Thursday, December 5, 2024

Latest Posts

ಆಂಜನೇಯನಿಗೆ ಯಾಕೆ ಕೆಂಪು, ಕೇಸರಿ ಸಿಂಧೂರವನ್ನು ಅರ್ಪಿಸಲಾಗತ್ತೆ..?

- Advertisement -

ಯಾರಿಗಾದರೂ ಭೂತ ಕಾಟವಿದ್ರೆ, ಜೀವ ಭಯವಿದ್ರೆ, ಅಂಥವರಿಗೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಂತಾ ಹೇಳಲಾಗತ್ತೆ. ಅಲ್ಲಿ ಸಿಗುವ ಕೇಸರಿ ಸಿಂಧೂರವನ್ನ ಮನೆಗೆ ತಂದು, ಪ್ರತಿದಿನ ಸ್ನಾನದ ಬಳಿಕ ಅದನ್ನ ಹಚ್ಚಿಕೊಳ್ಳಲು ಹೇಳಲಾಗತ್ತೆ. ಇದರಿಂದ ಎಲ್ಲ ರೀತಿಯ ಭಯ ಹೋಗಿ, ಧೈರ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಹನುಮಂತನಿಗೆ ಕೇಸರಿ ಅರ್ಪಿಸಲಾಗತ್ತೆ ಅಂತಾ ತಿಳಿಯೋಣ ಬನ್ನಿ..

ತುಳಸಿದಾಸರು,ರಾಮ ಚರಿತ ಮಾನಸದಲ್ಲಿ ಈ ವಿಷಯದ ಬಗ್ಗೆ ಬರೆದಿದ್ದಾರೆ. ಒಮ್ಮೆ ಹನುಮಂತ ಸೀತಾ ದೇವಿಯ ಕೋಣೆಗೆ ಹೋದನಂತೆ. ಅಲ್ಲಿ ಸೀತೆ ತನ್ನ ಹಣೆಗೆ ಸಿಂಧೂರವನ್ನು ಹಚ್ಚಿದ್ದನ್ನ ಕಂಡ ಹನುಮಂತ, ಇದೇನು ಮಾತೆ..? ಎಂದು ಕೇಳಿದನಂತೆ. ಅದಕ್ಕೆ ಸೀತೆ ಇದು ಸಿಂಧೂರ. ಇದನ್ನು ಹಚ್ಚುವುದರಿಂದ ರಾಮನ ಆಯಸ್ಸು ಹೆಚ್ಚುತ್ತದೆ ಎಂದು ಹೇಳಿದಳಂತೆ.

ಅದಕ್ಕೆ ಹನುಮಂತ, ರಾಮನ ಆಯಸ್ಸು ಹೆಚ್ಚಿಸುವುದಕ್ಕೆ ಸೀತೆ ಚೂರೇ ಚೂರು ಸಿಂಧೂರವನ್ನು ಹಣೆಗೆ ಹಚ್ಚುತ್ತಿದ್ದಾಳೆ. ನಾನು ಇಡೀ ದೇಹಕ್ಕೆ ಸಿಂಧೂರವನ್ನು ಹಚ್ಚುತ್ತೇನೆ. ಇದರಿಂದ ಶ್ರೀರಾಮನ ಆಯಸ್ಸು ಇನ್ನೂ ಹೆಚ್ಚುತ್ತದೆ ಎಂದು ಹೇಳಿ, ಹನುಮ ತನ್ನ ಇಡೀ ದೇಹಕ್ಕೆ ಸಿಂಧೂರವನ್ನು ಹಚ್ಚಿಕೊಂಡು, ಶ್ರೀರಾಮನಿದ್ದ ಸಭೆಗೆ ಹೋಗುತ್ತಾನೆ.

ಹನುಮನನ್ನು ನೋಡಿದ ಶ್ರೀರಾಮ, ಏಕೆ ಮೈ ತುಂಬ ಕುಂಕುಮ ಹಚ್ಚಿದ್ದಿ ಎಂದು ಕೇಳುತ್ತಾನೆ. ಅದಕ್ಕೆ ಹನುಮಂತ, ಸ್ವಾಮಿ, ಸೀತಾ ಮಾತೆ ಹೇಳಿದರು, ಸಿಂಧೂರ ಹಚ್ಚುವುದರಿಂದ ನಿಮ್ಮ ಆಯಸ್ಸು ಹೆಚ್ಚುತ್ತದೆ ಎಂದು. ಅದಕ್ಕೆ ನಾನು ನಿಮ್ಮ ಆಯಸ್ಸು ಇನ್ನಷ್ಟು ಹೆಚ್ಚಿಸುವುದಕ್ಕೆ, ನನ್ನ ಮೈ ತುಂಬ ಸಿಂಧೂರ ಹಚ್ಚಿದೆ ಎಂದು ಹೇಳುತ್ತಾನೆ. ಅದಕ್ಕೆ ಶ್ರೀರಾಮ ಖುಷಿಯಿಂದ ಹನುಮನನ್ನು ಅಪ್ಪಿಕೊಳ್ಳುತ್ತಾನೆ. ಇನ್ನು ಹನುಮನ ಪ್ರತಿಮೆಗೆ ಸಿಂಧೂರ ಹಚ್ಚುವುದರಿಂದ ಪ್ರತಿಮೆ ಗಟ್ಟಿಮುಟ್ಟಾಗಿ ಇರುತ್ತದೆ.

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

- Advertisement -

Latest Posts

Don't Miss