ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ : ಒಂದು ಸ್ಪೂನ್ ಬೆಣ್ಣೆ, ಒಂದು ಸ್ಪೂನ್ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಒಂದು ಕಪ್ ತೊಳೆದು ಶುಚಿಗೊಳಿಸಿದ ಪಾಲಕ್, 2 ಬೀಟ್‌ರೂಟ್, 4 ಟೋಮೆಟೋ, ಅರ್ಧ ಸ್ಪೂನ್ ಬೆಲ್ಲ, ಕಾಳು ಮೆಣಸಿನ ಪುಡಿ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಮೊದಲು ಕುಕ್ಕರ್‌ಗೆ ಬೆಣ್ಣೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಪಾಲಕ್, ಬೀಟ್‌ರೂಟ್ ಟೊಮೆಟೋ ಹಾಕಿ, ಅದಕ್ಕೆ ಉಪ್ಪು ನೀರು ಹಾಕಿ 2 ವಿಶಲ್ ಬರಿಸಿ. ಈಗ ಬೇಯಿಸಿದ ತರಕಾರಿ ಮತ್ತು ಅದರ ನೀರನ್ನು ಸಪರೇಟ್ ಮಾಡಿ. ಬೆಂದ ತರಕಾರಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಗ್ರೈಂಡ್ ಮಾಡಿಕೊಳ್ಳಿ. ಈ ಪೇಸ್ಟ್ ಮತ್ತು ತರಕಾರಿ ಬೇಯಿಸಿದ ನೀರನ್ನು ಸೇರಿಸಿ, ಮತ್ತೆ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಹಾಕಿ. ಈಗ ಈ ಮಿಶ್ರಣಕ್ಕೆ ಬೆಲ್ಲ ಮತ್ತು ಕಾಳು ಮೆಣಸಿನ ಪುಡಿ ಹಾಕಿ, ಮಿಕ್ಸ್ ಮಾಡಿ, ಮಂದ ಉರಿಯಲ್ಲಿಟ್ಟು ಒಂದು ಕುದಿ ಬರಿಸಿ. ಈಗ ಸೂಪ್ ರೆಡಿ.
ಮತ್ತೆ ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ, ಹುರಿಯಿರಿ. ಸೂಪ್ ಸರ್ವ್ ಮಾಡುವಾಗ, ಅದಕ್ಕೆ ಈ ಬೆಳ್ಳುಳ್ಳಿ ಸೇರಿಸಿ, ಸರ್ವ್ ಮಾಡಿ.
Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್ ರೈಸ್..