ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗೌಡರ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸರ್ಕಾರ ಪತನಕ್ಕೆ ಕಾರಣ ಅಂತ ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.. ನಂತರ ಜೆಡಿಎಸ್ ನಾಯಕರೂ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಶಿಷ್ಯಂದಿರು ಅಂತ ತಿರುಗೇಟು ನೀಡಿದ್ರು....
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವಾಸ್ತವತೆಯ ಅಧ್ಯಯನ, ಪರಿಹಾರ ಕಾರ್ಯಗಳ ಪರಿಶೀಲನೆ ಹಾಗೂ ಅಗತ್ಯ ನೆರವು ನೀಡುವ ಸಲುವಾಗಿ ಕೆಪಿಸಿಸಿಯಿಂದ 2 ತಂಡಗಳನ್ನು ರಚಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಪ್ರಮುಖ ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಮಾಡಿದ್ದಾರೆ .
ಮಳೆಯಿಂದಾಗಿ ಉತ್ತರ...
ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಗ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಆರ್ಟಿಕಲ್ 370 ರದ್ದತಿ ವಿಚಾರವಾಗಿ, ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪವೆತ್ತಿ ಇಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರವನ್ನು ಇಬ್ಭಾಗ ಮಾಡುವುದರಿಂದ, ಜನಪ್ರತಿನಿಧಿಗಳನ್ನ ಬಂಧಿಸುವುದರಿಂದ ಹಾಗೂ ನಮ್ಮ ಸಂವಿಧಾನವನ್ನ...
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಮಾಜಿ ಸಚಿವ ಜಿ ಟಿ ದೇವೇಗೌಡರು, ಸದ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ. ನನಗೆ ರಾಜಕೀಯ ಸಾಕಾಗಿದೆ. ಇಷ್ಟು ದಿನ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ...
ಬೆಂಗಳೂರು: ಬಿಜೆಪಿ ವಿಶ್ವಾಸಮತ ಯಾಚನೆ ಸಲುವಾಗಿ ಇಂದು ವಿಧಾಸಭಾ ಅಧಿವೇಶನ ನಡೆಯುತ್ತಿದೆ. ಆದರೆ ಆಡಳಿತ ಯಂತ್ರ ಕುಸಿದಿದೆ, ಸ್ಥಗಿತಗೊಂಡಿದೆ ಅದನ್ನು ಸರಿ ಮಾಡಬೇಕು ಅಂತ ಹೇಳುತ್ತಿರುವ ಬಿಜೆಪಿಗೆ ಜನಾದೇಶವೇ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚನೆಗೆ ನಮ್ಮ ವಿರೋಧವಿದೆ ಅಂತ ಕಾಂಗ್ರೆಸ್-ಜೆಡಿಎಸ್ ಆಕ್ಷೇಪಿಸಿವೆ.
ಸದನದಲ್ಲಿ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಪಕ್ಷಗಳು ಕಾಮನ್ ಮಿನಿಮಮ್...
ಬೆಂಗಳೂರು: ನಿನ್ನೆ ರಾತ್ರಿವರೆಗೂ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ದಿಢೀರನೆ ಮುಂಬೈ ಸೇರಿದ್ದಾರೆ. ಶ್ರೀಮಂತ್ ಪಾಟೀಲ್ ರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ವಿಶ್ವಾಸಮತಕ್ಕೆ ಹಾಜರಾಗಲಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಮುಂಬೈನಲ್ಲಿ...
ಬೆಂಗಳೂರು: ಇಂದಿನ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಗೈರಾಗಿದ್ದಾರೆ. ಈ ಮೂಲಕ ತಾವು ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರ ಬದಲಿಸಲ್ಲ ಅನ್ನೋ ಮಾತಿಗೆ ಬದ್ಧರಾಗಿದ್ದಾರೆ. ಆದ್ರೆ ಕೊನೆ ಕ್ಷಣದಲ್ಲಿ ಅತೃಪ್ತರು ಮನಸ್ಸು ಬದಲಿಸಿ ಬರುತ್ತಾರೇನೋ ಎಂಬ ವಿಶ್ವಾಸದಲ್ಲಿದ್ದ ದೋಸ್ತಿಗಳಿಗೆ ನಿರಾಶೆಯಾಗಿದೆ.
ಇದೀಗ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆಯಾಗುತ್ತಿದ್ದು, ಇನ್ನೇನು ಕೆಲವೇ...
ಬೆಂಗಳೂರು: ಇಂದು ಸರ್ಕಾರದ ಅಳಿವು ಉಳಿವಿಗಾಗಿ ನಡೆಯುವ ವಿಶ್ವಾಸಮತಯಾಚನೆಗೆ ದೇಶವೇ ಕಾತುರದಿಂದ ಕಾಯುತ್ತಿದೆ. ಒಂದು ವರ್ಷಗಳ ಕಾಲ ಸರಾಗವಾಗಿ ಆಡಳಿತ ನಡೆಸಿದ್ದ ಮೈತ್ರಿ ಸರ್ಕಾರಕ್ಕೆ ಇಂದು ಪತನಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಬಿಜೆಪಿ ಗೆಲುವು ನಮ್ಮದೇ ಅನ್ನೋ ವಿಶ್ವಾಸದಲ್ಲಿದೆ.
ವಿಧಾನಸಭೆಯಲ್ಲಿ ಇವತ್ತು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ -ಜೆಡಿಎಸ್...
ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಅತೃಪ್ತರ ಪಟ್ಟಿ ಸೇರಿದ್ದ ಕಾಂಗ್ರೆಸ್ ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಕೊನೆಗೂ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆ.
ರಾಜೀನಾಮೆ ಹಿಂಪಡೆಯೋ ಕುರಿತಾಗಿ ಪರೋಕ್ಷವಾಗಿ ಸುಳಿವು ನೀಡಿದ್ದ ಬೆಂಗಳೂರಿನ ಬಿಟಿಎಂ ಲೇಔಟ್ ನ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಇದೀಗ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆಯೋದಾಗಿ...
ಕೋಲಾರ: ಅತೃಪ್ತ ಶಾಸಕರ ಅರ್ಜಿ ಕುರಿತ ತೀರ್ಪು ನಾಳೆಗೆ ಕಾಯ್ದಿರಿಸಿರುವ ಕುರಿತು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾನು ಯಾರಿಗೂ ಸವಾಲ್ ಹಾಕಿಲ್ಲ, ನಾಳಿನ ತೀರ್ಪು ನೋಡಿ ಪ್ರತಿಕ್ರಿಯಿಸ್ತೀನಿ ಅಂತ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನಾನು ಸುಪ್ರೀಂಕೋರ್ಟ್ ಗಿಂತಲೂ ದೊಡ್ಡವನಲ್ಲ. ಅತೃಪ್ತ ಶಾಸಕರ ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ...
ಮಂಡ್ಯ ಜಿಲ್ಲೆಯ ಹಲಗೂರು ವ್ಯಾಪ್ತಿಯ ನಿಟ್ಟೂರು ಸಮೀಪದ ಪ್ರದೇಶದಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ...