು ಆಚರಿಸುತ್ತಾರೆ. ಇಂಥ ಪವಿತ್ರ ದಿನದಲ್ಲಿ ಉಪವಾಸ ಮಾಡುವಾಗ, ವೃತ ಆಚರಿಸುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪುಗಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ನೀವು ಉಪವಾಸ ಮಾಡದಿದ್ದರೂ ಮಾಂಸಾಹಾರ ಸೇವನೆ ಮಾಡಬೇಡಿ. ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಬೇಡಿ. ಯಾಕಂದ್ರೆ ಮಾಂಸಾಹಾರ ಮತ್ತು ಈರುಳ್ಳಿ, ಬೆಳ್ಳುಕ್ಕಿ ತಾಮಸಿಕ ಆಹಾರ, ಇದರ ಸೇವನೆಯಿಂದ ಮನಸ್ಸಿನಲ್ಲಿ ಕ್ರೋಧ, ಕಾಮೋತ್ಪತ್ತಿಯಾಗುತ್ತದೆ. ಸಾತ್ವಿಕ ಗುಣಗಳು ಅಡಗುತ್ತದೆ. ಹಾಗಾಗಿ ಶಿವರಾತ್ರಿಯಂದು ಭಕ್ತಿ ಭಾವದಿಂದ ದೇವರನ್ನು ಪೂಜಿಸಬೇಕು ಎಂದಲ್ಲಿ ಮಾಂಸಾಹಾರ ಮತ್ತು ಈರುಳ್ಳಿ , ಬೆಳ್ಳುಳ್ಳಿ ಸೇವನೆ ಮಾಡಬೇಡಿ..
ಎರಡನೇಯ ತಪ್ಪು ಮದ್ಯಪಾನ, ಧೂಮಪಾನ ಸೇವನೆ ಬೇಡ. ಕೆಲವರು ಶಿವನೂ ಕೂಡ ಭಾಂಗ ಪ್ರೇಮಿಯಾಗಿದ್ದ. ಹಾಗಾದ್ರೆ ನಾವ್ಯಾಕೆ ಮದ್ಯಪಾನ, ಧೂಮಪಾನ ಮಾಡಬಾರದು ಅನ್ನೋ ಉದ್ಧಟತನದ ಪ್ರಶ್ನೆ ಕೇಳುತ್ತಾರೆ. ಆದ್ರೆ ಶಿವ ಎಂದಿಗೂ ಭಾಂಗ್ ಸೇವೆನ ಮಾಡಿರಲಿಲ್ಲ. ಶಿವ ವಿಷಕಂಠನಾಗಿದ್ದ ಸಂದರ್ಭದಲ್ಲಿ, ಪಾರ್ವತಿ, ಭಾಂಗನಿಂದ ಔಷಧಿ ಮಾಡಿ, ಕೊಟ್ಟಿದ್ದಳು, ಅದನ್ನು ಸೇವನೆ ಮಾಡಿದ್ದ ಶಿವ. ಹಾಗಾಗಿ ಶಿವನಿಗೆ ಭಾಂಗ ಅರ್ಪಿಸಲಾಗತ್ತೆ. ಆದ್ರೆ ಯಾರೂ ಕೂಡ ಶಿವ ರಾತ್ರಿಯ ದಿನ ಮಾದಕ ದ್ರವ್ಯ, ಮದ್ಯಪಾನ, ಧೂಮಪಾನ ಸೇವನೆ ಮಾಡಬಾರದು.
ಮೂರನೇಯ ತಪ್ಪು ಶಿವರಾತ್ರಿಯ ದಿನ ಪತಿ- ಪತ್ನಿ ಸೇರುವುದು ಅಷ್ಟು ಉತ್ತಮವಲ್ಲ. ಯಾಕಂದ್ರೆ ಶಿವರಾತ್ರಿಯಂದು ಜಾಗರಣೆ ಮಾಡಬೇಕಾಗುತ್ತದೆ. ಹಾಗಂತ ಎಲ್ಲರೂ ಜಾಗರಣೆ ಮಾಡುವುದಿಲ್ಲ. ಆದ್ರೆ ಭಕ್ತರ ಭಕ್ತಿಯನ್ನು ಕಾಣಲು, ಶಿವರಾತ್ರಿಯಂದು ಶಿವ ಭೂಮಿಗೆ ಬರುತ್ತಾನೆಂಬ ನಂಬಿಕೆ ಇದೆ. ಹಾಗಾಗಿಯೇ ಶಿವಭಕ್ತರು ಈ ದಿನ ಜಾಗರಣೆ ಮಾಡುವುದು. ಇದೇ ಕಾರಣಕ್ಕೆ ಪತ್ನಿ- ಪತಿ ಈ ರಾತ್ರಿ ಕಾಮದಲ್ಲಿ ತೊಡಗಬಾರದು ಅಂತಾ ಹೇಳಲಾಗತ್ತೆ.
ನಾಲ್ಕನೇಯ ತಪ್ಪು ಮುಸುರೆ ತಿಂಡಿಯನ್ನ ತಿನ್ನಬಾರದು. ಶಿವರಾತ್ರಿಯ ದಿನ ಹಲವರು ಉಪವಾಸ ಮಾಡುತ್ತಾರೆ. ಕೆಲವರು ಉಪಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಊಟ ಮಾಡುವುದಿಲ್ಲ. ಯಾಕಂದ್ರೆ ಶಿವರಾತ್ರಿಯ ದಿನ ಅಕ್ಕಿ ಬೇಯಿಸಿ ಮಾಡಿದ ಪದಾರ್ಥವನ್ನ ತಿನ್ನಬಾರದು ಅಂತಾ ಹೇಳಲಾಗತ್ತೆ.
ಐದನೇಯ ತಪ್ಪು ಕಪ್ಪು ವಸ್ತ್ರ ಧರಿಸಬಾರದು. ಶಿವರಾತ್ರಿಯ ದಿನ ಕಪ್ಪು ವಸ್ತ್ರವನ್ನು ಧರಿಸಬಾರದು ಅಂತಾ ಹೇಳಲಾಗತ್ತೆ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?