ವಿಷ್ಣುವಿನ ಅವತಾರಗಳ ಬಗ್ಗೆ ನಾವು ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಅಲ್ಲದೇ, ಹಲವು ಪೌರಾಣಿಕ ಕಥೆಗಳನ್ನ ಕೂಡ ಹೇಳಿದ್ದೇವೆ. ಇಂದು ನಾವು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆಯ ಬಗ್ಗೆ ಹೇಳಲಿದ್ದೇವೆ..
ಪಾಂಡ್ಯರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜನಿದ್ದ. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ರಾಜ್ಯದ ಕೆಲಸದಲ್ಲಿ ಕಡಿಮೆ ಗಮನ ಹರಿಸುತ್ತಿದ್ದ. ಮತ್ತು ವಿಷ್ಣು ಪೂಜೆಯಲ್ಲಿ ಹೆಚ್ಚು ಗಮನ ಹರಿಸುತ್ತಿದ್ದ. ದಿನಗಳೆದಂತೆ ವಿಷ್ಣುವಿನ ಮೇಲಿನ ಭಕ್ತಿ ಹೆಚ್ಚಾಗುತ್ತಾ ಹೋಯಿತು. ಹಾಗಾಗಿ ರಾಜ ರಾಜ್ಯವನ್ನು ಬಿಟ್ಟು ಮಲಯ ಪರ್ವತದಲ್ಲಿ ಇರಲು ಶುರು ಮಾಡಿದ.
ಅವನ ಪೂಜೆ, ತಪಸ್ಸು, ಧ್ಯಾನವೆಲ್ಲ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ, ಅವನಿಗೆ ಉದ್ದೂದ್ದ ಕೂದಲು ಬೆಳೆದು, ಸನ್ಯಾಸಿಯ ರೀತಿ ಬದಲಾಗುವಷ್ಟು. ಇಂದ್ರದ್ಯುಮ್ನ ಪೂಜೆ ಮಾಡಲು ಶುರುಮಾಡಿದರೆ, ವಿಷ್ಣುವಿನ ಧ್ಯಾನ ಮಾಡಲು ಶುರು ಮಾಡಿದರೆ, ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂದು ಕೂಡ ಗೊತ್ತಾಗುತ್ತಿರಲಿಲ್ಲ.
ಒಮ್ಮೆ ಹೀಗೆ ಪೂಜೆಯಲ್ಲಿ ಲೀನನಾಗಿದ್ದಾಗ, ಅದೇ ಸ್ಥಳಕ್ಕೆ ತಮ್ಮ ಶಿಷ್ಯರೊಂದಿಗೆ ಅಗಸ್ತ್ಯ ಮುನಿಗಳು ಬಂದರು. ಆದರೆ ಅವರು ಬಂದಿದ್ದು ರಾಜನ ಗಮನಕ್ಕೆ ಹೋಗಲೇ ಇಲ್ಲ. ಆಗ ಅಗಸ್ತ್ಯ ಮುನಿಗಳಿಗೆ, ರಾಜ ತಮ್ಮನ್ನು ನಿರ್ಲಕ್ಷಿಸಿದ್ದು, ಕೋಪ ಬಂದಿತು. ಆಗ ಅವರು, ಈ ರಾಜ ಗುರುಕುಲದಲ್ಲಿ ಶಿಕ್ಷಣ ಪಡೆದಿಲ್ಲ. ಅಲ್ಲದೇ, ರಾಜ್ಯದ ಜನರ ಸೇವೆ ಮಾಡೋದು ಬಿಟ್ಟು, ಇಲ್ಲಿ ಬಂದು ತನ್ನಿಷ್ಟದಂತೆ ಇದ್ದಾನೆ. ಇವನದ್ದು ಆನೆಯಂತೆ ಮಂದ ಬುದ್ಧಿ. ಹೀಗಾಗಿ ಇವನು ಆನೆಯಾಗಲಿ ಎಂದು ಶಾಪ ನೀಡುತ್ತಾರೆ.
ರಾಜ ಆನೆಯಾಗಿ ಬದಲಾಗುತ್ತಾನೆ. ಆ ಆನೆಯೇ ಗಜೇಂದ್ರ. ಒಮ್ಮೆ ಗಜೇಂದ್ರ ಮತ್ತು ಅವನ ಜೊತೆ ಇರುವ ಹೆಣ್ಣಾನೆಗಳು ಒಂದು ನದಿಗೆ ನೀರು ಕುಡಿಯಲು ಬರುತ್ತಾರೆ. ಅವರೆಲ್ಲ ನೀರು ಕುಡಿದು, ನೀರಿನಲ್ಲಿ ಆಟವಾಡುತ್ತಾರೆ. ಆಗ ಅಚಾನಕ್ಕ ಆಗಿ ಒಂದು ಮೊಸಳೆ ಬಂದು, ಗಜೇಂದ್ರನ ಕಾಲು ಹಿಡಿಯುತ್ತದೆ. ಗಜೇಂದ್ರ ಆ ಮೊಸಳೆಯಿಂದ ಪಾರಾಗಲು ಶತ ಪ್ರಯತ್ನ ಮಾಡುತ್ತಾನೆ. ಅಲ್ಲಿದ್ದ ಹೆಣ್ಣಾನೆಗಳು ಕೂಡ ಅವನನ್ನು ಕಾಪಾಡಲು ಪ್ರಯತ್ನ ಪಡುತ್ತದೆ. ಆದರೂ ಕೂಡ ಏನೂ ಪ್ರಯೋಜನವಾಗುವುದಿಲ್ಲ.
ಯಾಕಂದ್ರೆ ಗಂಧರ್ವ ಶ್ರೇಷ್ಠನಾದ ರುಹು ಮೊಸಳೆಯಾಗಿ ರೂಪ ತಾಳಿದ್ದರೆ, ಇಂದ್ರದ್ಯುಮ್ನ ಆನೆಯಾಗಿದ್ದ. ಹಾಗಾಗಿ ಇಬ್ಬರೂ ಪರಾಕ್ರಮಿಯಾಗಿದ್ದರು. ಒಂದು ಸಹಸ್ರ ವರ್ಷಗಳವರೆಗೆ ಈ ಕಾದಾಟ ನಡೆದಿತ್ತು. ಆದರೆ ಯಾರೂ ಸೋಲಲಿಲ್ಲ. ಯಾರೂ ಸಾಯಲೂ ಇಲ್ಲ. ಕೊನೆಗೆ ಗಜೇಂದ್ರನ ದೇಹದ ಶಕ್ತಿ ಕಡಿಮೆಯಾಗುತ್ತಾ ಬಂತು. ಅವನು ಶ್ರೀಹರಿಯನ್ನು ರಕ್ಷಿಸೆಂದು ಬೇಡಿದ.
ಆಗ ಗರುಡಗಮನ ಶ್ರೀವಿಷ್ಣು, ಆ ಸ್ಥಳಕ್ಕೆ ಬಂದು, ತನ್ನ ಚಕ್ರದಿಂದ ಮೊಸಳೆಯ ರುಂಡವನ್ನು ಕತ್ತರಿಸಿದ. ಹೀಗೆ ಗಜೇಂದ್ರ ಬದುಕುಳಿದ. ಕೊನೆಗೆ ಮೊಸಳೆ ರೂಪದಿಂದ ಮುಕ್ತಗೊಂಡ ರುಹು ಗಂಧರ್ವ ಲೋಕಕ್ಕೆ ಹೋದ. ಇತ್ತ ವಿಷ್ಣುವಿನಿಂದ ಮೋಕ್ಷ ಪಡೆದ ಗಜೇಂದ್ರ, ವಿಷ್ಣುವಿನ ಪ್ರೀತಿಯ ಆನೆಯಾಯಿತು.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?